ತೀರ್ಥಹಳ್ಳಿ ತುಂಗಾ ಕಾಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ! tth

ತೀರ್ಥಹಳ್ಳಿ ತುಂಗಾ ಕಾಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ!
ತೀರ್ಥಹಳ್ಳಿ : ತುಂಗಾ ಕಾಮಾನು ಸೇತುವೆಯ ಕೆಳ ಭಾಗದಲ್ಲಿ ಕಮಾನಿಗೆ ಅಳವಡಿಸಲಾಗಿರುವ ಕಂಬದ ಕೆಳಗೆ ಅಸ್ತಿ ಪಂಜರವೊಂದು ಪತ್ತೆಯಾಗಿದೆ.



ಮಳೆಗಾಲದ ಸಂದರ್ಭದಲ್ಲಿ ನೀರಿನ ಜೊತೆಗೆ ಬಂದು ಕಲ್ಲಿನ ಬಂಡೆಯ ಮಧ್ಯದಲ್ಲಿ ಸಿಲುಕಿಕೊಂಡಿರಬಹುದು ಎಂದು ಅಂದಾಜಿಸಲಾಗಿದ್ದು ತುಂಗಾ ನದಿ ಶೃಂಗೇರಿ ಭಾಗದಿಂದ ಹರಿಯುತ್ತಿದ್ದು ಆ ಭಾಗದಲ್ಲಿ ಯಾರಾದರೂ ಕಾಣೆಯಾಗಿದ್ದಾರ ಎಂಬುದು ಕಂಡು ಹಿಡಿಯಬೇಕಿದೆ.

ಸ್ಥಳೀಯ ಮೀನುಗಾರರು ಮೀನು ಹಿಡಿಯುವಾಗ ಇದನ್ನು ನೋಡಿದ್ದಾರೆ. ತಕ್ಷಣವೇ ಪೊಲೀಸ್ ಗೆ ಮಾಹಿತಿ ನೀಡಿದ್ದು ಪೊಲೀಸರು ಪರಿಶೀಲನೆ ನಡೆಸಿ 
ಕೇಸ್ ದಾಖಲು ಮಾಡಿಕೊಂಡಿದ್ದಾರೆ.




Previous Post Next Post