ಎಳ್ಳಮ್ಮಾವಾಸ್ಯೆ ಜಾತ್ರೆಯಲ್ಲಿ ಕಣ್ಮನ ಸೆಳೆಯಲಿದೆ ಸೆಲ್ಫಿ ಸ್ಪಾಟ್ ! Selfi spot

ಎಳ್ಳಮ್ಮಾವಾಸ್ಯೆ ಜಾತ್ರೆಯಲ್ಲಿ ಕಣ್ಮನ ಸೆಳೆಯಲಿದೆ ಸೆಲ್ಫಿ ಸ್ಪಾಟ್ ! 


ಗಾಂಧಿಚೌಕದಲ್ಲೊಂದು ಸೆಲ್ಫಿ ಬೋರ್ಡ್‌ ಅದೇನು!?


ತೀರ್ಥಹಳ್ಳಿ : : ಗಾಂಧಿಚೌಕದ ಕಲ್ಲಾರೆ ಗಣಪತಿ ದೇವಸ್ಥಾನದ ಎದುರು ಭಾಗದಲ್ಲಿರುವ ಚಿಕ್ಕ ಪಾರ್ಕ್ ನಲ್ಲಿ ಹಿಂದೆ ಅಶೋಕ ಸ್ತಂಭ ಇದ್ದಂತಹ ಜಾಗದಲ್ಲಿ ಈ ಬಾರಿ ಜಾತ್ರೆಯ ಪ್ರಯುಕ್ತ ಸೆಲ್ಫಿ ಸ್ಪಾಟ್ ಮಾಡಲು ಪಟ್ಟಣಪಂಚಾಯತಿ ವತಿಯಿಂದ ತೀರ್ಮಾನಿಸಿದ್ದು ಜಾತ್ರೆಗೆ ಬರುವ ಯುವಕ ಯುವತಿಯರಿಗೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಸುಂದರವಾದ ಅವಕಾಶ ನಿರ್ಮಿಸಲಾಗುತ್ತಿದೆ.

ಹೌದು ಈಗಾಗಲೇ ಶಿವಮೊಗ್ಗ, ಸಾಗರ, ಶಿರಾಳಕೊಪ್ಪದಲ್ಲಿ ಇರುವ ಹಾಗೆ ತೀರ್ಥಹಳ್ಳಿಯಲ್ಲೂ ಸಹ " ಐ ಲವ್ ತೀರ್ಥಹಳ್ಳಿ " ಎಂಬ ಫಲಕ ಹಾಕಲು ನಿರ್ಧಾರ ಮಾಡಲಾಗಿದ್ದು ಜಾತ್ರೆಯಿಂದ ಈ ಫಲಕ ಅಧಿಕೃತವಾಗಿ ಬೀಳುತ್ತದೆ. ಇದರಿಂದ ಜಾತ್ರೆಗೆ ಆಗಮಿಸುವ ಜನರಿಗೆ ಅದರಲ್ಲೂ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಯುವ ಜನತೆಗೆ ಇದು ಹಾಟ್ ಸ್ಪಾಟ್ ಆಗುವ ಸಾಧ್ಯತೆ ಇದೆ.

ಈ ನಾಮಫಲಕ ಹಾಕಲು ಗೀತಾರಮೇಶ್ ಅವರ ಅಧ್ಯಕ್ಷತೆಯಲ್ಲೇ ತೀರ್ಮಾನಿಸಲಾಗಿದ್ದರೂ ನಾಮಫಲಕ ಹಾಕಲು ಆಗಿರಲಿಲ್ಲ. ಈಗ ರಹಮತ್ ಉಲ್ಲಾ ಅಸಾದಿ ಅವರ ಅಧ್ಯಕ್ಷತೆಯಲ್ಲಿ ಐ ಲವ್ ತೀರ್ಥಹಳ್ಳಿ ನಾಮಫಲಕ ಬೀಳಲಿದೆ.






Previous Post Next Post