ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಆಶ್ರಯದಲ್ಲಿ
ಡಿ.22ಕ್ಕೆ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ
ತೀರ್ಥಹಳ್ಳಿ : ಪಟ್ಟಣ ಪಂಚಾಯಿತಿ ಡೇನ್ಮಲ್ ಯೋಜನೆ, ಜಿಲ್ಲಾಕೌಶಲ್ಯಾಭಿವೃದ್ಧಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಇವರ ಆಶ್ರಯದಲ್ಲಿ ಉಡುಪಿಯ ಆದರ್ಶ ಆಸ್ಪತ್ರೆ, ಆದರ್ಶ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಡಿಸೆಂಬರ್ 22 ರ ಭಾನುವಾರ ಬೆಳಿಗ್ಗೆ 8ರಿಂದ ಮಧ್ಯಾಹ್ನ 2ರವರೆಗೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಲಾಗಿದೆ.
ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ರಹಮತ್ ಉಲ್ಲಾಅಸಾದಿ ಹಾಗೂ ಸದಸ್ಯರು ವಿನಂತಿಸಿದ್ದಾರೆ.
ಶಿಬಿರದಲ್ಲಿ ಭಾಗವಹಿಸುವ ತಜ್ಞ ವೈದ್ಯರು
ಡಾ||ಬಿ.ಎಸ್.ಚಂದ್ರಶೇಖರ್, ಹಿರಿಯ ವೈದ್ಯಕೀಯ ತಜ್ಞರು
ಡಾ||ಮೋಹನದಾಸ್ ಶೆಟ್ಟಿ, ಎಲುಬು ಮತ್ತು ಕೀಲು ತಜ್ಞರು
ಡಾ||ಉದಯ್ ಪ್ರಭು, ಹಿರಿಯ ವೈದ್ಯಕೀಯ ತಜ್ಞರು
ಡಾ||ಜಸ್ ಪ್ರೀತ್ ಸಿಂಗ್ ದಿಲ್, ನರರೋಗ ಶಸ್ತ್ರಚಿಕಿತ್ಸಾ ತಜ್ಞರು
ಡಾ||ವಿನೋದ್ ಕುಮಾರ್, ನರರೋಗ ಶಸ್ತ್ರಚಿಕಿತ್ಸಾತಜ್ಞರು
ಡಾ|| ಪ್ರಶಾಂತ್ ಶೆಟ್ಟಿ, ಹಿರಿಯ ಶಸ್ತ್ರಚಿಕಿತ್ಸಾ ತಜ್ಞರು
ಡಾ||ದಮಯಂತಿ, ಪ್ರಸೂತಿ ತಜ್ಞರು
ಡಾ||ಭಾಸ್ಕರ ಎಂ.ಎನ್. ಮೂಗು, ಕಿವಿ, ಗಂಟಲು ರೋಗ ತಜ್ಞರು
ಡಾ||ಅರುಣ್ ಶೆಟ್ಟಿ, ಚರ್ಮ ರೋಗ ತಜ್ಞರು
ಡಾ||ವಿಶುಕುಮಾರ್, ಹೃದ್ರೋಗ ತಜ್ಞರು
ಡಾ||ಸುದೀಪ್ ಶೆಟ್ಟಿ, ಹಿರಿಯ ವೈದ್ಯಕೀಯ ತಜ್ಞರು
ಡಾ||ಸುಧಾರಾಣಿ, ಕಣ್ಣಿನ ತಜ್ಞರು, ಪ್ರಸಾದ್ ನೇತ್ರಾಲಯ
ಉಚಿತ ಆರೋಗ್ಯ ತಪಾಸಣಾ ಸೌಲಭ್ಯಗಳು
* ತಜ್ಞ ವೈದ್ಯರಿಂದ ಆರೋಗ್ಯ ತಪಾಸಣೆ
* ರಕ್ತದೊತ್ತಡ (ಬಿಪಿ) ಪರೀಕ್ಷೆ
*ರಕ್ತದ ಸಕ್ಕರೆಯ ಅಂಶ *ರಕ್ಷದ ಕೊಬ್ಬಿನಾಂಶ
* ಇಸಿಬಿ
ವೈದ್ಯರ ಪರೀಕ್ಷೆಯ ಸಮಯದಲ್ಲಿ ಅಗತ್ಯವೆಂದು ಕಂಡು ಬರುವ ರೋಗಿಗಳಿಗೆ ಹೃದಯದ ಸ್ಕ್ಯಾನಿಂಗ್ (ಇಕೋ) ಹಾಗೂ ಟಿಎಂಟಿ ಪರೀಕ್ಷೆಗಳನ್ನು ಆಸ್ಪತ್ರೆಗಳಲ್ಲಿ ಉಚಿತವಾಗಿ ಮಾಡಲಾಗುವುದು. ಹೆಚ್ಚಿನ ಪರೀಕ್ಷೆ ಹಾಗೂ ಚಿಕಿತ್ಸೆ ಅಗತ್ಯವಿದ್ದಲ್ಲಿ ಲಿಯಾಯಿತಿ ದರದಲ್ಲಿ ಮಾಡಿಕೊಡಲಾಗುವುದು
ಹೆಚ್ಚಿನ ಮಾಹಿತಿ ಹಾಗೂ ವಿವರಗಳಿಗೆ 8197499810,7760377924, 9980258400 ಸಂಪರ್ಕಿಸಿ.
