ಸಿಗಂದೂರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ನಾಪತ್ತೆ missing

ಸಿಗಂದೂರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು ನಾಪತ್ತೆ
ಶಿವಮೊಗ್ಗ : ಜಿಲ್ಲೆಯ ಪ್ರಸಿದ್ಧ ತೀರ್ಥಕ್ಷೇತ್ರದಲ್ಲಿ ಒಂದಾದ ಸಿಗಂದೂರಿನಲ್ಲಿ ದುರಂತ ಸಂಭವಿಸಿದೆ. ಸಿಗಂದೂರು ಬಳಿ ತೆಪ್ಪ ಮುಳುಗಿ ಮೂವರು ಯುವಕರು ಕಣ್ಮರೆಯಾಗಿದ್ದಾರೆ. 

ಸಾಗರ ತಾಲೂಕಿನ ಪ್ರೇಕ್ಷಣೀಯ ಸ್ಥಳ ಹಾಗೂ ಚೌಡೇಶ್ವರಿ ಕ್ಷೇತ್ರವಾಗಿರುವ ಸಿಗಂದೂರಿನ ಶರಾವತಿ ಹಿನ್ನೀರಿನಲ್ಲಿ ತೆಪ್ಪ ಮುಳುಗಿ ಮೂವರು ಯುವಕರು  ನಾಪತ್ತೆಯಾಗಿದ್ದಾರೆ. ಸಿಗಂದೂರು ಸಮೀಪದ ಕಳಸವಳ್ಳಿಯಲ್ಲಿ ಘಟನೆ ಸಂಭವಿಸಿದೆ. 

ಹೊಳೆ ಊಟಕ್ಕೆ ಐವರು ತೆರಳಿದ್ದರು. ಮಧ್ಯಾಹ್ನ ಹೊಳೆ ಊಟ ಮುಗಿಸಿ  ಆಚೆಯ ದಡದಿಂದ ಈಚಿನ ದಡಕ್ಕೆ ತೆಪ್ಪದಲ್ಲಿ ಬರುತ್ತಿರುವಾಗ ತೆಪ್ಪ ಸಮತೋಲನ ಕಳೆದುಕೊಂಡು ಭಾಗಶಃ ಮುಳುಗಿದೆ ಎಂದು ವರದಿಯಾಗಿದೆ.

ಸಿಗಂದೂರು ಮೂಲದ 28 ವರ್ಷದ ಚೇತನ್‌ ಜೈನ್‌, ಹುಲಿದೇವರಬನದ 30 ವರ್ಷದ ಸಂದೀಪ್‌  ಹಾಗೂ ಗಿನಿವಾರ 28 ವರ್ಷದ ರಾಜು ನದಿಯಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ. ಈ ಮೂವರಿಗೂ ಈಜು ಬರುತ್ತಿರಲಿಲ್ಲ. ಇವರ ಜೊತೆಗಿದ್ದ ವಿನಯ್‌ ಹಾಗೂ ಯಶವಂತ್‌ ಈಜಿ ದಡ ಸೇರಿದ್ದಾರೆ.

ಕಳಸವಳ್ಳಿ ಬಳಿಯ ಶರಾವತಿ ಹಿನ್ನೀರಿನಲ್ಲಿ ಘಟನೆ ಇಂದು ಮಧ್ಯಾಹ್ನ ನಡೆದಿದೆ. ಘಟನಾ ಸ್ಥಳಕ್ಕೆ ಕಾರ್ಗಲ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದು, ನಾಪತ್ತೆಯಾದ ಹುಡುಗರಿಗೆ ತೀವ್ರ ಶೋಧ ಕಾರ್ಯ ನಡೆಯುತ್ತಿದೆ.




Previous Post Next Post