ನಾಗರೀಕರ ಆರೋಗ್ಯವನ್ನು ನೋಡಿಕೊಳ್ಳುವುದು ಜನಪ್ರತಿನಿಧಿಗಳಾದ ನಮ್ಮ ಕರ್ತವ್ಯ - ರೆಹಮತ್ ಉಲ್ಲಾ ಅಸಾದಿ muncipal

ನಾಗರೀಕರ ಆರೋಗ್ಯವನ್ನು ನೋಡಿಕೊಳ್ಳುವುದು ಜನಪ್ರತಿನಿಧಿಗಳಾದ ನಮ್ಮ ಕರ್ತವ್ಯ - ರೆಹಮತ್ ಉಲ್ಲಾ ಅಸಾದಿ 


ತೀರ್ಥಹಳ್ಳಿ  : ಒಳ್ಳೆಯ ಆಡಳಿತ ಕೊಡಬೇಕೆಂದು ಸಾರ್ವಜನಿಕರು ಪ್ರತಿನಿಧಿಗಳನ್ನು ಆರಿಸುತ್ತಾರೆ. ಆಡಳಿತ ಭಾಗವೇನೆಂದರೆ ಕೇವಲ ಸ್ವಚ್ಛತೆ ಕುಡಿಯುವ ನೀರು, ರಸ್ತೆ ಕಾಮಗಾರಿ, ವಿದ್ಯುತ್ ಉಪಕರಣ ಸರಿಪಡಿಸುವಿಕೆ ಅಷ್ಟೇ ಅಲ್ಲದೇ ಪ್ರತಿಯೊಬ್ಬ ನಾಗರೀಕರ ಆರೋಗ್ಯವನ್ನು ನೋಡಿಕೊಳ್ಳುವುದು ಜನಪ್ರತಿನಿಧಿಗಳಾದ ನಮ್ಮ ಕರ್ತವ್ಯ ಎಂದು ಪಟ್ಟಣ ಪಂಚಾಯತಿ ಅಧ್ಯಕ್ಷರಾದ ರೆಹಮತ್ ಉಲ್ಲಾ ಅಸಾದಿ ತಿಳಿಸಿದರು.


ಭಾನುವಾರ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಆರೋಗ್ಯ ಶಿಬಿರದಲ್ಲಿ ಮಾತನಾಡಿ ಬೀದಿ ವ್ಯಾಪಾರಿಗಳಿಗೆ ಕೇಂದ್ರ ಸರ್ಕಾರ ನೀಡುವ ಯೋಜನೆಗಳಲ್ಲಿ ಒಂದಾದ  ಡೇನಲ್ಮ್ ಯೋಜನೆಯಿಂದ ಈ ಶಿಬಿರ ನಡೆಸಿದ್ದೇವೆ.  ಆರೋಗ್ಯ ಶಿಬಿರ ನಡೆಸಲು ಒಂದೇ ವಾರದಲ್ಲಿ ತೀರ್ಮಾನಿಸಿ ಆದರ್ಶ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯರ ಬಳಿ ಮಾತನಾಡಿದಾಗ ಕನಿಷ್ಠ ಐದುನೂರು ಮಂದಿ ಶಿಬಿರದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದ್ದರು. ಆದರೆ ಇಲ್ಲಿನ ಮಾಧ್ಯಮದವರ ಪ್ರಚಾರದ ಸಹಕಾರದಿಂದ ಎಂಟುನೂರ ಐವತ್ತಕ್ಕೂ ಹೆಚ್ಚು ಮಂದಿ ಶಿಬಿರದಲ್ಲಿ ಭಾಗಿಯಾಗಿ 460 ಕ್ಕೂ ಹೆಚ್ಚು ಮಂದಿ ಈಸಿಜಿ ಮಾಡಿಸಿದ್ದಾರೆ ಎಂದು ತಿಳಿಸಿದರು. 



ಈಗಾಗಲೇ ನಾನು ಅಧ್ಯಕ್ಷನಾದ ನಂತರ ನಾಲ್ಕು ತಿಂಗಳೊಳಗೆ ಪೌರ ಕಾರ್ಮಿಕರನ್ನು ಸನ್ಮಾನಿಸುವ ಉದ್ದೇಶದಿಂದ ಪೌರ ಕಾರ್ಮಿಕರ ದಿನಾಚರಣೆ, ಸರ್ಕಾರಿ ಇಲಾಖೆಯ ಅಧಿಕಾರಿಗಳ ಕ್ರಿಕೆಟ್ ಟೂರ್ನಮೆಂಟ್, ಮೋಹನ್ ಆಳ್ವಾ ಅವರ ನೇತೃತ್ವದಲ್ಲಿ ಆಳ್ವಾಸ್ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಈಗ ಸಾರ್ವಜನಿಕರಿಗೆ ಉಪಯೋಗವಾಗುವ ಆರೋಗ್ಯ ಶಿಬಿರವನ್ನು ನಡೆಸಿದ್ದೇವೆ. ಮುಂದಿನ ದಿನಗಳಲ್ಲಿಯೂ ಸಹ ಸಾರ್ವಜನಿಕರಿಗೆ ಉಪಯೋವಾಗಿವಂತಹ ಕಾರ್ಯಕ್ರಮವನ್ನು ನಡೆಸಿಕೊಡುತ್ತೇವೆ ಎಂದು ತಿಳಿಸಿದರು.

Previous Post Next Post