ಹಲವಾರು ಕಾರ್ಯಕ್ರಮಗಳೊಂದಿಗೆ ತೀರ್ಥಹಳ್ಳಿ ದಸರಾ ಸಂಪನ್ನ! Thirthahalli Dasara

ಹಲವಾರು ಕಾರ್ಯಕ್ರಮಗಳೊಂದಿಗೆ ತೀರ್ಥಹಳ್ಳಿ ದಸರಾ ಸಂಪನ್ನ!
-ಕಣ್ಮನ ಸೆಳೆದ ಟ್ಯಾಬ್ಲೋಗಳು ಹಾಗೂ ದಾಂಡಿಯಾ ನೃತ್ಯ 

ತೀರ್ಥಹಳ್ಳಿ : ಬನ್ನಿ ಪೂಜೆಯೊಂದಿಗೆ ತೀರ್ಥಹಳ್ಳಿ ದಸರಾ
ಸಂಪನ್ನಗೊಂಡಿತು. ಶಾಸಕ ಆರಗ ಜ್ಞಾನೇಂದ್ರ, ತಹಸೀಲ್ದಾರ್ ರಂಜಿತ್ ಅವರು ಕುಶಾವತಿಯ ನೆಹರು ಪಾರ್ಕಿನಲ್ಲಿ ಬನ್ನಿ ಪೂಜೆ ನೆರವೇರಿಸಿದರು. ಬಳಿಕ ಜನರು ಘೋಷಣೆ ಕೂಗಿ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡರು.

ಇದಕ್ಕೂ ಮೊದಲು ರಾಮೇಶ್ವರ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಚಂಡೆ ಭಾರಿಸುವ ಮೂಲಕ ಶಾಸಕ ಆರಗ ಜ್ಞಾನೇಂದ್ರ, ಮಲೆನಾಡು ಪ್ರಾಧಿಕಾರ ಅಭಿವೃದ್ಧಿ ಮಂಡಳಿ ನಿಗಮದ ಅಧ್ಯಕ್ಷರಾದ ಆರ್ ಎಂ ಮಂಜುನಾಥ್ ಗೌಡರು, ಹಾಗೂ ತಹಸೀಲ್ದಾ‌ರ್ ರಂಜಿತ್ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಚಾಮುಂಡೇಶ್ವರಿ ಮೂರ್ತಿಗೆ ಶಾಸಕ ಆರಗ, ಆರ್ ಎಂ ಎಂ ಸೇರಿದಂತೆ ಪ್ರಮುಖರು ಪುಷ್ಪಾರ್ಚನೆ ಮಾಡಿದರು.

ರಾಮೇಶ್ವರ ದೇವಸ್ಥಾನದಿಂದ ಮೆರವಣಿಗೆ ಹೊರಟು ಗಾಂಧಿಚೌಕ, ಆಗುಂಬೆ ಬಸ್ ನಿಲ್ದಾಣ, ಕೊಪ್ಪ ಸರ್ಕಲ್ ಮೂಲಕ ಕುಶಾವತಿಯ ನೆಹರು ಪಾರ್ಕ್ ಅನ್ನು ತಲುಪಲಾಯಿತು. ಈ ವೇಳೆ ಚಾಮುಂಡೇಶ್ವರಿ ದೇವರ ಜೊತೆಗೆ ಆಕರ್ಷಕ ಮೆರವಣಿಗೆಯಲ್ಲಿ ಸಾವಿರಾರು ಜನ ಭಾಗಿಯಾಗಿದ್ದರು. ಸ್ತಬ ಚಿತ್ರಗಳ ಮೆರವಣಿಗೆ, ಕಲಾ ತಂಡಗಳ ಮೆರವಣಿಗೆ ಜೊತೆ ಬನ್ನಿ ಮಂಟಪಕ್ಕೆ ತಲುಪಲಾಯಿತು.

ಕಣ್ಮನ ಸೆಳೆದ ಸರಸ್ವತಿ ಟ್ಯಾಬ್ಲೊ!  ದಾಂಡಿಯಾ ನೃತ್ಯ!

ಈ ಬಾರಿ ದಸರಾ ಮೆರವಣಿಗೆಯಲ್ಲಿ ಟ್ಯಾಬ್ಲೋಗಳು ಜನರ ಕಣ್ಮನ ಸೆಳೆದವು. ಅದರಲ್ಲೂ ಸರಸ್ವತಿ ದೇವಿಯ ಟ್ಯಾಬ್ಲೋ ಪ್ರಮುಖ ಆಕರ್ಷಣೆಯಾಗಿತ್ತು.. ಅಲ್ಲದೆ ಪ್ರಥಮ ಬಾರಿ ದಾಂಡಿಯಾ ನೃತ್ಯ ಜನರಿಂದ ಪ್ರಶಂಸೆಗೆ ಒಳಪಟ್ಟಿತು..
ಮೆರವಣಿಗೆಯಲ್ಲಿ ಡೊಳ್ಳು ಕುಣಿತ,, ಚಂಡೆ ಮದ್ದಳೆ, ಕೀಲು ಕುಣಿತ, ಗೊಂಬೆ ಕುಣಿತ, ಭಜನಾ ಕುಣಿತದ ಜೊತೆಗೆ ಸ್ತಬ್ದ ಚಿತ್ರಗಳು ಕಾಣಿಸಿಕೊಂಡವು. ಅದರಲ್ಲೂ ಪ್ರಮುಖವಾಗಿ ಪಾರ್ಥ ಸಾರಥಿ, ಈಶ್ವರ ನಂದಿ, ರಾಮಮಂದಿರ, ಕಸ್ತೂರಿ ರಂಗನ್ ವರದಿ,  ವೆಂಕಟರಮಣ, ಅಕೇಶಿಯ, ದ್ರೌಪದಿ ವಸ್ತ್ರಾಪಹರಣ, ರಾವಣ , ಮೊಗವೀರ ಸಂಘಟನೆಯ ಟ್ಯಾಬ್ಲೋ, ಶಿವ ತಾಂಡವ ಹೀಗೆ ಎಲ್ಲಾ ಟ್ಯಾಬ್ಲೋ ಜನರ ಕಣ್ಮನ ಸೆಳೆದವು..


