ಮೇಲಿನಕುರುವಳ್ಳಿ ಮಂಜುನಾಥ್ ಶೆಟ್ಟಿ ನಿಧನ tth

 ಮೇಲಿನಕುರುವಳ್ಳಿ ಮಂಜುನಾಥ್ ಶೆಟ್ಟಿ ನಿಧನ 



ತೀರ್ಥಹಳ್ಳಿ : ತಾಲೂಕಿನ ಮೇಲಿನ ಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಲಿನ ಕುರುವಳ್ಳಿಯ ಮಂಜುನಾಥ್ ಶೆಟ್ಟಿ (ಮಂಜಣ್ಣ )75 ವರ್ಷ ಅನಾರೋಗ್ಯದಿಂದ ಶನಿವಾರ ಇಂದು ಬೆಳಿಗ್ಗೆ ನಿಧನರಾಗಿದ್ದಾರೆಂದು ತಿಳಿದುಬಂದಿದೆ.


ಇವರು ಮೇಲಿನ ಕುರುವಳ್ಳಿಯ ಹೆಸರಾಂತ ಕಲ್ಲು ಗುತ್ತಿಗೆದಾರರಾದ ಶಂಕರ ಶೆಟ್ಟಿರವರ ಸಹೋದರರಾಗಿದ್ದು ಮೃತರು ಐದು ದಶಕಗಳ ಕಾಲಕ್ಕೂ ಹೆಚ್ಚು ಕಾಲ ಡ್ರೈವರ್ ವೃತ್ತಿ ಮಾಡಿಕೊಂಡು ತಮ್ಮ ಜೀವನ ನಿರ್ವಹಣೆ ಮಾಡುತ್ತಿದ್ದರು. 


ಮೃತರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿ, ಸಹೋದರರರು, ಮೊಮ್ಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಪಾರ್ಥಿವ ಶರೀರವನ್ನು ಮೃತರ ಸ್ವಗೃಹದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿದ್ದು ಇಂದು ಮಧ್ಯಾಹ್ನ 4 ಗಂಟೆಗೆ ಸಮಯದಲ್ಲಿ ಪಟ್ಟಣದ ತುಂಗಾ ನದಿ ತೀರದಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಎಂದು ಕುಟುಂಬ ಮೂಲಗಳಿಂದ ತಿಳಿದುಬಂದಿದೆ.

Previous Post Next Post