ಮತ್ತೊಮ್ಮೆ ಬದಲಾವಣೆಯಾದ ವಾಗ್ದೇವಿ ಶಿಕ್ಷಣ ಸಂಸ್ಥೆಯ ಬೆಳ್ಳಿ ಹಬ್ಬದ ಕಾರ್ಯಕ್ರಮ! ಯಾವಾಗ?
ತೀರ್ಥಹಳ್ಳಿ : ವಾಗ್ದೇವಿ ಶಿಕ್ಷಣ ಸಂಸ್ಥೆಯ ಬೆಳ್ಳಿ ಹಬ್ಬದ ಕಡೆಯ ದಿನದ ಪುಟಾಣಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಡಿ. 13 ರ ಶುಕ್ರವಾರ ಸಂಜೆಗೆ ಮುಂದೂಡಲಾಗಿತ್ತು. ಆದರೆ ಅಂದಿನ ಬದಲಾಗಿ ಡಿ. 15 ರ ಭಾನುವಾರ ನಡೆಸಲು ತೀರ್ಮಾನಿಸಲಾಗಿದೆ.
ಡಿ. 10 ರ ಮಂಗಳವಾರ ಸಂಜೆ ಮೇಲಿನಕುರುವಳ್ಳಿಯ ವಾಗ್ದೇವಿ ಕಾಲೇಜು ಆವರಣದಲ್ಲಿ ನಡೆಯಬೇಕಿದ್ದ ವಾಗ್ದೇವಿ ಬೆಳ್ಳಿ ಹಬ್ಬದ ಕಡೆಯ ದಿನದ ಪುಟಾಣಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣರವರ ನಿಧನದಿಂದ ಡಿ. 13 ರ ಶುಕ್ರವಾರ ಸಂಜೆಗೆ ಮುಂದೂಡಲಾಗಿತ್ತು.
ಆದರೆ ಕೆಲವೊಂದು ಕಾರಣಾಂತರದಿಂದ ಪುಟಾಣಿ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವನ್ನು ಶುಕ್ರವಾರ ಸಂಜೆಯ ಬದಲಾಗಿ ಭಾನುವಾರ ಸಂಜೆ ಕಾಲೇಜು ಆವರಣದಲ್ಲಿ ನಡೆಯಲಿದೆ. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ತಿಳಿಸಿದ್ದಾರೆ.
