ಶ್ರೀ ರಾಮೇಶ್ವರ ದೇವಸ್ಥಾನದ ಹೊರೆ ಕಾಣಿಕೆಗಾಗಿ ನಾಳೆ ಹೋಗುವ ಮಾರ್ಗಗಳು ಯಾವುದು!?
ತೀರ್ಥಹಳ್ಳಿ : ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರವೃಂದದ ವತಿಯಿಂದ ಹದಿನೈದು ವರ್ಷಗಳಿಂದ ನಿರಂತರವಾಗಿ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಮೂರು ದಿನಗಳ ಅನ್ನದಾಸೋಹಕ್ಕೆ ತಾಲೂಕಿನ ಎಲ್ಲಾ ಸದ್ಭಕ್ತರು ಪಾಲ್ಗೊಳ್ಳಲು ರಾಮೇಶ್ವರ ದೇವಸ್ಥಾನ ವತಿಯಿಂದ ಹೊರಕಾಣಿಕೆ ವಾಹನ ಈಗಾಗಲೇ ಸಂಚಾರ ಆರಂಭಿಸಿದೆ
ನಾಳೆ (23-12-24) ರಂದು ತೀರ್ಥಹಳ್ಳಿ ಪಟ್ಟಣದ ಮಾರ್ಕೆಟ್ ರಸ್ತೆ, ಹೈ ಸ್ಕೂಲ್ ರಸ್ತೆ, ಶಂಕರಗುಡ್ಡ, ಕುಶಾವತಿ, KC ರಸ್ತೆ, ಹಿಂದೂ ರುದ್ರಭೂಮಿ ರಸ್ತೆ, ಹೊಸಕೊಪ್ಪ, ಕಮಕಾರು, ಕೊಕ್ಕೋಡ್ತಿ, ಮುನ್ನೂರು, ಕೋಮನೆ, ಅಲಬಳ್ಳಿ, ಹುಣಸವಳ್ಳಿ, ಕಲ್ಯಾಣಿ ಅಗ್ರಹಾರ, ಬಿಳಿಗೆರೆ, ವಿಠಲನಗರ (ಡಿಪ್ಪೋ), ಗೆರಸ, ಬಿಲಗ, ಹೆಗ್ಗೆಬೈಲು, ಅರಳಸುರಳಿ, ನೊಣಬೂರು, ಅಂಬುತೀರ್ಥ, ಖಂಡಕ, ಅಗ್ರಹಾರ, ಆರಗ, ಕಡೇಗದ್ದೆ, ಬೀಸು, ಗುಡ್ಡೆಕೊಪ್ಪ, ಮರಗಳಲೆ, ದವಣೆಬೈಲ್, ಜಯಪುರ, ಹಿರೇಸರ, ಆರಗ ಗೇಟ್, ಹಿರೇಗದ್ದೆ, ತುಡನ್ಕಲ್ ಸುರಾನಿ, ನೆರಟೂರು, ಸರಳ, ಸಂಕದಹೊಳೆ,ಭಾಗದಲ್ಲಿ ಸಂಚರಿಸಲಿದೆ
ಸದ್ಭಕ್ತರು ತಮ್ಮ ಮನೆಯಲ್ಲಿ ಬೆಳೆದ ದವಸ ಧಾನ್ಯ ತರಕಾರಿ ಅಕ್ಕಿ, ಕಾಯಿ ಇನ್ನಿತರ ವಸ್ತುಗಳನ್ನು ಹಸಿರು ಹೊರೆ ಕಾಣಿಕೆ ರೂಪದಲ್ಲಿ ಕೊಡುವುದರ ಮೂಲಕ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅನ್ನ ದಾಸೋಹ ಮಿತ್ರ ವೃಂದ ಸಮಿತಿಯವರು ವಿನಂತಿಸಿದ್ದಾರೆ.

