ತಳುವೆ ಸಮೀಪ ಬೈಕ್ ನಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ! Bike

ತಳುವೆ ಸಮೀಪ ಬೈಕ್ ನಿಂದ ಬಿದ್ದು ಗಂಭೀರ ಗಾಯಗೊಂಡ ವ್ಯಕ್ತಿ!


ತೀರ್ಥಹಳ್ಳಿ : ರಸ್ತೆಯಲ್ಲಿ ದನವೊಂದು ಏಕಾಏಕಿ ಅಡ್ಡ ಬಂದ ಪರಿಣಾಮ ನಿಯಂತ್ರಣ ತಪ್ಪಿದ ಬೈಕ್ ನಿಂದ ಬಿದ್ದ ಸವಾರ ಗಂಭೀರ ಗಾಯಗೊಂಡ ಘಟನೆ ತಳುವೆ ಸಮೀಪ ನಡೆದಿದೆ.

ಇದನ್ನು ಓದಿ - ಕುಡಿದು ವಾಹನ ಚಲಾಯಿಸುವವರಿಗೆ ಬಿಸಿಮುಟ್ಟಿಸಿದ ತೀರ್ಥಹಳ್ಳಿ ಪೊಲೀಸರು!



ಶನಿವಾರ ಮಧ್ಯಾಹ್ನ ತಾಲೂಕಿನ ತಳುವೆಯ ನರ್ಸರಿ ಬಳಿ ಈ ಅಪಘಾತವಾಗಿದ್ದು ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ. ಭೀಮನಕಟ್ಟೆಯ ನಿವಾಸಿ ಎಂದು ತಿಳಿದು ಬಂದಿದ್ದು ಆತ ಅಡಕೆ ಕೊನೆ ತೆಗೆಯಲು ಹೋಗಿ ವಾಪಾಸ್ ತೀರ್ಥಹಳ್ಳಿಗೆ ಬರುವ ವೇಳೆ ಈ ಅವಘಡ ಸಂಭವಿಸಿದೆ.

ಬೈಕ್ ಮುಂಭಾಗ ಸಂಪೂರ್ಣ ನುಜ್ಜು ಗುಜ್ಜಾಗಿದ್ದು ಆತನನ್ನು ತೀರ್ಥಹಳ್ಳಿ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದು ಬಂದಿದೆ.





Previous Post Next Post