ವಾಗ್ದೇವಿ ಶಿಕ್ಷಣ ಸಂಸ್ಥೆಗೆ ಬೆಳ್ಳಿ ಹಬ್ಬದ ಸಂಭ್ರಮ - ಏನೆಲ್ಲಾ ಕಾರ್ಯಕ್ರಮ? - ಯಾರೆಲ್ಲಾ ಆಗಮನ!?
ತೀರ್ಥಹಳ್ಳಿ : ವಾಗ್ದೇವಿ ಶಿಕ್ಷಣ ಸಂಸ್ಥೆ ಆರಂಭ ಮಾಡಿ 25 ವರ್ಷ ಆಗಿದೆ. 1999 ರಲ್ಲಿ ಈ ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದ್ದೆವು. ಈಗ ಶಿಕ್ಷಣ ಸಂಸ್ಥೆಯ ಬೆಳ್ಳಿ ಹಬ್ಬದ ಸಂದರ್ಭದಲ್ಲಿ ವಿಶೇಷ ಕಾರ್ಯಕ್ರಮ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಕೆ ಎಸ್ ತಿಳಿಸಿದರು.
ಮಂಗಳವಾರ ಪಟ್ಟಣದ ಕೊಪ್ಪ ಸರ್ಕಲ್ ನಲ್ಲಿರುವ ವಾಗ್ದೇವಿ ಶಿಕ್ಷಣ ಸಂಸ್ಥೆಯ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪ್ರತಿ ಬಾರಿ ವಾರ್ಷಿಕೋತ್ಸವ ಎಂದು ಮಾಡುತ್ತಿದ್ದೇವು. ಆದರೆ ಈ ಬಾರಿ 25 ವರ್ಷ ತುಂಬಿದ ಹಿನ್ನಲೆಯಲ್ಲಿ ಒಟ್ಟು ಆರು ದಿನಗಳ ಪರ್ಯಂತ ವಿವಿಧ ರೀತಿಯ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಮೂರು ದಿನ ತೀರ್ಥಹಳ್ಳಿಯಲ್ಲಿ ಹಾಗೂ ಮೂರು ದಿನ ಮೇಲಿನಕುರುವಳ್ಳಿಯ ವಾಗ್ದೇವಿ ಕಾಲೇಜಿನಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು.
ಕಾರ್ಯಕ್ರಮಗಳು ಏನೇನು ?
ನವೆಂಬರ್ 26 ರ ಮಂಗಳವಾರ ಗೋಪಾಲಗೌಡ ರಂಗಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಸ್ಫೂರ್ತಿ ದಿನ ಸಾಧನೆಗೆ ದಾರಿ ಎಂಬ ಮಕ್ಕಳಿಗೆ ಪ್ರೇರಣೆ ನೀಡುವ ಸಲುವಾಗಿ ಕಾರ್ಯಕ್ರಮ ಮಾಡಲಾಗಿದೆ. ಈ ಕಾರ್ಯಕ್ರಮದ ವೇದಿಕೆಯಲ್ಲಿ ಸತ್ಪಥ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಜಗದೀಶ್ ಕೆ ಎಸ್, ಮದನ್ ಆರ್
28 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ
ಸೇವೆ ಸಲ್ಲಿಸಿದ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಆಗಿದ್ದ ರಾಘವೇಂದ್ರ ಎಂ. ಕೆ, ಕಿರಿಯ ವೈದ್ಯ ಮತ್ತು 6 ವಿಶ್ವ ದಾಖಲೆಗಳ ಬರಹಗಾರರಾದ ಡಾ.ರಾಹುಲ್ ದೇವರಾಜ್, ಶಿವಮೊಗ್ಗ, 2023 ರ ರಾಜ್ಯ ಸರ್ಕಾರದ ಪ್ರಶಸ್ತಿ ಪುರಸ್ಕೃತರು, ಉದಯೋನ್ಮುಖ ಯುವ ಉದ್ಯಮಿಯಾಗಿರುವ ಯುದಿಸ್ಟರ್ ನಾರಾಯಣ್, ಬೆಂಗಳೂರು ಭಾಗಿಯಾಗಿ ಮಕ್ಕಳಿಗೆ ಪ್ರೇರಣೆ ನೀಡುವ ಮಾತುಗಳನ್ನಾಡಲಿದ್ದಾರೆ ಎಂದರು.
ನವೆಂಬರ್ 27 ರ ಬುಧವಾರ ಗೋಪಾಲಗೌಡ ರಂಗಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಕನ್ನಡ ಮತ್ತು ಕೃಷಿಗೆ ಸಂಬಂಧಿಸಿದ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳ ಕಿರು ಹಸ್ತ ಲಿಪಿ ವಾಗ್ದೇವಿ ಸವಿ ನುಡಿ ಬಿಡುಗಡೆ ಆಯೋಜಿಸಲಾಗಿದೆ.
