ಕಾರು - ಬಸ್ ಡಿಕ್ಕಿ - ಇಬ್ಬರು ಸ್ಥಳದಲ್ಲೇ ಸಾವು! Sagara

 ಕಾರು - ಬಸ್ ಡಿಕ್ಕಿ - ಇಬ್ಬರು ಸ್ಥಳದಲ್ಲೇ ಸಾವು!



ಸಾಗರ : ಕಾರು ಮತ್ತು ಬಸ್‌ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಗರ ತಾಲೂಕು ಆನಂದಪುರದ ಮುರುಘಮಠದ ಸಮೀಪ ಇಂದು ಬೆಳಗ್ಗೆ ಘಟನೆ ಸಂಭವಿಸಿದೆ.

ಕಾರು ಸಾಗರದಿಂದ ಶಿವಮೊಗ್ಗ ಕಡೆಗೆ ತೆರಳುತ್ತಿತ್ತು. ಬಸ್ಸು ಶಿವಮೊಗ್ಗದಿಂದ ಸಾಗರ ಕಡೆಗೆ ತೆರಳುತ್ತಿತ್ತು. ಇಬ್ಬರು ಮೃತಪಟ್ಟಿದ್ದು ಅವರ ಗುರುತು ಇನ್ನಷ್ಟೆ ಪತ್ತೆ ಆಗಬೇಕಿದೆ. ಸ್ಥಳಕ್ಕೆ ಆನಂದಪುರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದು ಬರಬೇಕಿದೆ.








Previous Post Next Post