ಸಿದ್ದೇಶ್ವರ ಸ್ವಾಮಿಗೆ ಜೀರ್ಣೋದ್ದಾರ - ಆರೂಢ ಪ್ರೆಶ್ನೆಯಲ್ಲಿ ನಡೆದಿದ್ದೇನು!? Siddeshvara gudda

 ಸಿದ್ದೇಶ್ವರ ಸ್ವಾಮಿಗೆ ಜೀರ್ಣೋದ್ದಾರ - ಆರೂಢ ಪ್ರೆಶ್ನೆಯಲ್ಲಿ ನಡೆದಿದ್ದೇನು!?

ಜನರಿಂದಲೇ ಸಂಪತ್ತು ಜನರಿಂದಲೇ ವಿಪತ್ತು - ಸ್ಪೋಟಕ ಹೇಳಿಕೆ ಬಿಚ್ಚಿಟ್ಟ ಆರೂಢ ಪ್ರೆಶ್ನೆ!


ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಆಗಿರುವ ಶ್ರೀ ಸಿದ್ದೇಶ್ವರ ಸ್ವಾಮಿಗೆ ಜೀರ್ಣೋದ್ದಾರ ಆಗಬೇಕು ಎಂಬ ಪಣ ತೊಟ್ಟು ಆರೂಢ ಪ್ರೆಶ್ನೆಯನ್ನು ಹಾಕಿ ನೋಡಿದಾಗ ಜೀರ್ಣೋದ್ದಾರ ಮಾಡುವ ಸಂಕಲ್ಪಕ್ಕಿಂತ ರಕ್ಷಣೆ ಮಾಡುವ ಸಂಕಲ್ಪ ಮಾಡುವುದು ಉತ್ತಮ ಎಂಬುದಾಗಿ ಮೊದಲು ಉತ್ತರ ಬಂದಿದ್ದು ಬೆಟ್ಟವೇ ಒಂದು ದೇವರ ಸಾನಿಧ್ಯ ಆಗಿರುವುದರಿಂದ ಸಂರಕ್ಷಣೆ ಮಾಡುವ ಅಗತ್ಯ ಇದೆ ಎಂದು ತಿಳಿಸಲಾಗಿದೆ.

ತೀರ್ಥಹಳ್ಳಿ ಪಟ್ಟಣ ಸಮೀಪದ ಬಾಳೆಬೈಲಿನ ಬೆಟ್ಟದ ಮೇಲೆ ನೆಲೆಯಾಗಿ ನಿಂತಿರುವ ಶ್ರೀ ಸಿದ್ದೇಶ್ವರ ಸ್ವಾಮಿಯ ಪುನಃ ಪ್ರತಿಷ್ಠಾಪನೆ ಹಾಗೂ ಜೀರ್ಣೋದ್ದಾರ ವಿಚಾರವಾಗಿ ಆರೂಢ ಪ್ರೆಶ್ನೆಯನ್ನು ಹಾಕಲಾಗಿತ್ತು. ತೀರ್ಥಹಳ್ಳಿಯ ವೇ ಬ್ರ ಶ್ರೀ ಲಕ್ಷ್ಮೀಶ ತಂತ್ರಿಗಳ ಮಾರ್ಗದರ್ಶನದಲ್ಲಿ ಉಡುಪಿಯ ಕೊರಂಗರ ಪಾಡಿಯ ವೇ ಬ್ರ ಶ್ರೀ ಕುಮಾರ ಗುರು ತಂತ್ರಿಗಳ ಮೂಲಕ ನೇತೃತ್ವದಲ್ಲಿ ನಡೆದ ಈ ಆರೂಢ ಪ್ರೆಶ್ನೆಯಲ್ಲಿ ಹತ್ತು ಹಲವು ವಿಚಾರಗಳು ಹೊರ ಬಂದವು.


ಈ ಬೆಟ್ಟವೇ ಒಂದು ದೇವರ ಸಾನಿಧ್ಯವಾಗಿದ್ದು ಇಡೀ ಗುಡ್ಡವೇ ಒಂದು ಉದ್ಭವ ಆಗಿರುವುದು ಕಂಡು ಬರುತ್ತಿದೆ. ಒಂದು ಸಂದರ್ಭದಲ್ಲಿ ಎಂದರೆ ಒಂದಾನೊಂದು ಕಾಲದಲ್ಲಿ ಇಡೀ ಗುಡ್ಡಕ್ಕೆ ( ಬೆಟ್ಟಕ್ಕೆ ) ಸುತ್ತು ( ಪ್ರದಕ್ಷಿಣೆ )  ಬರುವ ಸ್ಥಿತಿ ಇತ್ತು. ಇಡೀ ಗುಡ್ಡವೇ ಉದ್ಭವ ಆಗಿರುವ ಕಾರಣ ಪುನಃ ಪ್ರತಿಷ್ಠಾಪನೆ ಮಾಡುವುದು ಬೇಡ. ಸಣ್ಣ ಮಟ್ಟಿನ ಜೀರ್ಣೋದ್ದಾರ ಮಾಡಬೇಕು ಎಂಬುವುದು ಸಹ ಬೇಡ, ಅದಕ್ಕೆ ಇನ್ನು ಕೂಡ ಸಮಯ ಒದಗಿ ಬಂದಿಲ್ಲ ಎಂದು ತಿಳಿಸಲಾಯಿತು.