ವೇದಿಕೆಯಲ್ಲಿ ಸತ್ಪಥ ಶಿಕ್ಷಣ ಟ್ರಸ್ಟ್ ಖಜಾಂಚಿಗಳಾದ ಶಶಿಧರ್ ಎಚ್ ಪಿ, ಸತ್ಪಥ ಶಿಕ್ಷಣ ಟ್ರಸ್ಟ್ ಸದಸ್ಯರಾದ ಕೃಷ್ಣಮೂರ್ತಿ ಬಿ ಎಂ, ರತನ್ ಟಾಟಾರವರಿಂದ ಮತ್ತು ಕರ್ನಾಟಕ ಸರ್ಕಾರದಿಂದ ಯುವ ರೈತ ಎಂಬ ಬಿರುದು ಪಡೆದ ಸಂತೋಷ್ ಕಾವೇರಿ, ತುಂಗಾ ಮಹಾವಿದ್ಯಾಲಯದ ನಿವೃತ್ತ ಪ್ರಾಂಶುಪಾಲರಾದ ನಟರಾಜ್ ಅರಳಸುರುಳಿ ಭಾಗಿಯಾಗಲಿದ್ದಾರೆ.
ನವೆಂಬರ್ 29 ರ ಶುಕ್ರವಾರ ಗಾಯತ್ರಿ ಮಂದಿರದಲ್ಲಿ ಬೆಳಗ್ಗೆ 10 ಗಂಟೆಗೆ ಪತ್ರಕರ್ತರೊಡನೆ ವಿದ್ಯಾರ್ಥಿಗಳ ಸಂವಾದ ವಾಗ್ದೇವಿ ಶಿಕ್ಷಣ ಸಂಸ್ಥೆಯ ಪ್ರಾಧ್ಯಪಕರು ಹಾಗೂ ಸಿಬ್ಬಂದಿ ವರ್ಗದವರಿಗೆ ಗೌರವಾರ್ಪಣೆ, ಎಸ್ ಎಸ್ ಎಲ್ ಸಿ / ಪಿ.ಯು.ಸಿ ಯಲ್ಲಿ ರಾಜ್ಯ ಮಟ್ಟದ ರ್ಯಾಂಕ್ ಪಡೆದ ಮತ್ತು ಕಲೆ ಹಾಗೂ ಕ್ರೀಡೆಗಳಲ್ಲಿ ವಿಶೇಷ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ.
ಡಿಸೇಂಬರ್ 5 ರ ಗುರುವಾರ ಸಂಜೆ 5:30 ಕ್ಕೆ ಮೇಲಿನಕುರುವಳ್ಳಿಯ ವಾಗ್ದೇವಿ ಕಾಲೇಜಿನಲ್ಲಿ
ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ವೇದಿಕೆಯಲ್ಲಿ ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಡಾ.ಆರ್.ಎಂ.ಮಂಜುನಾಥ್ ಗೌಡ, ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಯು ಡಿ ವೆಂಕಟೇಶ್,
ಶಾಲಾ ಶಿಕ್ಷಣ ಇಲಾಖೆಯ ಬಿಇಒಗಣೇಶ್ ವೈ ಭಾಗಿಯಾಗಲಿದ್ದಾರೆ.
ಡಿಸೇಂಬರ್ 06 ರ ಶುಕ್ರವಾರ ಸಂಜೆ 5-30 ಕ್ಕೆ ಮೇಲಿನಕುರುವಳ್ಳಿಯ ವಾಗ್ದೇವಿ ಕಾಲೇಜಿನಲ್ಲಿ
ಬೆಳ್ಳಿ ಹೆಜ್ಜೆ ಬೆಳ್ಳಿ ಹಬ್ಬದ ಪುಸ್ತಕ ಬಿಡುಗಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ವೇದಿಕೆಯಲ್ಲಿ ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್, ಸರ್ಕಲ್ ಇನ್ಸ್ಪೆಕ್ಟರ್ ಅಶ್ವಥ್ ಗೌಡ ,
ಸತ್ಪಥ ಶಿಕ್ಷಣ ಟ್ರಸ್ಟ್ ಅಧ್ಯಕ್ಷರಾದ ಜಗದೀಶ್
ವಿಶೇಷ ಅತಿಥಿಯಾಗಿ ಚಲನಚಿತ್ರ ನಟರಾದ
ದಿಗಂತ್ ಭಾಗಿಯಾಗಲಿದ್ದಾರೆ.
ಡಿಸೇಂಬರ್ 07 ರ ಶನಿವಾರ ಸಂಜೆ 5-30 ಕ್ಕೆ ಮೇಲಿನಕುರುವಳ್ಳಿಯ ವಾಗ್ದೇವಿ ಪಿಯು ಕಾಲೇಜಿನಲ್ಲಿ ಮಾಜಿ ಸಿಬ್ಬಂದಿಗಳು, ಹಳೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ರಘು ದೀಕ್ಷಿತ್ ಮತ್ತು ತಂಡದಿಂದ ಸಂಗೀತ ಸಂಜೆ ನಡೆಯಲಿದೆ.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ : ಶಾಸಕರು,ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಚಂದ್ರಪ್ಪ ಎಸ್ ಗುಂಡಪಲ್ಲಿ, ಡಿವೈಎಸ್ಪಿ ಗಜಾನನ ವಾಮನ ಸುತಾರ, ಸೇರಿ ಹಲವರು ಭಾಗಿಯಾಗಲಿದ್ದಾರೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಸರ್ವರಿಗೂ ಆದರದ ಸ್ವಾಗತವನ್ನು ವಾಗ್ದೇವಿ ಶಿಕ್ಷಣ ಸಂಸ್ಥೆ ಕೋರಿದೆ.
Tags:
ತೀರ್ಥಹಳ್ಳಿ ಸುದ್ದಿ