ಪುತ್ತಿಗೆ ಮಠದಲ್ಲಿ ಇಂದು - ನಾಳೆ ವಿಜೃಂ‌ಭಣೆಯ ಕಾರ್ತಿಕ ದೀಪೋತ್ಸವ Deepotsava

ಪುತ್ತಿಗೆ ಮಠದಲ್ಲಿ ಇಂದು - ನಾಳೆ ವಿಜೃಂ‌ಭಣೆಯ ಕಾರ್ತಿಕ ದೀಪೋತ್ಸವ
ತೀರ್ಥಹಳ್ಳಿ: ಕುರುವಳ್ಳಿ ಪುತ್ತಿಗೆ ಮಠದಲ್ಲಿ ಪರಮಪೂಜ್ಯ ಶ್ರೀ ಶ್ರೀ ಶ್ರೀ ಸುಗುಣೀಂದ್ರತೀರ್ಥ  ಶ್ರೀ ಪಾದಂಗಳವರ ಹಾಗೂ ಶಿಷ್ಯರಾದ ಶ್ರೀ ಶ್ರೀ ಸುಶೀಂದ್ರತೀರ್ಥ ಶ್ರೀಪಾದರ ಆದೇಶದಂತೆ  14-11-2024ನೇ ಗುರುವಾರ ಶ್ರೀ ಗೌರಿಶಂಕರ ದೇವರ ದೀಪೋತ್ಸವ ಮತ್ತು 15-11-2024ರ ಶುಕ್ರವಾರ ಶ್ರೀ ವಿಠ್ಠಲ ದೇವರ ಹಾಗೂ ಕಟ್ಟೆ ಪ್ರಾಣದೇವರ  ಪರಿವಾರ ದೇವರ ಕಾರ್ತಿಕ ದೀಪೋತ್ಸವ  ನಡೆಯಲಿದೆ. 

ಈ ದಿಪೋತ್ಸವದ ಸಂಭ್ರಮದಲ್ಲಿ ಭಕ್ತಾದಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಗಂಧ ಪ್ರಸಾದ ಸ್ವೀಕರಿಸಿ ಶ್ರೀ ವಿಠ್ಠಲ ದೇವರ ಹಾಗೂ ಪ್ರಾಣದೇವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ಪುತ್ತಿಗೆ ಮಠದ ಆಡಳಿತಾಧಿಕಾರಿ ದೇವಸ್ಥಾನದ ವ್ಯವಸ್ಥಾಪಕರು ವಿನಂತಿಸಿದ್ದಾರೆ .







Previous Post Next Post