ಸ್ವಾರ್ಥಕ್ಕಾಗಿ ಚಿಲ್ಲರೆ ರಾಜಕಾರಣ ಮಾಡಬಾರದು - ಆರ್ ಎಂ ಮಂಜುನಾಥ್ ಗೌಡ RMM

ಸ್ವಾರ್ಥಕ್ಕಾಗಿ ಚಿಲ್ಲರೆ ರಾಜಕಾರಣ ಮಾಡಬಾರದು - ಆರ್ ಎಂ ಮಂಜುನಾಥ್ ಗೌಡ 

ತೀರ್ಥಹಳ್ಳಿ :  ಬಹಳ ಜನ ಬೇರೆ ಬೇರೆ ರೀತಿಯಲ್ಲಿ ಈ ವಿಚಾರದಲ್ಲಿ ಹೋರಾಟ ಮಾಡಿದ್ದಾರೆ. ಅದೆಲ್ಲವನ್ನು ನಾವು ಸ್ವಾಗತ ಮಾಡುತ್ತೇವೆ. ಆದರೆ ಹೋರಾಟದ ಸಂಘಟನೆಯನ್ನು ಒಡೆಯುವಂತಹ ಕೆಲಸವನ್ನು ಮಾಡಬಾರದು. ಸ್ವಾರ್ಥಕ್ಕಾಗಿ ಚಿಲ್ಲರೆ ರಾಜಕಾರಣ ಮಾಡಬಾರದು, ಪಕ್ಷಾತೀತ ವಾದಂತಹ ಹೋರಾಟ ನಡೆದರೆ ಅದಕ್ಕೊಂದು ಅರ್ಥ ಬರುತ್ತದೆ ಎಂದು ಮಲೆನಾಡು ಪ್ರದೇಶ ಅಭಿವೃದ್ಧಿ ನಿಗಮ ಮಂಡಳಿ ಅಧ್ಯಕ್ಷರಾದ ಆರ್ ಎಂ ಮಂಜುನಾಥಗೌಡ ಹೇಳಿದರು..

ತೀರ್ಥಹಳ್ಳಿಯ ಉಂಟೂರು ಕಟ್ಟೆ ಕೈಮರದಿಂದ ಪಾದಯಾತ್ರೆ ನಡೆಸಿ ತಾಲೂಕು ಕಚೇರಿ ಎದುರು ಮಾತನಾಡಿದ ಅವರು   ಆಗಸ್ಟ್ 29 ರಂದು ಹೊಸನಗರದ ಕಾರಣಗಿರಿ ಸಿದ್ಧಿವಿನಾಯಕ ಸ್ವಾಮಿ ದೇವಸ್ಥಾನದಿಂದ ಪ್ರಾರಂಭವಾಗಿ ಹೊಸನಗರದವರೆಗೆ, ಎರಡನೇ ಹಂತದಲ್ಲಿ ಸೆ. 3 ರಂದು ಸಾಗರದ ಆವಿನಹಳ್ಳಿಯಿಂದ 15 ಕಿಲೋಮೀಟರ್ ಪಾದಯಾತ್ರೆ , ಇವತ್ತು ಉಂಟೂರು ಕಟ್ಟೆ ಕೈಮರದಿಂದ ತೀರ್ಥಹಳ್ಳಿಯವರೆಗೆ ಮೂರನೇ ಹಂತದ ಪಾದಯಾತ್ರೆಯನ್ನು ನಾವು ಮುಗಿಸಿದ್ದೇವೆ  ಎಂದರು..
​
ಇದು ಹೋರಾಟದ ಪ್ರಾರಂಭದ ದಿನಗಳು. ಒಂದು ಆಶಾದಾಯಕ ಬೆಳವಣಿಗೆಯ ಮಧ್ಯೆ, '13 ನೇ ಇಸವಿಯಿಂದ '14 ನೇ ಇಸವಿಯಿಂದ ಪ್ರಾರಂಭವಾದ ಕಸ್ತೂರಿ ರಂಗನ್ ವರದಿಯ ಹೋರಾಟದ ಧ್ವನಿಗಳು ಈಗ ಒಂದು ಹಂತಕ್ಕೆ ಬಂದು ನಿಂತಿವೆ. ಆರು ಬಾರಿ ಆಕ್ಷೇಪಣೆಯನ್ನು ಕೇಂದ್ರದ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆಯ ಸಚಿವಾಲಯಕ್ಕೆ ಸಲ್ಲಿಸುವುದರ ಮೂಲಕ ಆಯಾ ಸಂದರ್ಭದಲ್ಲಿ ಆರು ಬಾರಿ ರಾಜ್ಯದಿಂದ ಆಕ್ಷೇಪಣೆಗಳನ್ನು ಸಲ್ಲಿಸಿದಂತಹ ಸರ್ಕಾರಗಳು ನಮ್ಮ ಮುಂದಿದ್ದಾವೆ. ಈಗ ಏಳನೇ ಬಾರಿ ಸನ್ಮಾನ್ಯ ಡಿ. ಕೆ. ಶಿವಕುಮಾರ್ ಅವರ ನೇತೃತ್ವದ ಸರ್ಕಾರ ಬಂದ ನಂತರ ಏಳನೇ ಬಾರಿ ಈ ಒಂದು ಕಸ್ತೂರಿ ರಂಗನ್ ವರದಿಯ ಕರಡು ಪ್ರತಿಯ ಆಕ್ಷೇಪಣೆ ಸಲ್ಲಿಸುವಂತಹ ಕಾರ್ಯಕ್ರಮ ನಡೆಯುತ್ತಿದೆ.  ಈ ಸಂದರ್ಭದಲ್ಲಿ ಅತ್ಯಂತ ಗಂಭೀರವಾದ ಪರಿಸ್ಥಿತಿಯಲ್ಲಿ ನಾವೆಲ್ಲ ಇದ್ದೇವೆ ಎಂದರು..

