ಶ್ರೀ ರಾಮೇಶ್ವರ ದೇವಸ್ಥಾನದ ಹೊರೆ ಕಾಣಿಕೆಗಾಗಿ ನಾಳೆ ಹೋಗುವ ಮಾರ್ಗಗಳು ಯಾವುದು!?
ತೀರ್ಥಹಳ್ಳಿ : ಶ್ರೀ ರಾಮೇಶ್ವರ ಅನ್ನದಾಸೋಹ ಮಿತ್ರವೃಂದದ ವತಿಯಿಂದ ಹದಿನೈದು ವರ್ಷಗಳಿಂದ ನಿರಂತರವಾಗಿ ಎಳ್ಳಮಾವಾಸ್ಯೆ ಜಾತ್ರೆಯಲ್ಲಿ ಮೂರು ದಿನಗಳ ಅನ್ನದಾಸೋಹಕ್ಕೆ ತಾಲೂಕಿನ ಎಲ್ಲಾ ಸದ್ಭಕ್ತರು ಪಾಲ್ಗೊಳ್ಳಲು ರಾಮೇಶ್ವರ ದೇವಸ್ಥಾನ ವತಿಯಿಂದ ಹೊರಕಾಣಿಕೆ ವಾಹನ ಈಗಾಗಲೇ ಸಂಚಾರ ಆರಂಭಿಸಿದೆ
ನಾಳೆ (24-12-24) ರಂದು ಬುಕ್ಲಾಪುರ, ಮಾಣಿ, ಮೇಲಿನಕುರುವಳ್ಳಿ, ತಳುವೆ, ತಿರಳೆಬೈಲ್, ರೇಷ್ಮೆ ಫಾರಂ, ಸೋಮೇಶ್ವರ, ಕುಂಬಾರದಡಿಗೆ, ಕುರುವಳ್ಳಿ, ಕುರುವಳ್ಳಿ ಮುಖ್ಯರಸ್ತೆ, ಬಿ ಅಗ್ರಹಾರ, ಹೆನ್ನಂಗಿ, ಮೃಗಾವಧೆ, ಶೇಡಗಾರು, ಹೊಸಳ್ಳಿ, ಹೆದ್ದೂರ್, ಕುಂಚೇರಿ, ಕಟ್ಟೆಹಕ್ಕಲು, ಬೊಮ್ಮನಹಳ್ಳಿ, ಹೆರಂಭಾಪುರ, ಬಸರವಳ್ಳಿ, ಮಂಗಳಗಾರು, ಹುಲಿಮಂಡೆ, ಹೊಸಕೊಪ್ಪ, ಆಲ್ಮನೆ, ಕೂಳೂರು, ಹಾದಿಗಲ್ಲು, ಕೋಣಂದೂರು, ಶೀಕೆ ರಸ್ತೆ, ಮಕ್ಕಿಬೈಲು, ದೆಮ್ಮಲಾಪುರ, ಮಲ್ಲಿಗೆಕಟ್ಟೆ, ಉಡುಕೆರೆ, ಹುಲ್ಲತ್ತಿ, ಮಂಗಳ, ಕೌರಿಕಾನ್, ಕೋಟೆಗದ್ದೆ, ತ್ಯಾನಂದೂರು ಭಾಗದಲ್ಲಿ ಹಸಿರು ಹೊರೆಕಾಣಿಕೆ ಸಂಗ್ರಹಿಸಲಿದೆ.
ಸದ್ಭಕ್ತರು ತಮ್ಮ ಮನೆಯಲ್ಲಿ ಬೆಳೆದ ದವಸ ಧಾನ್ಯ ತರಕಾರಿ ಅಕ್ಕಿ, ಕಾಯಿ ಇನ್ನಿತರ ವಸ್ತುಗಳನ್ನು ಹಸಿರು ಹೊರೆ ಕಾಣಿಕೆ ರೂಪದಲ್ಲಿ ಕೊಡುವುದರ ಮೂಲಕ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಅನ್ನ ದಾಸೋಹ ಮಿತ್ರ ವೃಂದ ಸಮಿತಿಯವರು ವಿನಂತಿಸಿದ್ದಾರೆ.
