ಡಿವಿಷನ್ ಗೆ ಆಯ್ಕೆಯಾದ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು Vagdevi

ಡಿವಿಷನ್ ಗೆ ಆಯ್ಕೆಯಾದ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು

ತೀರ್ಥಹಳ್ಳಿ : ದಿನಾಂಕ 05.10.2026 ರಂದು ಸ್ಕೂಲ್ ಗೇಮ್ಸ್ ಫೆಡರೇಷನ್ ಆಫ್ ಇಂಡಿಯಾ (SGFI) ಅವರು ಭದ್ರಾವತಿಯಲ್ಲಿ ಆಯೋಜಿಸಿದ್ದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಕ್ರಿಕೆಟ್ ಕ್ರೀಡಾಕೂಟದಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಅತ್ಯದ್ಭುತವಾಗಿ ಆಟವನ್ನು ಪ್ರದರ್ಶಿಸಿ U-17 ರ ವಿಜಯಮಾಲೆಯನ್ನು ತಮ್ಮದ್ದಾಗಿಸಿಕೊಂಡಿರುತ್ತಾರೆ. 

ಮುಂಬರುವ ಇದೇ ತಿಂಗಳ 09.10, ಮತ್ತು 11 ತಾರೀಖಿನಂದು ಭದ್ರಾವತಿಯಲ್ಲಿ ನಡೆಯುವ ವಿಭಾಗೀಯಮಟ್ಟಕ್ಕೆ ಆಯ್ಕೆಯಾಗಿ ಇಡೀ ತಾಲ್ಲೂಕಿಗೆ ಸಂತೋಷವನ್ನು ತಂದಿರುತ್ತಾರೆ.

ಆಯ್ಕೆಯಾದ ವಿದ್ಯಾರ್ಥಿಗಳ ವಿವರ 👇

ಉತ್ಸವ್ ಗೌಡ (10ನೆಯ ತರಗತಿ), ಪಾರ್ಥ ಕೆ.ವಿ (10ನೆಯ ತರಗತಿ), ವರ್ಚಸ್ (10ನೆಯ ತರಗತಿ), ನೈರುತ್ (9ನೆಯ ತರಗತಿ), ಹೃದಯ್ (9ನೆಯ ತರಗತಿ), ವಿರಾಟ್ (9ನೆಯ ತರಗತಿ), ಅಮಿತ್ (9ನೆಯ ತರಗತಿ), ಅಗಸ್ತ್ರ(9ನೆಯ ತರಗತಿ),

ಇವರ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕವೃಂದ ಮತ್ತು ಪೋಷಕರು ಅಭಿನಂದಿಸಿ ಮುಂದಿನ ಕ್ರೀಡೆಗೆ ಶುಭಹಾರೈಸಿರುತ್ತಾರೆ.


Previous Post Next Post