ಈಶ್ವರಪ್ಪ ನಿವಾಸಕ್ಕೆ 9 ಸ್ವಾಮೀಜಿಗಳ ಭೇಟಿ: ಎಲ್ಲರೂ ನಿಮ್ಮ ಪರವಾಗಿ ಇದ್ದೇವೆಂದು ಅಭಯ

ಈಶ್ವರಪ್ಪ ನಿವಾಸಕ್ಕೆ 9 ಸ್ವಾಮೀಜಿಗಳ ಭೇಟಿ: ಎಲ್ಲರೂ ನಿಮ್ಮ ಪರವಾಗಿ ಇದ್ದೇವೆಂದು ಅಭಯ

ಶಿವಮೊಗ್ಗ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ತಮ್ಮ ಮೇಲೆ ಆರೋಪ ಬಂದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಸ್ಥಾನಕ್ಕೆ ಕೆ.ಎಸ್​.ಈಶ್ವರಪ್ಪ ರಾಜೀನಾಮೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ನಿವಾಸಕ್ಕೆ ಹಲವು ಸ್ವಾಮೀಜಿಗಳು ಭೇಟಿ ನೀಡಿದ್ದಾರೆ.

ಮಾದಾರ ಚನ್ನಯ್ಯ ಸ್ವಾಮೀಜಿ, ಕಾಗಿನೆಲೆಯ ಪುರುಷೋತ್ತಮನಂದಪುರಿ ಸ್ವಾಮೀಜಿ, ಹೊಸದುರ್ಗದ ಈಶ್ವರನಂದಪುರಿ ಸ್ವಾಮೀಜಿ ಸೇರಿದಂತೆ ಒಟ್ಟು 9 ಸ್ವಾಮೀಜಿಗಳು ಈಶ್ವರಪ್ಪ ನಿವಾಸಕ್ಕೆ ಆಗಮಿಸಿದ್ದಾರೆ. ಪ್ರಸ್ತುತ ಬೆಳವಣಿಗೆ ಬಗ್ಗೆ ಈಶ್ವರಪ್ಪ ಜೊತೆ ಚರ್ಚೆ ನಡೆಸಿದ್ದು, ಮಾಜಿ ಸಚಿವರಿಗೆ ವಿಚಲಿತರಾಗದಂತೆ ಧೈರ್ಯ ತುಂಬಿದ್ದಾರೆ.


ಸ್ವಾಮೀಜಿಗಳ ಭೇಟಿ ಸಮಯದಲ್ಲೇ ಮಂತ್ರಾಲಯ ಶ್ರೀಗಳು‌ ಕೂಡ ಮಾಜಿ ಸಚಿವ ಈಶ್ವರಪ್ಪಗೆ ಕರೆ ಮಾತನಾಡಿದ್ದಾರೆ. ಎಲ್ಲರೂ ನಿಮ್ಮ ಪರವಾಗಿ ಇದ್ದೇವೆ ಎಂದು ಮಂತ್ರಾಲಯದ ಸುಭುದೇಂದ್ರ ಶ್ರೀಗಳು ಅಭಯ ನೀಡಿದರು. ಇದೇ ವೇಳೆ ಈಶ್ವರಪ್ಪ ತಮ್ಮ ಮೊಮ್ಮಗನ ವಿವಾಹದ ಆಮಂತ್ರಣ ಪತ್ರಿಕೆಯನ್ನು ಸ್ವಾಮೀಜಿಗಳಿಗೆ ನೀಡಿದರು.

 

Previous Post Next Post