ಕುಡುಮಲ್ಲಿಗೆ ವ್ಯವಸಾಯ ಸೇವಾ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆ - ಸಹಕಾರ ಭಾರತಿ ತೆಕ್ಕೆಗೆ
ತೀರ್ಥಹಳ್ಳಿ : ಕುಡುಮಲ್ಲಿಗೆ ವ್ಯವಸಾಯ ಸೇವಾ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿಯ ಅಭ್ಯರ್ಥಿಗಳ ಅಭೂತಪೂರ್ವವಾಗಿ ವಿಜಯಶಾಲಿಗಳಾಗಿ ಆಡಳಿತದ ಚುಕ್ಕಾಣಿ ಹಿಡಿಯುವಲ್ಲಿ ಸಹಕಾರ ಭಾರತಿ ತಂಡ ಯಶಸ್ವಿ ಆಗಿದೆ.
ಸಹಕಾರ ಭಾರತೀಯ ಈ ಐತಿಹಾಸಿಕ ಜಯದಲ್ಲಿ ಸಾಲಗಾರ ಕ್ಷೇತ್ರದ 11 ಸ್ಥಾನಗಳಲ್ಲಿ 10 ಸ್ಥಾನ ಗೆಲುವು ದಾಖಲಿಸಿದೆ. ಒಟ್ಟು 12 ಸ್ಥಾನಗಳಲ್ಲಿ 10 ಸ್ಥಾನವನ್ನು ತನ್ನದಾಗಿಸಿಕೊಂಡ ಹಿನ್ನಲೆಯಲ್ಲಿ ನೂತನ ನಿರ್ದೇಶಕರಾಗಿ ಆಯ್ಕೆಯ ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷರಾದ ಪ್ರಶಾಂತ್ ಕುಕ್ಕೆ ಸಹಕಾರ ಭಾರತಿ ತಂಡಕ್ಕೆ ಮತ ನೀಡಿದ ಸಮಸ್ತ ಷೇರುದಾರ ರೈತ ಬಾಂಧವರಿಗೆ ಈ ಮೂಲಕ ದನ್ಯವಾದಳನ್ನು ತಿಳಿಸಿದ್ದಾರೆ.
ಸಹಕಾರ ಭಾರತಿ ರೈತರಿಗೆ ದೊರೆಯುವ ಎಲ್ಲ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ರೈತ ಬಂಧುಗಳ ಕೃಷಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯಗಳನ್ನು ತಲುಪಿಸುವ ಪ್ರಾಮಾಣಿಕ ಪ್ರಯತ್ನವನ್ನು ಸಹಕಾರ ಭಾರತೀಯ ತಂಡ ಮಾಡುತ್ತದೆ ಎಂದು ಈ ಮೂಲಕ ತಿಳಿಸಿದ್ದಾರೆ
