ನಾಳೆ ರಾಮೇಶ್ವರ ದೇವಸ್ಥಾನದಲ್ಲಿ ಪಂಚದುರ್ಗಾ ಹೋಮ - ದೀಪೋತ್ಸವ
ತೀರ್ಥಹಳ್ಳಿ : ಪುರಾಣ ಪ್ರಸಿದ್ದ ಐತಿಹಾಸಿಕ ಹಿನ್ನಲೆಯುಳ್ಳ, ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ಶ್ರೀ ರಾಮೇಶ್ವರ ದೇವರ ನಿತ್ಯ ಅನ್ನಸಂತರ್ಪಣಾ ಮತ್ತು ಧಾರ್ಮಿಕ ಸೇವಾ ಸಮಿತಿ ತೃತೀಯ ವರ್ಷದ ನಿತ್ಯ ಅನ್ನ ಸಂತರ್ಪಣಾ ಕಾರ್ಯದ ವಾರ್ಷಿಕೋತ್ಸವದ ಪ್ರಯುಕ್ತ ಪಂಚದುರ್ಗಾ ಹೋಮ ನಡೆಯಲಿದೆ.
ದಿನಾಂಕ 15 - 11- 2024 ನೇ ಶುಕ್ರವಾರದಂದು ಬೆಳಗ್ಗೆ 10.30 ರಿಂದ ಶ್ರೀ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಲೋಕಕಲ್ಯಾಣಾರ್ಥ ಹಾಗೂ ಅಪಮೃತ್ಯು ರೋಗ ರುಜಿನ ಗ್ರಹಚಾರ ದೋಷ ನಿವಾರಣಾರ್ಥ ಸಮಸ್ತ ಭಕ್ತ ಜನರ ಶ್ರೇಯೋಭಿವೃದ್ಧಿಗಾಗಿ ಹಾಗೂ ಆಯುಷ್ಯ ಆರೋಗ್ಯ ಪ್ರಾಪ್ತಿಗಾಗಿ ರಾಮೇಶ್ವರ ದೇವರ ಸನ್ನಿಧಿಯಲ್ಲಿ ಪಂಚದುರ್ಗಾ ಮಂತ್ರ ಮತ್ತು ಸಂಜೆ 7:30 ಕ್ಕೆ ಸಾರ್ವಜನಿಕ ಕಾರ್ತಿಕ ದೀಪೋತ್ಸವ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಕ್ಕೆ ಶ್ರೀ ದೇವರ ಸನ್ನಿಧಿಯಲ್ಲಿ ಭಾಗವಹಿಸಿ ಸಹಕಾರ ನೀಡಿ ದೇವರ ಕೃಪೆಗೆ ಪಾತ್ರರಾಗುವಂತೆ ಅನ್ನಸಂತರ್ಪಣಾ ಸಮಿತಿ ಕೋರಿದೆ.