ಪ್ರತಿಭಾ ಕಾರಂಜಿಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿ ಶಾಲಾ ವಿದ್ಯಾರ್ಥಿಗಳು
ತೀರ್ಥಹಳ್ಳಿ : ಶಿಕ್ಷಣ, ಕ್ರೀಡೆಯಲ್ಲಿ ಅಷ್ಟೇ ಅಲ್ಲದೆ ಪ್ರತಿಯೊಂದು ವಿಷಯದಲ್ಲೂ ನಾವು ಮುಂದೆ ಎಂದು ವಾಗ್ದೇವಿ ಶಾಲಾ ವಿದ್ಯಾರ್ಥಿಗಳು ತೋರಿಸಿ ಕೊಟ್ಟಿದ್ದಾರೆ.
ಇದನ್ನು ಓದಿ - ಮತ್ತೊಮ್ಮೆ ಬದಲಾವಣೆಯಾದ ವಾಗ್ದೇವಿ ಶಿಕ್ಷಣ ಸಂಸ್ಥೆಯ ಬೆಳ್ಳಿ ಹಬ್ಬದ ಕಾರ್ಯಕ್ರಮ!
ಹೌದು ಶಿವಮೊಗ್ಗದಲ್ಲಿ ನಡೆದ ಜಿಲ್ಲಾಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಗಳಾದ ಸಾನಿಕ ಎಂ ಹೆಗಡೆ ಸಂಸ್ಕೃತ ಧಾರ್ಮಿಕ ಪಠಣದಲ್ಲಿ, ಶೀತಲ್ ಬಿ ವಿ ಕನ್ನಡ ಪ್ರಬಂಧದಲ್ಲಿ, ಆರನೇ ತರಗತಿ ವಿದ್ಯಾರ್ಥಿ ಆಯುಷ್ ಎಚ್ ವೈ ಆಶುಭಾಷಣ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇನ್ನು ಏಳನೇ ತರಗತಿಯ ಸಾನ್ವಿ ಜೋಯ್ಸ್ ಇಂಗ್ಲಿಷ್ ಕಂಠಪಾಠದಲ್ಲಿ ತೃತೀಯ ಸ್ಥಾನವನ್ನು ಪಡೆದಿದ್ದಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಸಂಸ್ಥೆಯ ಅಧ್ಯಕ್ಷರು, ಶಿಕ್ಷಕರು, ಪೋಷಕರು ಅಭಿನಂದನೆಗಳನ್ನು ತಿಳಿಸಿದ್ದಾರೆ.
