ನಂದಿ ಧ್ವಜಾರೋಹಣ ಮೂಲಕ ಎಳ್ಳಮಾವಾಸ್ಯೆ ಜಾತ್ರೆಗೆ ಚಾಲನೆ Jatre

ನಂದಿ ಧ್ವಜಾರೋಹಣ ಮೂಲಕ ಎಳ್ಳಮಾವಾಸ್ಯೆ ಜಾತ್ರೆಗೆ ಚಾಲನೆ

ನಂದಿ ಧ್ವಜಾರೋಹಣ ವೇಳೆ ಗರುಡ ದರ್ಶನ


ತೀರ್ಥಹಳ್ಳಿ : ಸಾವಿರಾರು ವರ್ಷ ಇತಿಹಾಸವಿರುವ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರಿಗೆ ಐದು ದಿನಗಳ ಕಾಲ ವಿಶೇಷ ಪೂಜೆಯನ್ನು ಸಲ್ಲಿಸುತ್ತಿದ್ದು ಈ ಐದು ದಿನಗಳ ಎಳ್ಳಮಾವಾಸ್ಯೆ ಜಾತ್ರೆಗೆ ನಂದಿ ಧ್ವಜಾರೋಹಣ ಮಾಡುವ ಮೂಲಕ ಚಾಲನೆ ನೀಡಿದ್ದೇವೆ ಎಂದು ತೆಪ್ಪೋತ್ಸವ ಸಮಿತಿ ಸಂಚಾಲಕರಾದ ಸೊಪ್ಪುಗುಡ್ಡೆ ರಾಘವೇಂದ್ರ ಹೇಳಿದರು.

ರಾಮೇಶ್ವರ ದೇವಸ್ಥಾನದಲ್ಲಿ ನಂದಿ ಧ್ವಜಾರೋಹಣದ ನಂತರ ಮಾಧ್ಯಮದ ಜೊತೆಗೆ ಮಾತನಾಡಿ ಮೊದಲನೇ ದಿವಸ ದೇವರಿಗೆ ಫಲನ್ಯಾಸ, ಪುಣ್ಯಾಹ, ದೇವಾನಾಂದಿ, ವೃಷಾಧಿವಾಸ ಹೋಮ ನಂತರ ಧ್ವಜಾರೋಹಣ ಮಾಡಲಾಗಿದೆ. ಸಂಜೆ ಕೂಡ ಹೋಮ ಹವನಗಳು ನಡೆಯಲಿವೆ ಎಂದರು.



ಪ್ರತಿವರ್ಷ ಲಕ್ಷಾಂತರ ಜನರು ಈ ಜಾತ್ರೆಗೆ ಹೊರ ಊರುಗಳಿಂದಲೂ ಆಗಮಿಸುತ್ತಾರೆ. ಮೂರು ದಿನಗಳ ಕಾಲ ಅಂದರೆ ಡಿ. 30 ತೀರ್ಥಸ್ನಾನ, ಡಿ. 31 ರಥೋತ್ಸವ, ಜ 1. ತೆಪ್ಪೋತ್ಸವ ಜರುಗಲಿದೆ.  ಈ ಮೂರು ದಿನಗಳ ಕಾಲ ಲಕ್ಷಾಂತರ ಭಕ್ತರಿಗೆ ಅನ್ನಸಂತರ್ಪಣೆ ಕೂಡ ನಡೆಯಲಿದೆ ಎಂದರು.

ಮಾಜಿ ಪ್ರಧಾನಿಗಳ ನಿಧನದ ಹಿನ್ನಲೆಯಲ್ಲಿ ಜಾತ್ರೆ ಆಗುತ್ತದೆಯೋ ಇಲ್ಲವೋ ಎಂಬ ಅನುಮಾನಗಳು ಹಲವರಿಗೆ ಇತ್ತು. ಆದರೆ ಸಾಂಸ್ಕೃತಿಕ ಕಾರ್ಯಕ್ರಮ ಹೊರತು ಪಡಿಸಿ ಉಳಿದ ಧಾರ್ಮಿಕ ಕಾರ್ಯಕ್ರಮ ಎಲ್ಲವೂ ನಡೆಯಲಿದೆ. ಇನ್ನು ತೆಪ್ಪೋತ್ಸವದ ದಿನ ಅತ್ಯಂತ ವೈಭವದಿಂದ ಸಿಡಿಮದ್ದಿನ ಪ್ರದರ್ಶನ ನಡೆಯಲಿದೆ ಎಂದರು.

ಈ ಸಂದರ್ಭದಲ್ಲಿ ಪ. ಪಂ ಉಪಾಧ್ಯಕ್ಷರಾದ ಗೀತಾ ರಮೇಶ್, ಸದಸ್ಯರಾದ ಜ್ಯೋತಿ ಮೋಹನ್, ರತ್ನಾಕರ್ ಶೆಟ್ಟಿ, ಬಿ. ಗಣಪತಿ, ಜಿಲ್ಲಾ ಧಾರ್ಮಿಕ ಸಮಿತಿ ನಿರ್ದೇಶಕರಾದ ವರಲಕ್ಷ್ಮಿ, ಜ್ಯೋತಿ ದಿಲೀಪ್ ಸೇರಿ ಹಲವರು ಉಪಸ್ಥಿತರಿದ್ದರು.









Previous Post Next Post