ರಥಬೀದಿಯಲ್ಲಿ ನಾಳೆಯಿಂದ ವಾಹನ ಸಂಚಾರ ನಿಷೇಧ! Jatre

ರಥಬೀದಿಯಲ್ಲಿ ನಾಳೆಯಿಂದ ವಾಹನ ಸಂಚಾರ ನಿಷೇಧ! 

ಪೊಲೀಸ್ ಪ್ರಕಟಣೆಯಲ್ಲಿ ಇನ್ನು ಏನೇನಿದೆ?



ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವರ ಎಳ್ಳಮಾವಾಸ್ಯೆ ಜಾತ್ರೆಯ ಅಂಗವಾಗಿ ಪಟ್ಟಣದಲ್ಲಿ ಹಲವಾರು ನಿಯಮಗಳನ್ನು ಪೊಲೀಸ್ ಇಲಾಖೆ ಅಳವಡಿಕೆ ಮಾಡಿದ್ದು ಸಾರ್ವಜನಿಕರೆಲ್ಲರೂ ಸಹ ಇದಕ್ಕೆ ಸಹಕರಿಸಬೇಕೆಂದು ಮನವಿ ಮಾಡಲಾಗಿದೆ.


ರಥ ಬೀದಿಯಲ್ಲಿ ನಾಳೆ ಬೆಳಗ್ಗೆಯಿಂದ ವಾಹನ  ಸಂಚಾರವನ್ನು ಹಾಗೂ ನಿಲುಗಡೆ ನಿಷೇಧ ಮಾಡಲಾಗಿದೆ. ರಥೋತ್ಸವ ಹಾಗೂ ತೆಪ್ಪೋತ್ಸವದ ದಿನ ಪಟ್ಟಣ ಪಂಚಾಯತ್ ಆವರಣ , ಜೂನಿಯರ್ ಕಾಲೇಜು ಆವರಣ ಹಾಗೂ ಸಾರ್ವಜನಿಕರ ಕ್ರೀಡಾಂಗಣದಲ್ಲಿ ವಾಹನ ನಿಲುಗಡೆಗಾಗಿ ಜಾಗ ನಿಗದಿಪಡಿಸಲಾಗಿದೆ.

ಜಾತ್ರೆಯ ಸಲುವಾಗಿ ರಥಬೀದಿ ಹಾಗೂ ಸುತ್ತ ಮುತ್ತ 30 ಸಿ ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಅತೀ ಹೆಚ್ಚು ಜನ ಸಂದಣಿಯಾಗುವ ಕಾರಣದಿಂದ ಮುಂಜಾಗ್ರತಾ ಕ್ರಮವಾಗಿ ಡಿವೈಎಸ್'ಪಿ ಗಜಾನನ ವಾಮನ ಸುತಾರ ಇವರ ನೇತೃತ್ವದಲ್ಲಿ ಎಂಟು ಮಂದಿ ಸಬ್ ಇನ್ಸ್ಪೆಕ್ಟರ್, ಮೂರು ಮಂದಿ ಇನ್ಸ್ಪೆಕ್ಟರ್ , ಹಾಗೂ 200 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.

ಬಹು ಮುಖ್ಯವಾಗಿ ಸಾರ್ವಜನಿಕರು ವಾಹನ ಸಂಚಾರ ಹಾಗೂ ನಿಲುಗಡೆಗೆ ಸಹಕರಿಸಲು ಮನವಿ ಮಾಡಲಾಗಿದೆ.








Previous Post Next Post