ಬೈಕ್ ಖರೀದಿಸಲು ಫೈನಾನ್ಸನಿಂದ ಹಣ ಪಡೆದ ವ್ಯಕ್ತಿಯೋರ್ವ ಕಳೆದ 11 ತಿಂಗಳಿಂದ ಹಣ ಕಟ್ಟದೆ ಇದ್ದು ಹಣ ಕಟ್ಟುವಂತೆ ಹೇಳಲು ಬಂದ ಫೈನಾನ್ಸ್ ನೌಕರರ ಮೇಲೆ ಹಲ್ಲೆ ಮಾಡಿರುವ ಘಟನೆ ಶಿಕಾರಿಪುರದ ಡಿ.ಬಿ.ಹಳ್ಳಿಯಲ್ಲಿ ನಡೆದಿದೆ.
ಡಿ.ಬಿ.ಹಳ್ಳಿಯ ನಿವಾಸಿ ಕಲೀಮುಲ್ಲಾ ಎಂಬುವನು ಬೈಕ್ ಖರೀದಿಗಾಗಿ ಶಿಕಾರಿಪುರದ ಶ್ರೀರಾಮ್ ಫೈನಾನ್ಸ್ ನಿಂದ ಸಾಲ ಪಡೆದಿದ್ದನು. ಕಳೆದ 11 ತಿಂಗಳಿಂದ ಹಣ ಕಟ್ಟದೆ ಇದ್ದ ಹಿನ್ನಲೆಯಲ್ಲಿ ನಿನ್ನೆ ಫೈನಾನ್ಸ್ ನ ವೆರಿಫಿಕೇಷನ್ ಆಫೀಸರ್ ವಿನಯ್ ಕುಮಾರ್ ಮತ್ತು ಹರೀಶ್ ಕುಮಾರ್ ಕರೀಮುಲ್ಲಾರನ್ನ ಭೇಟಿಯಾಗಿರುತ್ತಾರೆ.
11 ತಿಂಗಳಿಂದ ಕಂತುಕಟ್ಟಿಲ್ಲ ಯಾಕಪ್ಪ ಎಂದು ಕೇಳಿದ ಸಿಬ್ವಂದಿಗಳನ್ನ ಕರೀಮುಲ್ಲಾ ದಿಡೀರಂತ ದಾಳಿ ನಡೆಸುತ್ತಾನೆ. ರಸ್ತೆ ಬದಿಯಲ್ಲಿ ಬಿದ್ದಿದ್ದ ಇಟ್ಟಿಗೆ ತೆಗೆದುಕೊಂಡು ವೆರಿಫಿಕೇಷನ್ ಅಧಿಕಾರಿ ವಿನಯ್ ಕುಮಾರ್ ನ ಪಕ್ಕೆಗೆ ಹೊಡೆದು ನೋವುಂಟು ಮಾಡುತ್ತಾನೆ.
ನಂತರ ಹರೀಶ್ ಮತ್ತು ಉಮೇಶ್ ಎಂಬುವರು ಬಂದು ಗಲಾಟೆ ಬಿಡಿಸಿರುತ್ತಾರೆ. ಇನ್ನೊಮ್ಮೆ ಹಣಕೇಳಲು ಬಂದ್ರೆ ಜೀವ ಸಮೇತ ಉಳಿಸುವುದಿಲ್ಲವೆಂದು ಕಲೀಮುಲ್ಲಾ ವಿನಯ್ ಕುಮಾರ್ ಗೆ ಜೀವಬೆದರಿಕೆ ಹಾಕಿದ್ದಾನೆ. ವಿನಯ್ ಕುಮಾರ್ ಕಲೀಮುಲ್ಲಾ ವಿರುದ್ಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

