ಯೋಗದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿಯ ಸಂಹಿತಾ ಎನ್ ಉಡುಪ Yoga

ಯೋಗದಲ್ಲಿ ಅಂತರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾದ ವಾಗ್ದೇವಿಯ ಸಂಹಿತಾ ಎನ್ ಉಡುಪ

ತೀರ್ಥಹಳ್ಳಿ :  ದಿನಾಂಕ 31.10.2026 ರಂದು ಬೆಂಗಳೂರಿನಲ್ಲಿ ನಡೆದ ಎನ್.ವೈ.ಎಸ್.ಎಫ್ (NYSF) ರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಗೆಲುವನ್ನು ಸಾಧಿಸಿ , ಮುಂದಿನ ದಿನಗಳಲ್ಲಿ ದುಬೈನಲ್ಲಿ ನಡೆಯಲಿರುವ ಅಂತರರಾಷ್ಟ್ರೀಯ ಯೋಗ ಸ್ಪರ್ಧೆಗೆ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ 8ನೆಯ ತರಗತಿಯ ವಿದ್ಯಾರ್ಥಿನಿ ಕು. ಸಂಹಿತಾ ಎನ್ ಉಡುಪ ಆಯ್ಕೆಯಾಗಿದ್ದಾಳೆ.

ಈ ಸ್ಪರ್ಧೆಗೆ ಒಟ್ಟು 15 ರಾಜ್ಯಗಳಿಂದ ಯೋಗಪಟುಗಳು ಬಂದಿದ್ದು ಅದರಲ್ಲಿ ಸಂಹಿತಾ ಬಳುಕುವ ಲತೆಯಂತೆ ತನ್ನ ಪಟುತ್ವವನ್ನು ತೋರಿಸಿ ಗೆಲುವೆಂಬ ಬೆಳ್ಳಿಯ ಕಿರೀಟವನ್ನು ಮುಡಿಗೇರಿಸಿಕೊಳ್ಳುವುದರ ಜೊತೆ ಶಾಲೆಗೆ , ತಾಲ್ಲೂಕಿಗೆ , ಜಿಲ್ಲೆಗೆ ಹಾಗು ರಾಜ್ಯಕ್ಕೆ ಕೀರ್ತಿಯನ್ನು ತಂದಿರುತ್ತಾಳೆ. ಇವಳು ಕುರುವಳ್ಳಿಯ ಶ್ರೀಪ್ರದಾ ಹಾಗು ನಟೇಶ್ ದಂಪತಿಗಳ ಪುತ್ರಿ . 

ಸಂಹಿತಾಳ ಸಾಧನೆಯನ್ನು ವಾಗ್ದೇವಿ ಸಮೂಹ ಸಂಸ್ಥೆಯ ಅಧ್ಯಕ್ಷರು , ಸದಸ್ಯರು , ಶಿಕ್ಷಕವೃಂದ , ಪೋಷಕರು ಹಾಗು ಸಮಸ್ತ ನಾಗರಿಕರು ಅಭಿನಂದಿಸಿ ಮುಂದಿನ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಲಿ ಎಂಬುದಾಗಿ ಹಾರೈಸಿದ್ದಾರೆ .
Previous Post Next Post