 ನೈಂಟಿ ರಾಘಣ್ಣನ ಹಂಡ್ರೆಡ್ ಪರ್ಸೆಂಟ್ ದಸರಾ..!

ಈ ಬಾರಿ ತೀರ್ಥಹಳ್ಳಿಯಲ್ಲಿ ಪ್ರಮುಖ ಬದಲಾವಣೆಯಾಗಿದ್ದು ದಸರಾ ಸಮಿತಿ ಸಂಚಾಲಕರು.. ಈ ಬಾರಿ ದಸರಾ ಸಮಿತಿಯ ಸಂಚಾಲಕರಾಗಿ ಸೊಪ್ಪುಗುಡ್ಡೆ ರಾಘವೇಂದ್ರ ಅವರನ್ನು ಆಯ್ಕೆ ಮಾಡಲಾಗಿತ್ತು.. ಮೊದಲ ಬಾರಿಯ ಸಂಚಾಲಕತ್ವದಲ್ಲೇ ನೈಂಟಿ ರಾಘಣ್ಣ ಹಂಡ್ರೆಡ್ ಪರ್ಸೆಂಟ್ ದಸರಾ ಕಾರ್ಯಕ್ರಮ ಮಾಡಿ ಮುಗಿಸಿದರು.. ಯುವ ದಸರಾ, ಮಹಿಳಾ ದಸರಾ,  ಕಲಾದಸರಾ ಹಾಗೂ  ಕಡೆಯ ದಿನ ಮೆರವಣಿಗೆಯ ಮೂಲಕ ಪ್ರತಿಯೊಂದು ಕಾರ್ಯಕ್ರಮವು ಅತ್ಯಂತ ಅಚ್ಚುಕಟ್ಟಿನಿಂದ ಮಾಡುವ ಮೂಲಕ ಅದರಲ್ಲೂ ಮೆರವಣಿಗೆಯಲ್ಲಿ ಇಷ್ಟು ವರ್ಷಗಳಿಗಿಂತಲೂ ಈ ಬಾರಿ ವಿಭಿನ್ನ ಆಕರ್ಷಣೆಗಳ ಸ್ತಬ್ದ ಚಿತ್ರ ಹೀಗೆ ಎಲ್ಲಾ ವಿಷಯದಲ್ಲೂ ಹಂಡ್ರೆಡ್ ಪರ್ಸೆಂಟ್ ಮಾಡುವ ಮೂಲಕ ದಾಖಲೆ ಬರೆದರು..

ಮುಂದಿನ ಬಾರಿ ನಿರೀಕ್ಷೆ..!

ಈ ಬಾರಿ ಸೊಪ್ಪುಗುಡ್ಡೆ ರಾಘವೇಂದ್ರ ಅವರ ನೇತೃತ್ವದ ಈ ದಸರಾ ಅತ್ಯಂತ ಯಶಸ್ವಿಯಾಗಿದ್ದು ಮುಂದಿನ ಬಾರಿಯೂ ಸೊಪ್ಪುಗುಡ್ಡೆ ರಾಘವೇಂದ್ರ ಅವರೇ ಸಂಚಾಲಕತ್ವ ವಹಿಸಿಕೊಂಡು ಇನ್ನಷ್ಟು ಮೆರಗು ನೀಡಲಿ ಎಂಬುದಾಗಿ ಸಾರ್ವಜನಿಕರ ಅಭಿಪ್ರಾಯ ಕೇಳಿ ಬಂದಿತು..

ಈ ಬಾರಿ ದಸರಾ ಮೆರವಣಿಗೆಯಲ್ಲಿ ಜನಸಾಗರ 

ತೀರ್ಥಹಳ್ಳಿ ದಸರಾ ಈ ಬಾರಿ ಹೇಗಿರುತ್ತೆ? ಎಂಬ ಪ್ರೆಶ್ನೆ ಒಂದೆಡೆಯಾದರೆ ಮೆರವಣಿಗೆಯಲ್ಲಿ ಟ್ಯಾಬ್ಲೋ ಜಾಸ್ತಿ ಇರಲಿವೆ ಎಂಬ ಮಾಧ್ಯಮಗಳ ವರದಿಯಿಂದ ಜನರಲ್ಲೂ ಕುತೂಹಲ ಮೂಡಿತ್ತು.. ಈ ಕಾರಣದಿಂದ ಈ ಬಾರಿ ದಸರಾ ಮೆರವಣಿಗೆ ನೋಡಲು ಜನಸಾಗರವೇ ಹರಿದು ಬಂದಿತ್ತು. ಸರಿ ಸುಮಾರು 20 ಸಾವಿರಕ್ಕೂ ಹೆಚ್ಚು ಜನರು ಇಂದು ಪಟ್ಟಣದಲ್ಲಿ ಸೇರಿದ್ದರು.  ದಸರಾ ಮೆರವಣಿಗೆ ನೋಡಿ ಎಲ್ಲರೂ ಸಂಭ್ರಮ ಪಟ್ಟು ಮನೆಗೆ ತೆರಳಿದರು..

Previous Post Next Post