ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್ trafic jam

 ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್ 



ತೀರ್ಥಹಳ್ಳಿ : ಒಂದೆರಡು ವಾಹನಗಳು ಕೆಟ್ಟು ನಿಂತ ಪರಿಣಾಮ ಸಂಪೂರ್ಣ ಟ್ರಾಫಿಕ್ ಜಾಮ್ ಆಗಿ ವಾಹನ ಸವಾರರು ಪರದಾಟ ನಡೆಸಿರುವ ಘಟನೆ ತಾಲೂಕಿನ ಆಗುಂಬೆ ಘಾಟಿಯಲ್ಲಿ ನಡೆದಿದೆ.


ಎರಡು ಮತ್ತು ಐದನೇ ತಿರುವಿನಲ್ಲಿ ಎರಡೆರಡು ಕಾರುಗಳು ಮಧ್ಯ ರಸ್ತೆಯಲ್ಲಿ ಕೆಟ್ಟು ನಿಂತ ಪರಿಣಾಮ ಟ್ರಾಫಿಕ್ ಜಾಮ್ ಆಗಿದೆ ಎಂಬ ಮಾಹಿತಿ ತಿಳಿದು ಬಂದಿದೆ. ಅದರಲ್ಲೂ ಸಹ ಇಂದು ಭಾನುವಾರ ಆಗಿರುವ ಕಾರಣ ವಾಹನಗಳ ದಟ್ಟನೆ ಹೆಚ್ಚಾಗಿರುವುದರಿಂದ ಮತ್ತಷ್ಟು ಟ್ರಾಫಿಕ್ ಜಾಮ್ ಆಗಿದೆ.


ಆಗುಂಬೆ ಪೊಲೀಸರು ವಾಹನ ಸಂಚಾರ ಸುಗಮಗೊಳಿಸಲು ಪ್ರಯತ್ನಿಸುತ್ತಿದ್ದು ವಾಹನ ಹೆಚ್ಚಾಗಿರುವುದರಿಂದ ಪರದಾಟ ನಡೆಸುವಂತಾಗಿದೆ.

Previous Post Next Post