ರಾಮೇಶ್ವರ ದೇವಸ್ಥಾನದ ಆವರಣದ ಜೋಡಿ ನಾಗರಕಟ್ಟೆಯಲ್ಲಿ ಷಷ್ಠಿ ದೀಪೋತ್ಸವ
ತೀರ್ಥಹಳ್ಳಿ: ಪಟ್ಟಣದ ರಥಬೀಯ ಶ್ರೀ ರಾಮೇಶ್ವರ ದೇವಸ್ಥಾನದ ಆವರಣದಲ್ಲಿರುವ ಜೋಡಿ ನಾಗರಕಟ್ಟೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಸುಬ್ರಮಣ್ಯ ಷಷ್ಠಿ ಅಂಗವಾಗಿ ದೀಪೋತ್ಸವ ನಡೆಯಲಿದೆ.
ಇಂದು ರಾತ್ರಿ 8ಕ್ಕೆ ಸರಿಯಾಗಿ ಸಾರ್ವಜನಿಕ ದೀಪೋತ್ಸವ, ಮಹಾ ಮಂಗಳಾರತಿ ಹಾಗೂ ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಲಿದೆ. ಮಾನ್ಯ ಭಕ್ತ ಮಹಾಶಯರು ಈ ಎಲ್ಲಾ ದೇವತಾ ಕಾರ್ಯಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು, ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಜೋಡಿ ನಾಗರಕಟ್ಟೆ ಸಮಿತಿ ಕೋರಿದೆ.
%20(4)%20(10)%20(2).jpg)