ಜಯಕರ್ನಾಟಕ ಸಂಘಟನೆ ಪ್ರತಿಭಟನೆ ಬೆನ್ನಲ್ಲೇ ಎಚ್ಚೆತ್ತ ಆರ್ಟಿಓ ಅಧಿಕಾರಿಗಳು - ದುರ್ಗಂಬಾ ಬಸ್ ಮೇಲೆ ದಿಡೀರ್ ದಾಳಿ- ಕೇಸ್ ದಾಖಲು !
ತೀರ್ಥಹಳ್ಳಿ : ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಆಗಮಿಸುವ ಖಾಸಗಿ ಬಸ್ ಆಗಿರುವ ದುರ್ಗಾಂಬ ಬಸ್ ನಲ್ಲಿ ಯಾವುದೇ ಕಾರಣಕ್ಕೂ ಸೀಟ್ ಕೊಡದೆ ಅಲ್ಲದೆ ಏಜೆಂಟರಗಳ ದರ್ಪದ ವಿಚಾರಕ್ಕೆ ಸಂಬಂಧಪಟ್ಟಂತೆ ತೀರ್ಥಹಳ್ಳಿಯ ಜಯ ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ಬೆನ್ನಲ್ಲೇ ಎಚ್ಚೆತ್ತ ರಾಜ್ಯ ರಸ್ತೆ ಪ್ರಾಧಿಕಾರ ನಿಗಮದ ಅಧಿಕಾರಿಗಳು ದುರ್ಗಂಬಾ ಬಸ್ ಮೇಲೆ ದಿಡೀರ್ ದಾಳಿ ನಡೆಸಿ ಕೇಸ್ ದಾಖಲು ಮಾಡಿದ್ದಾರೆ..
ಹಲವು ವರ್ಷಗಳಿಂದ ದುರ್ಗಾಂಬ ಬಸ್ ಏಜೆಂಟರಗಳು ತೀರ್ಥಹಳ್ಳಿಯ ಯಾವುದೇ ಸಾರ್ವಜನಿಕರನ್ನು ತಡರಾತ್ರಿ ಹೊತ್ತಿನಲ್ಲಿ ಹತ್ತಿಸದೆ, ಟಿಕೆಟ್ ಕೊಡದೆ ಅಲ್ಲದೆ ಏಜೆಂಟರಗಳು ದರ್ಪ ಮೆರೆಯುತ್ತಿದ್ದು ಹೆಣ್ಣು ಮಕ್ಕಳ ಮೇಲೆ ಅವಾಚ್ಯ ಶಬ್ದದಿಂದ ನಿಂದಿಸುತ್ತಿದ್ದಾರೆ ಎಂಬ ಆರೋಪ ಸಹ ಕೇಳಿಬಂದಿದೆ.. ಈ ಹಿನ್ನೆಲೆಯಲ್ಲಿ ಜಯ ಕರ್ನಾಟಕ ಸಂಘಟನೆ ವತಿಯಿಂದ ಪ್ರತಿಭಟನೆ ಕರೆ ನೀಡಲಾಗಿತ್ತು..
ಜೈ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷರಾದ ಕುರುವಳ್ಳಿ ನಾಗರಾಜ್ ಅವರ ನೇತೃತ್ವದಲ್ಲಿ ಪ್ರತಿಭಟನೆ ಕರೆ ನೀಡಲಾಗಿತ್ತು.. ಪ್ರತಿಭಟನೆ ವಿಷಯ ತಿಳಿಯುತ್ತಿದ್ದಂತೆ ಎಚ್ಚೆತ್ತ ರಾಜ್ಯ ರಸ್ತೆ ಪ್ರಾಧಿಕಾರದ ಅಧಿಕಾರಿ ಮುರುಗೇಶ್ ಬಿ ಶಿರೋಡ್ಕರ್ ಬಸ್ ಮೇಲೆ ದಾಳಿ ನಡೆಸಿ ಕೇಸ್ ದಾಖಲು ಮಾಡಿರುವುದಾಗಿ ತಿಳಿಸಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