ದೇವಸ್ಥಾನ ಜೀರ್ಣೋದ್ದಾರ ಮಾಡಿ ಸಂಪೂರ್ಣ ಬದಲಾವಣೆ ಮಾಡುವುದು ಬೇಡ. ಅದರ ಬದಲಾಗಿ ದೇವಸ್ಥಾನದ ಸಂರಕ್ಷಣೆ ಮಾಡುವ ಕೆಲಸ ಮಾಡಬಹುದು. ಬಹಳ ದೊಡ್ಡ ದೇವಸ್ಥಾನ ಕಟ್ಟುವ ಆಲೋಚನೆ ಬೇಡ. ಆದರೆ ಈ ದೇವಸ್ಥಾನಕ್ಕೆ ನಿಧಿ ಸಂಪತ್ತು ಯಾವಾಗಲು ಬರುತ್ತದೆ. ಅದು ಸರ್ಕಾರದ ವತಿಯಿಂದ ಅಥವಾ ರಾಜಕೀಯ ಮುಖಂಡರಿಂದ ಬಹು ದೊಡ್ಡ ಹಣ ಬರುವ ಸಾಧ್ಯತೆ ಇದೆ. ದೇವಸ್ಥಾನದಿಂದಲೂ ಸಂಪತ್ತು ಆಗಲಿದೆ.  ಆದರೆ ಬರುವ ಯಾವುದೇ ಹಣ ಸಂಪತ್ತು ಅಲ್ಲಿಂದ ಅಲ್ಲಿಗೆ ಆಗಲಿದೆ ಹೊರತು ಯಾವುದು ಉಳಿಯುವುದಿಲ್ಲ ಎಂದು ತಿಳಿಸಿದರು.

ಅಗಸ್ತ್ಯ ಮುನಿಗಳಿಂದ ತಿಳಿದು ದೇವತೆಗಳಿಂದ ಪ್ರತಿಷ್ಠಾಪನೆ ಒಳಪಟ್ಟ ದೇವಸ್ಥಾನ ಇದಾಗಿದೆ.ಇಲ್ಲಿ ಕೆಲವು ಅಸಹ್ಯ ಕ್ರಿಯೆ ನಡೆದಿರುವುದು ದೇವರಿಗೆ ಬೇಸರ ಇದೆ. ಅದನ್ನು ತಡೆಗಟ್ಟುವ ಕೆಲಸ ಆಗಬೇಕಿದೆ. ಪ್ರಮುಖವಾಗಿ ಗುಡ್ಡ, ಹಾಗೂ ದೇವಸ್ಥಾನವನ್ನು ರಕ್ಷಣೆ ಮಾಡುವುದು ಮೊದಲ ಕೆಲಸ ಆಗಬೇಕಿದೆ. ಇಲ್ಲಿ ದೇವರು ಓಡಾಟ ಮಾಡುತ್ತಾ ಇರುತ್ತಾರೆ. ಪ್ರತಿನಿತ್ಯ ಪೂಜೆ, ನೈವೈದ್ಯ ಮಾಡದಿದ್ದರೂ ಸಹ ದೇವರಿಗೆ ಹಸಿವಾಗುತ್ತಿಲ್ಲ ಎಂದರೆ ದೀಪೋತ್ಸವದಲ್ಲಿ ನೀವು ಮಾಡುವ ಅನ್ನಸಂತರ್ಪಣೆಯಲ್ಲಿ ದೇವರೇ ಬಂದು ಅನ್ನ ಪ್ರಸಾದ ಸ್ವೀಕಾರ ಮಾಡುತ್ತಿದ್ದಾನೆ. ಹಾಗಾಗಿ ಊಟ ಮಾಡಲು ಬರುವ ಭಕ್ತರನ್ನು ಅತ್ಯಂತ ಗೌರವದಿಂದ ಸತ್ಕರಿಸಿ ಎಂದು ತಿಳಿಸಿದರು.



ದೇವರಿಗೆ ಪೂಜೆ ವಿಚಾರದಲ್ಲಿ ಏನೇ ವ್ಯವಸ್ಥೆ ಮಾಡಿದರು ಸಹ ಸರಿ ಆಗುತ್ತಿಲ್ಲ. ಅಲ್ಲಿನ ಪೂಜೆ ವ್ಯವಸ್ಥೆಯೇ ಬೇರೆಯಾಗಿದೆ. ಅಲ್ಲಿಗೆ ಈಗಲೂ ಸಹ ಋಷಿಗಳು ಬಂದು ತಪ್ಪಸ್ಸು ಮಾಡಿ ಹೋಗುವ ಕಾರಣದಿಂದ ಅವರಿಗೆ ಭಂಗ ತರುವುದು ಬೇಡ.ಈಗ ಹೇಗೆ ವರ್ಷಕ್ಕೊಮ್ಮೆ ಕಾರ್ತಿಕ ಮಾಸದಲ್ಲಿ ಪೂಜೆ ಮತ್ತು ಅನ್ನಸಂತರ್ಪಣೆ ಮಾಡುತ್ತಿದ್ದೀರೋ ಹಾಗೆ ಪೂಜೆ ನೆರವೇರಿಸಿ. ಇನ್ನು ಹನ್ನೆರಡು ವರ್ಷಕ್ಕೊಮ್ಮೆ ವಿಶೇಷ ಪೂಜೆ ಮಾಡಿ ಎಂದು ತಿಳಿಸಿದರು.

ಈ ದೇವರ ಸಾನಿಧ್ಯಕ್ಕೆ ಮಠದ ಗುರುಗಳ ಶ್ರೀ ರಕ್ಷೆ ಇದೆ.  ಈಗ ಹೇಳಿರುವ ಪರಿಪೂರ್ಣ ಕೆಲಸ ನಿರ್ವಹಿಸಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ಹೇಳಿ ಆರೂಢ ಪ್ರೆಶ್ನೆಯನ್ನು ಮುಗಿಸಲಾಯಿತು.




Previous Post Next Post