ಶಾಸಕ ಸ್ಥಾನವನ್ನು ಅಡ ಇಟ್ಟರಾ ಆರಗ ಜ್ಞಾನೇಂದ್ರ!? Araga jnanendra

ಶಾಸಕ ಸ್ಥಾನವನ್ನು ಅಡ ಇಟ್ಟರಾ ಆರಗ ಜ್ಞಾನೇಂದ್ರ!?

ಜ್ಞಾನೇಂದ್ರ ಅವರನ್ನು ಆಯ್ಕೆ ಮಾಡಿದ್ದೆ ನಮ್ಮ ದುರಂತ ಎಂದ ಕಿಮ್ಮನೆ ರತ್ನಾಕರ್!

ತೀರ್ಥಹಳ್ಳಿ : ಜ್ಞಾನೇಂದ್ರರವರು 25 ವರ್ಷ ರಾಜಕೀಯದಲ್ಲಿದ್ದು ಅರಣ್ಯ ಇಲಾಖೆಯ ಜಾಗದಲ್ಲಿ ಮದ್ಯದ ಅಂಗಡಿ ಮಾಡಲು ಪ್ರತಿಭಟನೆ ಮಾಡ್ತಾರಲ್ಲ, ಅಂತಹ ವಿಷಯದಲ್ಲಿ ಶಾಸಕ ಸ್ಥಾನವನ್ನು ಅಡ ಇಡುವುದಾದರೆ ರಾಜೀನಾಮೆ ಕೊಟ್ಟು ಹೋಗಲಿ, ಇವರನ್ನು ಆಯ್ಕೆ ಮಾಡಿದ್ದೆ ನಮ್ಮ ದುರಂತ ಎಂದು ಮಾಜಿ ಸಚಿವ ಕಿಮ್ಮನೆ ರತ್ನಾಕರ್ ವಾಗ್ದಾಳಿ ನಡೆಸಿದರು.

ಶುಕ್ರವಾರ ಪಟ್ಟಣದ ಗಾಂಧಿಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು 
ಮದ್ಯದಂಗಡಿ ಬಿಜೆಪಿಯವರಾದರೆ ಯಾರೇ ಸಾಯಲಿ ಅಥವಾ ಕಡೆಗೆ ಸಂಬಂಧಿಕರೇ ಸತ್ತರು ಪರವಾಗಿಲ್ಲ, ಇಂತಹ ಶಾಸಕರ ಅಗತ್ಯ ಕ್ಷೇತ್ರಕ್ಕೆ ಇದೆಯೇ? ಸಮಾಜಕ್ಕೆ ವಿವೇಕ ಹೇಳುವವರು ಹೀಗೆ ಮಾಡುತ್ತಾರ? ತಾಲೂಕಿನಲ್ಲಿ ಯಾರು ಮರಳು ಹೊಡೆಯುತ್ತಾರೆ ಎಂದು ಪ್ರತಿಯೊಬ್ಬರಿಗೂ ಮಾಹಿತಿ ಕೊಟ್ಟಿದ್ದೇನೆ, ಟ್ರಂಚ್ ಹೊಡೆದರೆ ಅದನ್ನು ತೆಗೆಸುತ್ತಾರೆ, ಇಂತಹ ಶಾಸಕರು ನಮಗೆ ಬೇಕಾ?
ಎಂದು ಪ್ರೆಶ್ನೆ ಮಾಡಿದರು.

