ಮುಖ್ಯಮಂತ್ರಿ ಬರ್ತಾರೆ ಅಂತ ಒಂದು ರಸ್ತೆಗೆ ಗುಂಡಿ ಮುಚ್ಚಿಸಿದ್ರು - ಆದ್ರೆ ಮುಖ್ಯಮಂತ್ರಿಗಳು ಹೋಗಿದ್ದು ಹೊಂಡ ಬಿದ್ದ ರಸ್ತೆಯಲ್ಲೇ..!? ಪ್ಲಾನ್ ಉಲ್ಟಾ ಆಗಿದ್ದು ಯಾಕೆ..? Thirthahalli

ಮುಖ್ಯಮಂತ್ರಿ ಬರ್ತಾರೆ ಅಂತ ಒಂದು ರಸ್ತೆಗೆ ಗುಂಡಿ ಮುಚ್ಚಿಸಿದ್ರು - ಆದ್ರೆ ಮುಖ್ಯಮಂತ್ರಿಗಳು ಹೋಗಿದ್ದು ಹೊಂಡ ಬಿದ್ದ ರಸ್ತೆಯಲ್ಲೇ..!? ಪ್ಲಾನ್ ಉಲ್ಟಾ ಆಗಿದ್ದು ಯಾಕೆ..?

ತೀರ್ಥಹಳ್ಳಿ : ಸಾರ್ವಜನಿಕರ ಜೊತೆಗೆ ಕಸ್ತೂರಿ ರಂಗನ್ ವರದಿ ವಿಚಾರಕ್ಕೆ ಸಂಬಂಧಪಟ್ಟಂತೆ ಸಂವಾದ ನಡೆಸಲು ತೀರ್ಥಹಳ್ಳಿಗೆ ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಆಗಮಿಸಿದ್ದರು.. ಮುಖ್ಯಮಂತ್ರಿಗಳು ಆಗಮಿಸುವ ಕಾರಣದಿಂದ ಹೊಂಡ - ಗುಂಡಿ ಬಿದ್ದಿದ್ದಂತಹ ಸಾರ್ವಜನಿಕ ಕ್ರೀಡಾಂಗಣಕ್ಕೆ ಹೋಗುವಂತಹ ರಸ್ತೆ ಡಾಂಬರೀಕರಣ ಮಾಡಲಾಗಿತ್ತು..

ಮುಖ್ಯಮಂತ್ರಿಗಳು ಯಾವೆಲ್ಲ ರಸ್ತೆಯಲ್ಲಿ ಸಂಚರಿಸುತ್ತಾರೋ, ಆ ರಸ್ತೆಗಳಲ್ಲಿ ಎಲ್ಲೆಲ್ಲಿ ಹೊಂಡ - ಗುಂಡಿ ಬಿದ್ದಿದೆಯೋ ಅದನ್ನೆಲ್ಲ ಟಾರ್ ಹಾಕಿ ಸರಿ ಮಾಡಲಾಗಿತ್ತು.. ಈ ಎಲ್ಲ ವ್ಯವಸ್ಥೆ ಮಾಡಿದ್ದು ಕಾಂಗ್ರೆಸ್ ಆಡಳಿತ ಇರುವಂತ ಪಟ್ಟಣ ಪಂಚಾಯತ್.. ಮೂರು ವರ್ಷದಿಂದ ಹೊಂಡ - ಗುಂಡಿ ಆಗಿದ್ದಂತಹ ರಸ್ತೆಗೆ ಡಾಂಬರೀಕರಣ ಮಾಡಿ ಏನು ಸಮಸ್ಯೆ ಆಗದ ರೀತಿಯಲ್ಲಿ ನೋಡಿಕೊಂಡಿತ್ತು.. ಆದರೆ ಮುಖ್ಯಮಂತ್ರಿಗಳು ಬಂದ ನಂತರ ಪ್ಲಾನ್ ಸಂಪೂರ್ಣ ತಲೆಕೆಳಗಾಯಿತು..

