ಸಿಗಂದೂರಿನಲ್ಲಿ ತೆಪ್ಪ ಮುಳುಗಿ ನಾಪತ್ತೆಯಾಗಿದ್ದ ಯುವಕರ ಶವ ಪತ್ತೆ siganduru

ಸಿಗಂದೂರಿನಲ್ಲಿ ತೆಪ್ಪ ಮುಳುಗಿ ನಾಪತ್ತೆಯಾಗಿದ್ದ ಯುವಕರ ಶವ ಪತ್ತೆ
ಶಿವಮೊಗ್ಗ : ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ನಾಪತ್ತೆ ಆದ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕರ ಮೃತದೇಹ ಪತ್ತೆಯಾಗಿದೆ. ಕಳಸವಳ್ಳಿ ಸಮೀಪ ಶರಾವತಿ ಹಿನ್ನೀರಿನಲ್ಲಿ  ಊಟಕ್ಕಾಗಿ ತೆರಳಿದ್ದ ವೇಳೆ ತೆಪ್ಪ ಮಗುಚಿ ನೀರಲ್ಲಿ ಮುಳುಗಿ  ಯುವಕರು ನಾಪತ್ತೆಯಾಗಿದ್ದರು. 

ಸಾಗರ ತಾಲೂಕಿನ ಕಳಸವಳ್ಳಿ ಬಳಿ ಶರಾವತಿ ಹಿನ್ನೀರಿನಲ್ಲಿ ಸುಮಾರು 40 ಅಡಿ ಆಳದಲ್ಲಿ ಮೂವರು ಯುವಕರ ಶವ ಪತ್ತೆಯಾಗಿದೆ. 
ಕಳಸವಳ್ಳಿ ಸಮೀಪ ಶರಾವತಿ ಹಿನ್ನೀರಿನ ನಡುಗಡ್ಡೆಯಲ್ಲಿ ಊಟಕ್ಕೆ ತೆರಳಿದ್ದ ಐವರು ಯುವಕರ ಪೈಕಿ, ತೆಪ್ಪ ಮಗುಚಿದ್ದ ವೇಳೆ ಮೂವರು ನಿನ್ನೆ ಸಂಜೆ ಕಣ್ಮರೆಯಾಗಿದ್ದರು.

ಚೇತನ್ (28),  ಸಂದೀಪ್ (30) ಹಾಗೂ ರಾಜೀವ್ (34) ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ ಪೊಲೀಸ್ ಹಾಗೂ ಆಗ್ನಿಶಾಮಕ ದಳದಿಂದ ಶೋಧ ಕಾರ್ಯ ನಡೆಸಲಾಗಿತ್ತು. ರಾತ್ರಿಯಾದ್ದರಿಂದ ಕಾರ್ಯಾಚರಣೆಗೆ ಹಿನ್ನಡೆಯಾಗಿತ್ತು. 

ಇಂದು ಬೆಳಿಗ್ಗೆಯಿಂದಲೇ ಕಾರ್ಯಾಚರಣೆ ಆರಂಭಿಸಿ ಮುಳುಗು ತಜ್ಞ ಈಶ್ವರ್ ಮಲ್ಪೆ ನೇತೃತ್ವದ ತಂಡ ಯುವಕರ ಮೃತದೇಹವನ್ನ ಮೇಲಕ್ಕೆತ್ತಿದ್ದಾರೆ. ನೀರಿನ ಆಳದಲ್ಲಿ ಇದ್ದ ಮೂವರು ಯುವಕರ ಶವವನ್ನ ಪತ್ತೆ ಮಾಡಲಾಗಿದೆ. 
Previous Post Next Post