ಆರಗ ಜ್ಞಾನೇಂದ್ರ ಜೊತೆ ಚರ್ಚೆ ಮಾಡಲು ನಾನು ಸಿದ್ದ, ನನ್ನ ಹಾಗೂ ಅವರ ಸಿದ್ದಾಂತದ ಬಗ್ಗೆ ಮಾತನಾಡೋಣ. ನನ್ನ ಅವಧಿಯಲ್ಲಿ ಆಗಿರುವ ಬಗ್ಗೆ ಹಾಗೂ ಅವರ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಬಗ್ಗೆ ಚರ್ಚೆ ಮಾಡೋಣ, ವಿರೋಧ ಪಕ್ಷದಲ್ಲಿ ಇದ್ದು ಸಹ ನಾನು 200 ಕೋಟಿ ಹಣ ತಂದಿದ್ದೇನೆ, ಹಾಗಾದರೆ ಇವರ ಕೈಲಿ ಯಾಕೆ ಹಣ ತರಲು ಆಗುತ್ತಿಲ್ಲ? ಇವರ ನಡುವಳಿಕೆ ಸರಿಯಿಲ್ಲ, ಅವರ ಮುಖದಲ್ಲಿ ದ್ವೇಷದ ಚಿತ್ರ ಏನಿದೆ ಅದನ್ನು ಬದಲಾವಣೆ ಮಾಡಿಕೊಳ್ಳಬೇಕು, ಅವರು ನನಗಿಂತ ಮೊದಲು 15 ವರ್ಷ ಶಾಸಕರಾಗಿದ್ದರು ಆಗ ಏನು ಅಭಿವೃದ್ಧಿ ಮಾಡಿದ್ದರು, 25 ವರ್ಷದ ಅವರ ಸಾಧನೆ ಏನು? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂತಹ ಒಂದು ಘಟನೆ ನಾನು ಇದ್ದಾಗ ಆಗಿದೆಯೇ? ಬುಕ್ಲಾಪುರದಲ್ಲಿ ಯಾರು ಮರಳು ಹೊಡೆಯುತ್ತಿರುವುದು? ಬಿಜೆಪಿಯವರು ಮರಳು ಹೊಡೆದರೆ ಅರಣ್ಯ ಇಲಾಖೆ ಅಥವಾ ಯಾವುದೇ ಜಾಗವಾಗಿರಲಿ ಮರಳು ಹೊಡೆಯಬಹುದೇ? ಇವರು ಮಾಡಿರುವ ಸಾಧನೆ ಏನು ಎಂದರೆ ಮುಸ್ಲಿಂ ವಿಷಯ ಸಿಕ್ಕಿದರೆ, ನಂದಿತಾ ವಿಷಯದಲ್ಲಿ, ಕೋಮುಗಲಭೆ ವಿಷಯದಲ್ಲಿ ಗಲಾಟೆ ಮಾಡಿದ್ದಾರೆ  ಹೊರತು ಮತ್ತೇನು ಮಾಡಿಲ್ಲ. ಕೊರೋನ ಸಂದರ್ಭದಲ್ಲಿ ತಬ್ಲಿಘಿಗಳಿಂದ ಕೊರೋನ ರೋಗ ಬಂತು ಎಂದು ಬಾಯಿ ಬಡಿದುಕೊಂಡರಲ್ಲ, ಇವರಿಗೂ ಎರಡು ಬಾರಿ ಕೊರೋನ ಬಂದಿತ್ತಲ್ಲ, ಇವರ್ಯಾಕೆ ತಬ್ಲಿಘಿ ಬಳಿ ಹೋಗಿದ್ದರು ಎಂದು ಪ್ರೆಶ್ನೆ ಮಾಡಿದರು.

ಇವರು ಎಲ್ಲಿಗೆ ಹೋದರೂ ಮೋದಿ, ಉಪನಯನ, ಕಾರ್ಯಕ್ರಮ, ಮಾಧ್ಯಮದವರು ಸೇರಿ ಯಾರ ಜೊತೆಗೂ ಮಾತನಾಡುವಾಗಲು ಮೋದಿ, ಈ ದೇಶದಲ್ಲಿ ಬಿಜೆಪಿಯವರೆಲ್ಲರೂ ಪರಿಶುದ್ಧರೇ? ಇವರ ಪರಿಶುದ್ಧತೆಯನ್ನು ಇನ್ನು 15 ದಿನದಲ್ಲಿ ಇಲ್ಲೂ ಸಹ ಬಹಿರಂಗ ಮಾಡುತ್ತೇನೆ, ಜ್ಞಾನೇಂದ್ರ ಅವರ ವಿರುದ್ಧ ದೊಡ್ಡ ಮಟ್ಟಿನ ಪ್ರತಿಭಟನೆ ಸದ್ಯದಲ್ಲೇ ಆಗಲಿದೆ. ಸಭೆಯಲ್ಲಿ ಮಾತನಾಡುವಾಗ ಸಭೆಗೆ ಸಂಬಂಧಪಟ್ಟ ಮಾತನಾಡಲು ಹೇಳಿ, ಮೋರಿ ಮೋದಿ ಆರ್ ಎಸ್ ಎಸ್ ಅನ್ನುವ ಬದಲು ಕಾರ್ಯಕ್ರಮದ ಬಗ್ಗೆ ಮಾತನಾಡಲು ಹೇಳಿ ಅದು ಅವರಿಗೂ ಹಾಗೂ ಸಭೆಗೂ ಒಳ್ಳೆಯದು ಎಂದರು.

ಈ ಸಂದರ್ಭದಲ್ಲಿ ನಾರಾಯಣ ರಾವ್, ವಿಶ್ವನಾಥ್ ಶೆಟ್ಟಿ, ವಿಲಿಯಮ್ ಮಾರ್ಟಿಸ್, ರಹಮತುಲ್ಲಾ ಅಸಾದಿ, ಗೀತಾ ರಮೇಶ್ ಸುಶೀಲ ಶೆಟ್ಟಿ, ಶಬನಮ್, ರತ್ನಾಕರ್ ಶೆಟ್ಟಿ, ರಾಘವೇಂದ್ರ ಶೆಟ್ಟಿ ಸೇರಿ ಹಲವರು ಉಪಸ್ಥಿತರಿದ್ದರು.






Previous Post Next Post