ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ವಿಶೇಷ ಪೂಜೆ
ತೀರ್ಥಹಳ್ಳಿ : ಪುರಾಣ ಪ್ರಸಿದ್ಧ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿ ಸರ್ ವಿಶೇಷ ಪೂಜಾ ಪೂಜಾ ಕಾರ್ಯಕ್ರಮಗಳನ್ನು ಪರಾಭವ ಸಂವತ್ಸರದ ಆಶ್ವಯುಜ ಶುಕ್ಲ ಪ್ರತಿಪದೆಯಿಂದ ಆಶ್ವಯುಜ ದಶಮಿಯವರೆಗೆ ದಿನಾಂಕ 11-10-2026 ರಿಂದ 21-10-2026ರ ವರೆಗೆ ಹಮ್ಮಿಕೊಳ್ಳಲಾಗಿದೆ.
ಪ್ರತಿದಿನ ಸಂಜೆ 5.30 ರಿಂದ ದುರ್ಗಾ ಸಪ್ತಶತಿ ಪಾರಾಯಣ, ಕುಂಕುಮಾರ್ಚನೆ ಹಾಗೂ ಇತರೆ ದೇವತಾ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ದಿನಾಂಕ 21-10-2026ರ ಬುಧವಾರ ವಿಜಯದಶಮಿ ದಿನದಂದು ಬೆಳಿಗ್ಗೆ ದುರ್ಗಾ ಹೋಮ ನೆರವೇರಲಿದೆ.
ಆಸ್ತಿಕ ಭಕ್ತ ಮಹಾಜನರು ಪುಣ್ಯ ಪ್ರದವಾದ ಈ ಶರನ್ನವರಾತ್ರೋತ್ಸವದಲ್ಲಿ ಸೇವೆಗಳನ್ನು ನೆಡೆಸಿ ಶ್ರೀ ಜಗನ್ಮಾತೆ ಹಾಗೂ ಸಪರಿವಾರ ಶ್ರೀ ರಾಮೇಶ್ವರ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೋರಲಾಗಿದೆ.
ವಿಶೇಷ ಸೂಚನೆ
ದುರ್ಗಾ ಪಾರಾಯಣ, ರುದ್ರಾಭಿಷೇಕ, ಕುಂಕುಮಾರ್ಚನೆ ಹಾಗೂ ಇತರೆ ಸೇವೆಗಳನ್ನು ಮಾಡಿಸಲು ಇಚ್ಛಿಸುವ ಭಕ್ತರು ಅರ್ಚಕರಲ್ಲಿ ತಮ್ಮ ಹೆಸರು, ರಾಶಿ ಮತ್ತು ನಕ್ಷತ್ರದ ವಿವರಗಳನ್ನು ನೀಡುವಂತೆ ಕೋರಲಾಗಿದೆ..
Tags:
ತೀರ್ಥಹಳ್ಳಿ ಸುದ್ದಿ