ತೀರ್ಥಹಳ್ಳಿಯ ಸಾರ್ವಜನಿಕ ಕ್ರೀಡಾಂಗಣದಲ್ಲಿ ಕಸದ ಮಯ - ಕಸ ತೆಗೆಯಲು ಮುಖ್ಯಮಂತ್ರಿಗಳೇ ಬರ್ಬೇಕಾ..!? ಸಾರ್ವಜನಿಕರ ಪ್ರೆಶ್ನೆ..!?
ತೀರ್ಥಹಳ್ಳಿ : ಕಸ್ತೂರಿ ರಂಗನ್ ವರದಿ ವಿಚಾರಕ್ಕೆ ಸಂಬಂಧಪಟ್ಟಂತೆ ಸಾರ್ವಜನಿಕರ ಜೊತೆಗೆ ಸಂವಾದ ನಡೆಸಲು ತೀರ್ಥಹಳ್ಳಿಗೆ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆಗಮಿಸಿದ್ದರು. ಕಾರ್ಯಕ್ರಮಕ್ಕೆ ಸರಿ ಸುಮಾರು 5 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು.. ಕಾರ್ಯಕ್ರಮ ಮುಗಿದು 5 ದಿನವಾದರೂ ಸಹ ಕಾರ್ಯಕ್ರಮ ನಡೆದ ಕ್ರೀಡಾಂಗಣ ಸಂಪೂರ್ಣ ಕಸದ ಮಯವಾಗಿದ್ದು ಕಸ ತೆಗೆಯಲು ಮುಖ್ಯಮಂತ್ರಿಗಳೇ ಬರ್ಬೇಕಾ..!? ಎಂಬುದಾಗಿ ಸಾರ್ವಜನಿಕರು ಪ್ರೆಶ್ನೆ ಮಾಡಿದ್ದಾರೆ..
ಮುಖ್ಯಮಂತ್ರಿಗಳು ಬರುವ ರಸ್ತೆಗೆ ತರಾತುರಿಯಲ್ಲಿ ಟಾರ್ ಹಾಕಿ ಸ್ವಾಗತ ಮಾಡಲಾಗಿತ್ತು. ಆದರೆ ಮುಖ್ಯಮಂತ್ರಿಗಳು ಕಾರ್ಯಕ್ರಮ ಮುಗಿಸಿ ಹೋದ ನಂತರ ಕ್ರೀಡಾಂಗಣದ ಬಳಿ ಯಾವ ಅಧಿಕಾರಿಗಳ ಸಹ ತಲೆ ಕೂಡ ಹಾಕಿದಂತೆ ಕಾಣಿಸುತಿಲ್ಲ.. ಕ್ರೀಡಾಂಗಣದ ಸುತ್ತಲೂ ಮಜ್ಜಿಗೆ ಪ್ಲಾಸ್ಟಿಕ್ ಕವರ್, ನೀರಿನ ಬಾಟಲ್, ಇತರ ಕಸಗಳು ರಾಶಿ ರಾಶಿ ಬಿದ್ದಿದ್ದು ಸಾರ್ವಜನಿಕರು ಈ ವಿಚಾರದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಯು ಆರ್ ಅನಂತಮೂರ್ತಿ ಪ್ರೌಢಶಾಲೆಯ ಮಕ್ಕಳು ಇದೆ ಕ್ರೀಡಾಂಗಣದಲ್ಲಿ ಆಟವನ್ನು ಆಡುತ್ತಾರೆ. ಪ್ರತಿನಿತ್ಯ ಬೆಳಗ್ಗೆ ಮತ್ತು ಸಂಜೆ ವೇಳೆ ವಾಯುವಿಹಾರಕ್ಕಾಗಿ ಹಲವರು ಕ್ರೀಡಾಂಗಣಕ್ಕೆ ಆಗಮಿಸುತ್ತಾರೆ. ಇಲ್ಲಿನ ಕಸವನ್ನು ನೋಡಿ ಬಹುಷಃ ಮುಖ್ಯಮಂತ್ರಿಗಳೇ ಮತ್ತೊಮ್ಮೆ ತೀರ್ಥಹಳ್ಳಿಗೆ ಬಂದಾಗ ಕಸ ತೆಗೆಸಬೇಕೇನೋ? ಎಂಬುದಾಗಿ ಮಾತನಾಡುತ್ತಿದ್ದಾರೆ..
Tags:
ತೀರ್ಥಹಳ್ಳಿ ಸುದ್ದಿ