ಮುಖ್ಯಮಂತ್ರಿಗಳು ಬರುವ ಸಲುವಾಗಿ ಡಾಂಬರೀಕರಣ ಮಾಡಿ ಹೊಂಡ ಗುಂಡಿ ರಸ್ತೆಯಲ್ಲಿ ಮುಖ್ಯಮಂತ್ರಿಗಳು ಬಾರದ ರೀತಿಯಲ್ಲಿ ನೋಡಿಕೊಂಡಿದ್ದರು ಸಹ ಪ್ಲಾನ್ ತಲೆಕೆಳಗಾದ ರೀತಿಯೇ ವಿಚಿತ್ರವಾಗಿತ್ತು.. ಮುಖ್ಯಮಂತ್ರಿಗಳು ಕಡೆಗೂ ಹೊಂಡ ಗುಂಡಿ ಬಿದ್ದಿದ್ದಂತ ರಸ್ತೆಯಲ್ಲೇ ಸಂಚರಿಸಿದ್ದು ಸಾರ್ವಜನಿಕರು ನಗುವಂತೆ ಮಾಡಿತು.. 

ಪ್ಲಾನ್ ಉಲ್ಟಾ ಆಗಿದ್ದು ಹೇಗೆ..!?

ಬಾಳೆಬೈಲಿನ ಡಿಗ್ರಿ ಕಾಲೇಜಿನ ಕ್ರೀಡಾಂಗಣದಲ್ಲಿ ಹೆಲಿಪ್ಯಾಡ್ ನಿರ್ಮಾಣ ಮಾಡಲಾಗಿತ್ತು.. ಅಲ್ಲಿಂದ ಶ್ರೀ ರಾಮೇಶ್ವರ ದೇವಸ್ಥಾನಕ್ಕೆ ಮುಖ್ಯಮಂತ್ರಿಗಳು ಹೋಗಿ ಪೂಜೆ ಸಲ್ಲಿಸಿ ಆನಂತರ ಜೂನಿಯರ್ ಕಾಲೇಜ್ ಕ್ರೀಡಾಂಗಣದಲ್ಲಿ ಸಂವಾದ ನಡೆಸಲು ಆಗಮಿಸಬೇಕಿತ್ತು.. ಆದರೆ ಸುವರ್ಣ ಸಹಕಾರ ಭವನದಲ್ಲಿ 75ನೇ ವರ್ಷದ ಅಮೃತ ಮಹೋತ್ಸವದ ಅಂಗವಾಗಿ ಮುಖ್ಯಮಂತ್ರಿಗಳನ್ನ ಕರದೊಯ್ದ ಶಾಸಕರು ಹಾಗೂ ಸಂಸದರು
ಪಟ್ಟಣ ಪಂಚಾಯಿತಿಯ ಹಾಗೂ ತಾಲೂಕು ಆಡಳಿತದ ಪ್ಲಾನ್ ತಲೆ ಕೆಳಗೆ ಮಾಡಿದರು ..

ಮುಖ್ಯಮಂತ್ರಿಗಳು ಬರುವ ಸಲುವಾಗಿ ಹೊಂಡ - ಗುಂಡಿ ರಸ್ತೆಯಲ್ಲಿ ಕರೆದೊಯ್ಯಬಾರದು ಎಂಬ ಆಡಳಿತದ ಪ್ಲಾನ್ ತಲೆಕೆಳಗಾಯಿತು.. ಕಡೆಗೂ ಮುಖ್ಯಮಂತ್ರಿಗಳು ಕೊಪ್ಪ ಸರ್ಕಲ್ ನ ಸಂತೆ ಮಾರ್ಕೆಟ್ ರಸ್ತೆಯಲ್ಲಿ ಅದೇ ಹೊಂಡ ಗುಂಡಿ ಬಿದ್ದಿದ್ದ ರಸ್ತೆಯಲ್ಲಿ ಸಂಚರಿಸಿದ್ದನ್ನ ನೋಡಿ ಅಧಿಕಾರಿಗಳು ಏನೇ ಪ್ಲಾನ್ ಮಾಡಿದರು ದೇವರ ಆಟವೇ ಬೇರೆಯದ್ದೆ ಆಗಿರುತ್ತದೆ ಎಂಬುದಾಗಿ ಸಾರ್ವಜನಿಕರು ಮಾತನಾಡಿದ್ದು ಕಂಡು ಬಂತು...

Previous Post Next Post