ತೀರ್ಥಹಳ್ಳಿಯ ಜಾತ್ರಾ ಸಮಯದಲ್ಲಿ ರಥಬೀದಿಯಲ್ಲಿ ಹಗಲು ದರೋಡೆ ನಡೆಯುತ್ತಾ..!?
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಐತಿಹಾಸಿಕ ಹಿನ್ನಲೆಯುಳ್ಳ ಪರಶುರಾಮ ಪ್ರತಿಷ್ಠಾಪಪಿಸಲ್ಪಟ್ಟ, ದಕ್ಷಿಣದ ಕಾಶಿ ಎಂದೇ ಖ್ಯಾತಿ ಪಡೆದ ತೀರ್ಥಹಳ್ಳಿಯ ಎಳ್ಳಮ್ಮವಾಸ್ಯೆ ಜಾತ್ರೆ ಬಹಳ ವಿಜೃಂಭಣೆಯಿಂದ ಪ್ರತಿ ವರ್ಷ ಮೂರು ದಿನಗಳ ಪರ್ಯಂತ ನೆಡೆಯುತ್ತದೆ.
ಇದನ್ನು ಓದಿ - ತೆಪ್ಪೋತ್ಸವಕ್ಕೆ ಸೊಪ್ಪುಗುಡ್ಡೆ ರಾಘವೇಂದ್ರ ಹಾಗೂ ಡಾ ಸುಂದರೇಶ್ ಜಂಟಿ ಸಾರಥಿಗಳು !
ಈ ಎಳ್ಳಮ್ಮವಾಸ್ಯೆ ಜಾತ್ರೆಗೆ ಲಕ್ಷಾಂತರ ಜನ ಸೇರುತ್ತಾರೆ. ರಥಬೀದಿಯ ರಾಮೇಶ್ವರ ದೇವಸ್ಥಾನದಿಂದ ಗಾಂಧಿ ಚೌಕದವರೆಗೆ ಜನರು ಕಿಕ್ಕಿರಿದು ಸೇರಿರುತ್ತಾರೆ. ಜಾತ್ರೆಯ ಕಳೆಯನ್ನು ಹೆಚ್ಚಿಸಲು ನಾನಾ ಭಾಗಗಳಿಂದ ಅಂಗಡಿ ಮುಂಗಟ್ಟು ಗಳನ್ನು ಹಾಕಲು ವ್ಯಾಪಾರಸ್ಥರು ರಥಬೀದಿಗೆ ಬರುತ್ತಾರೆ.
ವ್ಯಾಪಾರಸ್ಥರಿಗೆ ರಥಬೀದಿಯಲ್ಲಿರುವ ಪ. ಪಂ ಸುಪರ್ಧಿಗೆ ಸೇರಿದ ರಸ್ತೆಯ ಅಕ್ಕಪಕ್ಕದ ಜಾಗಕ್ಕೆ ಆ ಸ್ಥಳದಲ್ಲಿರುವ ಮನೆಯ ಮಾಲೀಕರು ಹಾಗೂ ಅಂಗಡಿ ಮಾಲೀಕರು ಜಾತ್ರೆಗಾಗಿ ಬಂದಿರುವ ವ್ಯಾಪಾರಸ್ಥರಿಗೆ ಹಣಕ್ಕಾಗಿ ಡಿಮ್ಯಾಂಡ್ ಇಡುತ್ತಾರೆ.
ಅಬ್ಬಬ್ಬಾ ಅದು ಅಷ್ಟಿಷ್ಟಲ್ಲ... ಕೇಳಿದ್ರೆ ನಿಜಕ್ಕೂ ಬೆಚ್ಚಿ ಬೀಳುತ್ತೀರಾ... ಇದು ಸತ್ಯವೂ ಹೌದು.
ಜಾತ್ರೆಗಾಗಿ ವ್ಯಾಪಾರಸ್ಥರಿಗೆ ಅಂಗಡಿ ಹಾಕಲು ಜಾಗ ನೀಡಬೇಕೆಂದರೆ ಲಕ್ಷಾಂತರ ಹಣ ನೀಡಬೇಕಾಗಿದೆ. ಒಂದು ವೇಳೆ ಕೇಳಿದಷ್ಟು ಹಣ ನೀಡದಿದ್ದರೆ ಅವರಿಗೆ ಜಾಗ ಇಲ್ಲವೆಂದು ಹೇಳುತ್ತಾರೆ. ಎಲ್ಲೂ ಜಾಗ ಸಿಗದಿದ್ದಾಗ ಆ ವ್ಯಾಪಾರಿಯೂ ಜಾಗಕ್ಕಾಗಿ ಕೇಳಿದಷ್ಟು ಹಣ ನೀಡಿ ಲಾಭವೋ ನಷ್ಟವೋ ಅಂಗಡಿ ಮಳಿಗೆಯನ್ನು ಹಾಕುತ್ತಾರೆ. ಆದರೆ ಜಾತ್ರೆ ಮುಗಿದ ನಂತರ ವ್ಯಾಪಾರಸ್ಥರು ಹಿಂತಿರುವಾಗ ಈ ದುಬಾರಿ ವೆಚ್ಚ ತೆಗೆದುಕೊಂಡ ವಿಷಯವನ್ನು ತುಂಬಾ ವೈಭವಿ ಕರಿಸಿ ಸಿಕ್ಕ ಸಿಕ್ಕ ಅಂಗಡಿ ಮುಂಗಟ್ಟುಗಳಲ್ಲಿ ಚರ್ಚೆ ಮಾಡುತ್ತಾರೆ.
ಹೇಳಿ ಕೇಳಿ ತೀರ್ಥಹಳ್ಳಿ ಸುಸಂಸ್ಕೃತ ಊರು, ಪ್ರಜ್ಞಾವಂತರ ನಾಡು ಎಂಬ ಹೆಗ್ಗಳಿಕೆ ಇದ್ದರೂ ಇಂತಹ ವಿಚಾರದಿಂದ ತೀರ್ಥಹಳ್ಳಿಗೆ ಕಪ್ಪು ಚುಕ್ಕೆಯಾಗುತ್ತಿರುವುದು ವಿಷಾಧನಿಯ.ಈ ರೀತಿ ಹಲವು ವರ್ಷಗಳಿಂದ ನಡೆದುಕೊಂಡು ಬಂದಿದ್ದರು ಇಲ್ಲಿಯವರೆಗೆ ಸರಿಪಡಿಸುವ ಕೆಲಸ ಯಾರು ಮಾಡದೇ ಇರುವುದು ವಿಪರ್ಯಾಸ. ಇನ್ನಾದರೂ ಪ. ಪಂ ಆಡಳಿತ ಇದರ ಬಗ್ಗೆ ಇಚ್ಚೆತ್ತುಕೊಂಡು ಹೊರ ಊರಿನಿಂದ ಬರುವ ವ್ಯಾಪಾರಸ್ಥರಿಗೆ ದುಬಾರಿ ವೆಚ್ಚ ಆಗದಂತೆ ಕಡಿವಾಣ ಹಾಕುತ್ತಾರ? ಎಂಬುದು ಕಾದು ನೋಡಬೇಕಿದೆ.
