ಕೆಲಸದ ದಿನವೂ ಬಾಗಿಲು ಬಂದ್ ಮಾಡುವ ಕಾರ್ಮಿಕ ಇಲಾಖೆ ಕಚೇರಿ..! ಕಾರ್ಮಿಕರ ಪರದಾಟ Labor Office

ಕೆಲಸದ ದಿನವೂ ಬಾಗಿಲು ಬಂದ್ ಮಾಡುವ ಕಾರ್ಮಿಕ ಇಲಾಖೆ ಕಚೇರಿ..! ಕಾರ್ಮಿಕರ ಪರದಾಟ 


ತೀರ್ಥಹಳ್ಳಿ : ಕಾರ್ಮಿಕರ ಸಹಾಯಕ್ಕಾಗಿ ಇರುವಂತಹ ಕಾರ್ಮಿಕರ ಇಲಾಖೆಯ ಕಚೇರಿಯೂ ಸರ್ಕಾರಿ ರಜೆ ಇರದ ಸಮಯದಲ್ಲೂ ಬಾಗಿಲು ಹಾಕಿದ್ದು ಇದರಿಂದ ಕೆಲಸಕ್ಕಾಗಿ ಬಡ ಕಾರ್ಮಿಕರು ಪರದಾಟ ನಡೆಸುವ ಸ್ಥಿತಿ ಬಂದಿದೆ.

ಈ ಹಿಂದೆ ಮುಖ್ಯ ಬಸ್ ನಿಲ್ದಾಣದ  ಸಮೀಪದ  ಕಾಂಗ್ರೆಸ್ ಕಚೇರಿ ಮೇಲ್ಭಾಗದಲ್ಲಿ ಕಾರ್ಮಿಕ ಇಲಾಖೆ ಕಛೇರಿ ಇತ್ತು. ನಂತರ ಅದನ್ನು ಗ್ರಾಮೀಣಾಭಿವೃದ್ಧಿ ಭವನಕ್ಕೆ ಸ್ಥಳಾಂತರ ಮಾಡಲಾಗಿದ್ದು ಕೆಲಸದ ನಿಮಿತ್ತವಾಗಿ ಹೊರ ಹೋಗುತ್ತಿದ್ದೇವೆ ಎಂಬ ಚೀಟಿಯನ್ನು ಬಾಗಿಲಿಗೆ ಅಂಟಿಸಿ ಬೀಗ ಹಾಕಿ ಅಧಿಕಾರಿಗಳು ಹೊರ ಹೋಗುತ್ತಾರೆ.

ಆದರೆ ಕೆಲಸದ ನಿಮಿತ್ತವಾಗಿ ಬರುವಂತಹ ಕಾರ್ಮಿಕರಿಗೆ ಯಾರ ಬಳಿ ಕೇಳಬೇಕು ಎಂಬ ಪ್ರಶ್ನೆ ಒಂದೆಡೆಯಾದರೆ ಬೀಗ ಹಾಕಿರುವ ಬಾಗಿಲನ್ನೇ ನೋಡಿಕೊಂಡು ಕಾರ್ಮಿಕರು ವಾಪಸ್ ಆಗುತ್ತಿದ್ದಾರೆ. ಒಟ್ಟಿನಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಬಡ ಕಾರ್ಮಿಕರು ಪರದಾಟ ನಡೆಸುವಂತಾಗಿದೆ .

ಹೀಗೆ ಮುಂದುವರೆದರೆ ಕಾರ್ಮಿಕ  ಇಲಾಖೆ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಕಾರ್ಯಕರ್ತರಾದ ಜೈಕರ್ ಶೆಟ್ಟಿ ತಿಳಿಸಿದ್ದಾರೆ.





Previous Post Next Post