ಮಾರಿಕಾಂಬೆಯ ಮಡಿಲಿಗೆ ನಾಗರಾಜಶೆಟ್ಟಿ - ಮಡಿಲಿಂದ ಹೊರ ಬಂದ ವಿಶ್ವನಾಥ ಶೆಟ್ಟಿ..!!
ತೀರ್ಥಹಳ್ಳಿ : ಇಲ್ಲಿನ ಶ್ರೀ ಮಾರಿಕಾಂಬಾ ಅಮ್ಮನವರ ದೇವಸ್ಥಾನದ ಆಡಳಿತ ಮಂಡಳಿಯ 5 ನಿರ್ದೇಶಕರ ಸ್ಥಾನಕ್ಕೆ ಡಿ.21ರ ಇಂದು ಚುನಾವಣೆ ನಡೆಯಿತು. ಸೊಪ್ಪುಗುಡ್ಡೆಯ ನಾಡ್ತಿಯಲ್ಲಿರುವ ಶ್ರೀ ಮಾರಿಕಾಂಬಾ ಸಭಾಭವನದಲ್ಲಿ ಬೆಳಗ್ಗೆ 10 ಗಂಟೆಗೆ ಸರ್ವಸದಸ್ಯರ ಮಹಾಸಭೆ ಆನಂತರ 10:30ರಿಂದ ಮಧ್ಯಾಹ್ನ 2 ಗಂಟೆವರೆಗೆ ಮತದಾನ ನಡೆದು ಸಂಜೆ 4 ಗಂಟೆಗೆ ಫಲಿತಾಂಶ ಪ್ರಕಟವಾಗಿದೆ.
ಇದು ದೇವಸ್ಥಾನದ ಚುನಾವಣೆಯಾದರೂ ಇಡೀ ತಾಲ್ಲೂಕಿನಾದ್ಯಂತ ಕುತೂಹಲ ಉಂಟುಮಾಡಿತ್ತು. ಅದಕ್ಕೆ ಮುಖ್ಯ ಕಾರಣ 'ಕಾಂಗ್ರೆಸ್-ಬಿಜೆಪಿ ಎಂಬ ಪಕ್ಷಗಳ ರಾಜಕೀಯ. ಪ್ರತಿಯೊಂದು ಭಾರಿ ಇಲ್ಲಿ ಬಿಜೆಪಿ ಪಕ್ಷದವರೇ ಚುನಾವಣೆಗೆ ನಿಲ್ಲುತ್ತಾರೆ. ಅದನ್ನು ಅವರೇ ಗೆಲ್ಲುತ್ತರೆ ಎಂಬ ಮಾತುಗಳು ಕೇಳಿ ಬಂದ ಕಾರಣ ಈ ಬಾರಿ ಚುನಾವಣೆಗೆ ಕಾಂಗ್ರೆಸ್ ಮುಖಂಡರೊಬ್ಬರನ್ನ ತಮ್ಮ ಜೊತೆಗೆ ಕರೆದುಕೊಂಡು ದೇವಸ್ಥಾನದಲ್ಲಿ ರಾಜಕೀಯ ಇಲ್ಲ ಎಂದು ತೋರಿಸಲಾಗಿತ್ತು. ಆದರೆ ಇದರ ಬಗ್ಗೆ ಅಸಮಾಧಾನ ಇದ್ದ ಮತ್ತೊಬ್ಬರು ಚುನಾವಣೆಗೆ ಸ್ಪರ್ಧೆ ಮಾಡಿದ್ದರು.
ಮಾರಿಕಾಂಬೆಯ ಮಡಿಲಿಂದ ಹೊರ ಬಂದ ವಿಶ್ವಾನಾಥ ಶೆಟ್ಟಿ
ಈ ಬಾರಿ ಚುನಾವಣೆಯ ಕೇಂದ್ರ ಬಿಂದು ಎಂದರೆ ಅದು ವಿಶ್ವನಾಥ್ ಶೆಟ್ಟಿ. ತಾವೇ ಸ್ವತಃ ಚುನಾವಣೆಗೆ ಸ್ಪರ್ಧೆ ಮಾಡಿ ಅಮ್ಮನ ಮಡಿಲಿಗೆ ಹೋಗುವ ಪ್ಲಾನ್ ಹಾಕಿದ್ದರು. ಇವರ ಜೊತೆಗೆ ಬಿಜೆಪಿಯ ಹಿರಿಯ ನಾಯಕರುಗಳಾದ ನಾಗರಾಜಶೆಟ್ಟರು, ಮಾಜಿ ಮಂಡಲ ಅಧ್ಯಕ್ಷ ಬಾಳೇಬೈಲು ರಾಘವೇಂದ್ರ, ನಗರ ಬಿಜೆಪಿ ಮಾಜಿ ಅಧ್ಯಕ್ಷ ಜೆ.ಮಂಜುನಾಥಶೆಟ್ಟಿ, ಧನಂಜಯ್ ಜೊತೆಗೆ ಕಾಂಗ್ರೆಸ್‌ನ ಜಯಪ್ರಕಾಶ್‌ಶೆಟ್ಟಿ ಬಿಜೆಪಿ ಜೊತೆಗೆ ಸ್ಪರ್ಧಿಸಿದ್ದರು.
ಬಿಜೆಪಿ ಸದಸ್ಯರೇ ಅತೀ ಹೆಚ್ಚಿನ ಸಂಖ್ಯೆಯಲ್ಲಿರುವ ದೇವಸ್ಥಾನ ಸಮಿತಿಯಲ್ಲಿ ಬೇರೆಯವರು ಗೆಲ್ಲುವ ಸಾಧ್ಯತೆ ಕಡಿಮೆ ಇತ್ತು. ಅದನ್ನೂ ಮೀರಿ ಇವತ್ತೇನಾದರೂ ಹೊಸ ಘಟನೆ ನಡೆಯಬಹುದೇ ಎಂದು ಜನರು ಕಾದು ಕುಳಿತಿದ್ದರು. ಆದರೆ ಮಾರಿಕಾಂಬಾ ಅಮ್ಮನ ಮಡಿಲಿಗೆ ಹೋಗುವ ಪ್ಲಾನ್ ಹಾಕಿದ್ದ ವಿಶ್ವನಾಥ್ ಶೆಟ್ಟರಿಗೆ ಮಾರಿಕಾಂಬೆಯ ಮಡಿಲಿಂದ ಹೊರ ಬರುವಂತೆ ಚುನಾವಣೆಯಲ್ಲಿ ಸೂಚನೆ ಸಿಕ್ಕಿದೆ.
ಮಾರಿಕಾಂಬಾ ದೇವಸ್ಥಾನ ಚುನಾವಣೆ ಮತಗಳ ವಿವರ ಹೇಗಿದೆ.!?
ಒಟ್ಟು ಮತ:185 - ಚಲಾವಣೆಯಾಗಿದ್ದು:172
ಸಿಂಧು ಮತಗಳು:171 ಅಸಿಂಧು:1
ನಾಗರಾಜ ಶೆಟ್ಟಿ:136, ಧನಂಜಯ:130
ಬಾಳೇಬೈಲ್ ರಾಘವೇಂದ್ರ:130
ಮಂಜುನಾಥ ಶೆಟ್ಟಿ:127, ಜಯಪ್ರಕಾಶ್ ಶೆಟ್ಟಿ:133
ಸೋಲು
D.S. ವಿಶ್ವನಾಥ ಶೆಟ್ಟಿ: 76
