ಮಾಸ್ತಿಕಟ್ಟೆ ಸುಬ್ರಮಣ್ಯರವರ ತಂತ್ರ - ಮೂಡುಗೊಪ್ಪ ನೀಲಕಂಠೇಶ್ವರ ಸೊಸೈಟಿ ಚುನಾವಣೆಯಲ್ಲಿ ಗೆಲುವು hosanagara

ಮಾಸ್ತಿಕಟ್ಟೆ ಸುಬ್ರಮಣ್ಯರವರ ತಂತ್ರ - ಮೂಡುಗೊಪ್ಪ ನೀಲಕಂಠೇಶ್ವರ ಸೊಸೈಟಿ ಚುನಾವಣೆಯಲ್ಲಿ ಗೆಲುವು


ಹೊಸನಗರ : ತಾಲೂಕಿನ ಮೂಡುಗೊಪ್ಪ ನೀಲಕಂಠೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮತ್ತು ಕರುಣಾಕರ ಶೆಟ್ಟಿ ನೇತೃತ್ವದ ತಂಡವು ಭರ್ಜರಿ ಗೆಲುವು ಸಾಧಿಸಿದೆ.

 

ತಾಲೂಕಿನ ಮೂಡುಗೊಪ್ಪದಲ್ಲಿ ಇರುವಂತ ನೀಲಕಂಠೇಶ್ವರ ವ್ಯವಸಾಯ ಸೇವಾ ಸಹಕಾರ ಸಂಘದ ಚುನಾವಣೆ ಭಾನುವಾರ ನಡೆಯಿತು. ಈ ಚುನಾವಣೆಯಲ್ಲಿ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ನ ಭರವಸೆಯ ಯುವ ಮುಖಂಡ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ನೇತೃತ್ವದ ತಂಡಕ್ಕೆ ಭರ್ಜರಿ ಜಯ ಸಾಧಿಸಿದೆ. 

ಭಾನುವಾರ ನಡೆದ ನಿಲಕಂಠೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ನಗರ ಹೋಬಳಿಯ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಅವರ ಸಾರಥ್ಯದ ಕಾಂಗ್ರೆಸ್ ಬೆಂಬಲಿತ 7 ಸದಸ್ಯರು ಆಯ್ಕೆಯಾಗಿದ್ದಾರೆ. ನಗರ ಭಾಗದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು ಅಂತಹ ಬಿಜೆಪಿ ಭದ್ರಕೋಟೆಯನ್ನು ಛಿದ್ರ ಮಾಡುವ ಮೂಲಕ ಆಡಳಿತ ಚುಕ್ಕಾಣಿ ಹಿಡಿಯುವತ್ತ ಹೆಜ್ಜೆ ಇರಿಸಿದ್ದಾರೆ.

ಈ ವೇಳೆ ಮಾಧ್ಯಮದ ಜೊತೆಗೆ ಮಾತನಾಡಿದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಅವರು ನಗರ ಹೋಬಳಿಯ ಜನತೆ ನಮ್ಮ ಮೇಲೆ ಇಟ್ಟ ವಿಶ್ವಾಸದ ಪ್ರತೀಕವಾಗಿ ಈ ಗೆಲುವು ಸಾಧ್ಯವಾಗಿದೆ. ನಮ್ಮ ನಾಯಕರಾಗಿರುವ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಹಾಗೂ ಸಹಕಾರಿ ಧುರೀಣ ಆರ್ ಎಂ ಮಂಜುನಾಥ ಗೌಡರ ಸಂಪೂರ್ಣ ಆಶೀರ್ವಾದದಿಂದ ಹಾಗೂ ಜನತೆಯ ಪ್ರೀತಿ ವಿಶ್ವಾಸದಿಂದ ಈ ಗೆಲುವು ಸಾಧ್ಯವಾಗಿದೆ‌. ಮುಂದಿನ ದಿನಗಳಲ್ಲಿ ಇನ್ನಷ್ಟು ಸೇವೆ ಮಾಡುವ ಮೂಲಕ ಜನತೆಯ ಋಣ ತೀರಿಸುತ್ತೇವೆ. ನಿರಂತರವಾಗಿ ನಮ್ಮ ಮೇಲೆ ಆಶೀರ್ವಾದವಿರಲಿ ಎಂದು ತಿಳಿಸಿದರು.



Previous Post Next Post