ತುಂಗಾ ತೀರದಲ್ಲಿ ಕಳೆದ ಬಾರಿ ರಾಮಮಂದಿರ ಈ ಬಾರಿ ಏನು ಗೊತ್ತಾ..!? Jatre

ತುಂಗಾ ತೀರದಲ್ಲಿ ಕಳೆದ ಬಾರಿ ರಾಮಮಂದಿರ ಈ ಬಾರಿ ಏನು ಗೊತ್ತಾ..!?


ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದ ಎಳ್ಳಮವಾಸೆ ಜಾತ್ರೆಯು ಇದೆ ಡಿಸೆಂಬರ್ 30.31 ಹಾಗೂ ಜ. 1 ರಂದು ಅತ್ಯಂತ ವೈಭವದಿಂದ ನಡೆಯಲಿದೆ. ಡಿ 28 ರಿಂದ ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದ್ದು 30 ರಂದು ತೀರ್ಥಸ್ನಾನ, 31 ರಂದು ಬ್ರಹ್ಮರಥೋತ್ಸವ, ಜ. 1 ರಂದು ಅದ್ದೂರಿ ತೆಪ್ಪೋತ್ಸವ ನಡೆಯಲಿದೆ.

ಈಗಾಗಲೇ  ಎಳ್ಳಮ್ಮಾವಾಸ್ಯೆ ಜಾತ್ರೆಗೆ ತಯಾರಿ ನಡೆಯುತ್ತಿದ್ದು ಡಿ. 19ರ ಗುರುವಾರದಿಂದ ಹೊರೆಕಾಣಿಕೆ ವಾಹನ ತಾಲೂಕಿನಾದ್ಯಂತ ಸಂಚರಿಸಲಿದೆ. ಪ್ರತಿನಿತ್ಯ ತಾಲೂಕಿನ ಯಾವ ಭಾಗದಲ್ಲಿ ಸಂಚರಿಸಲಿದೆ ಎಂಬುದನ್ನು ಶಿವಮೊಗ್ಗ ಸುದ್ದಿಯಲ್ಲಿ ಪ್ರಕಟಿಸಲಾಗುತ್ತದೆ.

ತುಂಗಾ ತೀರದಲ್ಲಿ ಕಳೆದ ಬಾರಿ ರಾಮಮಂದಿರ ಈ ಬಾರಿ ಏನು..!?



ಹೌದು ಎಳ್ಳಮ್ಮಾವಾಸ್ಯೆ ಜಾತ್ರೆಯ ವಿಶೇಷ ಆಕರ್ಷಣೆಯಲ್ಲಿ ತುಂಗಾ ನದಿ ತೀರದಲ್ಲಿ ಹಾಕುವ ವಿದ್ಯುತ್ ದೀಪಾಲಂಕಾರ. ಕಳೆದ ಬಾರಿ ರಾಮಮಂದಿರವನ್ನು ವಿದ್ಯುತ್ ದೀಪಾಲಂಕಾರದ ಮೂಲಕ ಹಾಕಲಾಗಿತ್ತು. ಈ ಬಾರ ಈಶ್ವರನಿಗೆ ಸಂಬಂಧಪಟ್ಟದ್ದನ್ನು ವಿದ್ಯುತ್ ದೀಪಾಲಂಕಾರದ ಮೂಲಕ ಹಾಕಲಾಗುತ್ತದೆ. ಈಗಾಗಲೇ ಎಲ್ಲಾ ತಯಾರಿ ನಡೆದಿದ್ದು ಎಂ ಎಸ್ ಡೆಕೊರೇಟರ್ಸ್  ಮಾಲೀಕರಾದ ತಬ್ರೆಜ್ ಆಸೀಫ್ ( ಮುನ್ನ ).ಅವರ ನೇತೃತ್ವದಲ್ಲಿ ಈ ಅಲಂಕಾರ ಮಾಡಲಾಗುತ್ತದೆ.

ಹೌದು ಕಳೆದ ಬಾರಿ ಅಯೋಧ್ಯೆಯಲ್ಲಿ ರಾಮಮಂದಿರದ ಉದ್ಘಾಟನೆಯಾಗಿದ್ದ ಹಿನ್ನಲೆಯಲ್ಲಿ ರಾಮಮಂದಿರವನ್ನೇ ಇಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿತ್ತು ಈ ಬಾರಿ ಕೊಯಮತ್ತೂರಿನ ಇಶಾ ಫೌಂಡೇಶನ್ ಕಾಂಪ್ಲೆಕ್ಸ್‌ನಲ್ಲಿರುವ ಆದಿಯೋಗಿ ಶಿವನ ಪ್ರತಿಮೆಯನ್ನು ವಿದ್ಯುತ್ ದೀಪಾಲಂಕಾರದ ಮೂಲಕ ಮಾಡಲು ತಯಾರಿ ಮಾಡಲಾಗುತ್ತಿದೆ.ಒಟ್ಟಿನಲ್ಲಿ ಕಳೆದ ಬಾರಿಯಂತೆ ಈ ಬಾರಿ ಸಹ ಜನರ ಕಣ್ಮನ ಸೆಳೆಯುವ ಆಕರ್ಷಣೆಯ ಕೇಂದ್ರ ಬಿಂದು ತುಂಗಾ ತೀರ ಆಗಲಿದೆ.








Previous Post Next Post