ಜೋಗಕ್ಕೆ ಹೊರಟಿದ್ದ ಬಸ್ ಪಲ್ಟಿ- ಹಲವರಿಗೆ ಗಾಯ
ಸಾಗರ : ಮಂಗಳೂರಿನಿಂದ ಜೋಗಕ್ಕೆ ಹೊರಟಿದ್ದ ಖಾಸಗಿ ಬಸ್ ಸಾಗರದ ಮುಪ್ಪಾನೆ ಬಳಿ ಪಲ್ಟಿಯಾಗಿ ಬಿದ್ದಿದ್ದು ಬಸ್ ನಲ್ಲಿದ್ದ 15 ರಿಂದ 20 ಪ್ರಯಾಣಿಕರಿಗೆ ಗಾಯಗಳಾಗಿದ್ದು, ಅವರನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನಿಂದ ಭಟ್ಕಳ ಮತ್ತು ಜೋಗಕ್ಕೆ ಬರುತ್ತಿದ್ದ ಖಾಸಗಿ ಟ್ರಾವೆಲ್ಸ್ ಬಸ್ ಸಾಗರದ ಮುಪ್ಪಾನೆ ಬಳಿ ತಿರುವಿನಲ್ಲಿ ಪಲ್ಟಿಯಾಗಿದೆ. ಅತಿಯಾದ ವೇಗದಲ್ಲಿ ಬಂದ ಬಸ್ ತಿರುವಿನಲ್ಲಿ ಬ್ರೇಕ್ ಹಾಕಿದ ಪರಿಣಾಮ ಬಸ್ ಪಲ್ಟಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.
ಬಸ್ ನಲ್ಲಿ 50 ಜನ ಪ್ರಯಾಣಿಕರಿದ್ದು ಇದರಲ್ಲಿ 15-20 ಜನರಿಗೆ ಗಾಯವಾಗಿದೆ. ಇವರನ್ನ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾರ್ಗಲ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
