ತೀರ್ಥಹಳ್ಳಿಯಲ್ಲೊಬ್ಬ ಇಂಜಿನಿಯರ್ ಸೂರ್ಯ - ಮಾಡೋದೆಲ್ಲ ಅರ್ಧಂಬರ್ಧ ಕಾರ್ಯ!?
ತೀರ್ಥಹಳ್ಳಿ : ಪಟ್ಟಣದ ಕೊಪ್ಪ ಸರ್ಕಲ್ ನ ಅಜಾದ್ ರಸ್ತೆಯಿಂದ ದೊಡ್ಡಮನೆಕೇರಿವರೆಗೆ ರಾಷ್ಟ್ರೀಯ ಹೆದ್ದಾರಿಯ ಎರಡು ಭಾಗದಲ್ಲಿ ಸಾರ್ವಜನಿಕರ ಓಡಾಟಕ್ಕೆ ಅನುಕೂಲವಾಗಲಿ ಎಂದು ರಸ್ತೆ ಅಗಲೀಕರಣದ ವೇಳೆ ಅಂದಿನ ಇಂಜಿನಿಯರ್ ಆಗಿದ್ದ ಬಾಲಕೃಷ್ಣ ಅವರ ವಿಶೇಷ ಕಾಳಜಿಯಿಂದ ರಸ್ತೆಯ ಎರಡು ಬದಿಯಲ್ಲಿ ಗ್ರಿಲ್ ಅಳವಡಿಸಲಾಗಿತ್ತು. ಆದರೆ ಇತ್ತೀಚಿಗೆ ಬಂದ ಕೆಲವು ಇಂಜಿನಿಯರ್ ಗಳು ಬೇಜವಾಬ್ದಾರಿ ಮೂಲಕ ಅದನ್ನು ಹಾಳು ಮಾಡುತ್ತಿದ್ದಾರ? ಎಂಬ ಅನುಮಾನ ವ್ಯಕ್ತವಾಗಿದೆ.
ಹೌದು ಪಟ್ಟಣದ ಹಲವು ಭಾಗದಲ್ಲಿ ಅಳವಡಿಸಿದ್ದ ಗ್ರಿಲ್ ಮಧ್ಯೆ ಸಾರ್ವಜನಿಕರಿಗೆ ಓಡಾಡಲು ಅನುಕೂಲವಾಗಲು ಗ್ರಿಲ್ ಬಿಡಲಾಗಿತ್ತು. ಆದರೆ ಇತ್ತೀಚಿಗೆ ಪಟ್ಟಣದ ಪ್ರತಿಷ್ಠಿತ ಅಂಗಡಿ ಮಾಲೀಕರೆಲ್ಲರೂ ತಮ್ಮ ತಮ್ಮ ಅಂಗಡಿ ಎದುರಿಗೆ ಅಳವಡಿಸಿರುವ ಗ್ರಿಲ್ ಗಳನ್ನು ತೆರವು ಮಾಡುತ್ತಿದ್ದರೂ ಸಹ ಅದರ ನಿರ್ವಹಣೆ ಮಾಡಬೇಕಾದ ಆ ವ್ಯಾಪ್ತಿಯ ಇಂಜಿನಿಯರ್ ರೊಬ್ಬರು ತಮಗೂ ಅದಕ್ಕೂ ಸಂಬಂಧವೇ ಇಲ್ಲ ಎಂದು ಮೌನವಾಗಿ ಕುಳಿತಿದ್ದಾರೆ.
ಇಲ್ಲಿ ಕೆಲವು ಜನಪ್ರತಿನಿಧಿಗಳು, ರಾಜಕಾರಣಿಗಳು ಇಂಜಿನಿಯರ್ ಬಗ್ಗೆ ಮೌನವಹಿಸಿರುವುದೇ ಇಂತಹ ಬೇಜವಾಬ್ದಾರಿಗೆ ಕಾರಣ ಎಂದು ಸ್ಥಳೀಯರು ದೂರಿದ್ದಾರೆ. ಆತ ಇಲ್ಲಿಯವರೆಗೆ ಮಾಡಿದ ಕೆಲಸವೆಲ್ಲವೂ ಅರ್ಧಂ ಬರ್ಧ ಆಗಿದ್ದು ಆತ ಸೂರ್ಯನಷ್ಟು ಪವರ್ ಇಲ್ಲದಿದ್ದರೂ ರಾಜಕಾರಣದ ಸಹಕಾರದಿಂದ ಖದರ್ ತೋರಿಸುತ್ತಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಟ್ಟಿನಲ್ಲಿ ಈ ವಿಚಾರದಲ್ಲಿ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಇಂತಹ ಜವಾಬ್ದಾರಿ ಇಲ್ಲದ ಅಧಿಕಾರಿಗಳನ್ನು ಕೆಲಸದಿಂದ ವಜಾಗೊಳಿಸಬೇಕು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
