ತೀರ್ಥಹಳ್ಳಿ ತುಂಗಾ ಕಾಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!? Tth

ತೀರ್ಥಹಳ್ಳಿ ತುಂಗಾ ಕಾಮಾನು ಸೇತುವೆ ಬಳಿ  ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
ತೀರ್ಥಹಳ್ಳಿ : ತುಂಗಾ ಕಾಮಾನು ಸೇತುವೆಯ ಕೆಳ ಭಾಗದಲ್ಲಿ ಕಮಾನಿಗೆ ಅಳವಡಿಸಲಾಗಿರುವ ಕಂಬದ ಕೆಳಗೆ ಅಸ್ತಿ ಪಂಜರವೊಂದು ಇಂದು ಮಂಗಳವಾರ ಬೆಳಗ್ಗೆ ಪತ್ತೆಯಾಗಿತ್ತು.

ಸ್ಥಳೀಯ ಮೀನುಗಾರರು ಮೀನು ಹಿಡಿಯುವಾಗ ಇದನ್ನು ನೋಡಿ ತಕ್ಷಣವೇ ಪೊಲೀಸ್ ಗೆ ಮಾಹಿತಿ ನೀಡಿದ್ದು ಪೊಲೀಸರು ಪರಿಶೀಲನೆ ನಡೆಸಿದ್ದರು. ಅಸ್ತಿ ಪಂಜರವನ್ನು ಆಸ್ಪತ್ರೆಗೆ ರವಾನಿಸಿ ಪರೀಕ್ಷೆ ನಡೆಸಿದಾಗ ತಲೆ ಬುರುಡೆ, ಕೈ, ಕಾಲು ಎಲ್ಲವೂ ಬೇರೆ ಬೇರೆ ವ್ಯಕ್ತಿಯದ್ದು ಎಂದು ತಿಳಿದು ಬಂದಿದೆ.


ಮೆಡಿಕಲ್ ವಿದ್ಯಾರ್ಥಿ ಮೆಡಿಕಲ್ ಟೆಸ್ಟ್ ಮಾಡಿ ನಂತರ ಬಿಸಾಕಿರುವ ಸಾಧ್ಯತೆ ಇರಬಹುದು ಎಂದು ಹೇಳಲಾಗುತ್ತಿದೆ. ಅಸ್ತಿ ಪಂಜರದ ಎಲ್ಲಾ ಭಾಗಗಳು ಬೇರೆ ಬೇರೆಯಾಗಿರುವ ಕಾರಣ ತೇಲಿ ಬಂದಿದ್ದು ಅಥವಾ ಕಾಣೆಯಾದ ವ್ಯಕ್ತಿಯದ್ದಲ್ಲ, ಇದು ಮೆಡಿಕಲ್ ಪರೀಕ್ಷೆಗೆ ಒಳಪಟ್ಟ ಅಸ್ತಿ ಪಂಜರವಿರಬಹುದು ಎಂದು ಪೊಲೀಸ್ ಮೂಲಗಳಿಂದ ಹೇಳಲಾಗಿದೆ.



Previous Post Next Post