ಎಳ್ಳಮಾವಾಸ್ಯೆ ಜಾತ್ರೆ - ಸಾಂಸ್ಕೃತಿಕ ಕಾರ್ಯಕ್ರಮ ರದ್ದು - ಆರಗ ಜ್ಞಾನೇಂದ್ರ jatre

ಎಳ್ಳಮಾವಾಸ್ಯೆ ಜಾತ್ರೆ - ಸಾಂಸ್ಕೃತಿಕ ಕಾರ್ಯಕ್ರಮ ರದ್ದು - ಆರಗ ಜ್ಞಾನೇಂದ್ರ 


ತೀರ್ಥಹಳ್ಳಿ : ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಧಾರ್ಮಿಕ ವಿಧಿ ವಿಧಾನಗಳು ಇಂದಿನಿಂದ ನೆರವೇರುತ್ತಲಿದೆ. ಎಲ್ಲರು ಸೇರಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಚಾಲನೆ ನೀಡಿದ್ದೇವೆ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.

ಶನಿವಾರ ರಾಮೇಶ್ವರ ದೇವಸ್ಥಾನದಲ್ಲಿ ಮಾತನಾಡಿದ ಅವರು ಡಿ.30 ರಂದು ಪರಶುರಾಮನ ಕೊಂಡದಲ್ಲಿ ತೀರ್ಥಸ್ನಾನ, ಡಿ.31ರಂದು ರಥೋತ್ಸವ, ಜ 1 ರಂದು ತೆಪ್ಪೋತ್ಸವ ಜರುಗಲಿದೆ. ಸಾವಿರಾರು ಜನರು ಈ ಜಾತ್ರೆಗೆ ಆಗಮಿಸಲಿದ್ದಾರೆ. ಕಡೆಯ ದಿನದ ತೆಪ್ಪೋತ್ಸವ ಅತ್ಯಂತ ಅದ್ದೂರಿಯಾಗಿ ನಡೆಯಲಿದೆ ಎಂದರು.


ಮಾನ್ಯ ಮಾಜಿ ಪ್ರಧಾನಿಗಳ ನಿಧನದಿಂದ ಎರಡು ಸಾಂಸ್ಕೃತಿಕ ಕಾರ್ಯಕ್ರಮ ರದ್ದಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮ ಹೊರತು ಪಡಿಸಿ ಉಳಿದ ಎಲ್ಲಾ ಕಾರ್ಯಕ್ರಮಗಳು ಅತ್ಯಂತ ವೈಭವದಿಂದ ನಡೆಯಲಿದೆ ಎಂದು ತಿಳಿಸಿದರು.







Previous Post Next Post