ಒಂದು ಆಶಾದಾಯಕ ಬೆಳವಣಿಗೆ, ಆರು ರಾಜ್ಯಗಳ ವ್ಯಾಪ್ತಿಯಲ್ಲಿ ಬರುವ ಈ ಕಸ್ತೂರಿ ರಂಗನ್ ವರದಿಯ ವ್ಯಾಪ್ತಿ ಮಹಾರಾಷ್ಟ್ರ, ಗೋವಾ, ಕರ್ನಾಟಕ, ಕೇರಳ, ತಮಿಳುನಾಡು, ಗುಜರಾತ್. ಯಾವುದೇ ಮುಖ್ಯಮಂತ್ರಿಗಳು ಕೂಡ ಇದಕ್ಕಾಗಿ ವಿಶೇಷ ಅಧಿವೇಶನ ಕರೆಯದೆ ಬರಿ ಆಕ್ಷೇಪಣೆ ಸಲ್ಲಿಸುವುದರ ಮೂಲಕ ಮಾಡಿದ್ದಾರೆ..  ಆದರೆ ಕರ್ನಾಟಕದಲ್ಲಿ ಮೊದಲನೇ ಬಾರಿಗೆ ಸನ್ಮಾನ್ಯ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು ನಮ್ಮೆಲ್ಲರ ಧ್ವನಿಗೆ ಪ್ರತಿಧ್ವನಿಯಾಗಿ ಸೆ. 21 ರಿಂದ ಮೂರು ದಿನ ಕಸ್ತೂರಿ ರಂಗನ್ ವರದಿಯ ಬಗ್ಗೆಯೇ ಚರ್ಚೆ ಮಾಡೋದಕ್ಕೆ, ಬದಲಾವಣೆ ಮಾಡೋದಕ್ಕೆ, ತಿರಸ್ಕಾರ ಮಾಡೋದಕ್ಕೆ  ಒಂದು ವಿಶೇಷ ಅಧಿವೇಶನವನ್ನು ವಿಧಾನಸಭೆ, ವಿಧಾನ ಪರಿಷತ್ ಅಲ್ಲಿ  ಕರೆದಿದ್ದಾರೆ. ಅದಕ್ಕಾಗಿ ಈ ವ್ಯಾಪ್ತಿಯ ಜನರ ಪರವಾಗಿ ನಾನು ವಿಶೇಷವಾದ ಅಭಿನಂದನೆಗಳನ್ನು, ಕೃತಜ್ಞತೆಗಳನ್ನು ಮಾನ್ಯ ಡಿ. ಕೆ. ಶಿವಕುಮಾರ್ ಅವರಿಗೆ ಸಲ್ಲಿಸೋದಕ್ಕೆ ಇಷ್ಟಪಡುತ್ತೇನೆ ಎಂದರು..
​
ವಿಶೇಷ ಅಧಿವೇಶನ ನಡೆಯುತ್ತದೆ ಆ ಸಂದರ್ಭದಲ್ಲಿ ಎಲ್ಲಾ ಪಕ್ಷದ ವಿಧಾನಸಭಾ ಸದಸ್ಯರು, ವಿಧಾನ ಪರಿಷತ್ ಸದಸ್ಯರು ಪಕ್ಷಭೇದ ಮರೆತು ರಾಜ್ಯಕ್ಕೆ, ಪಶ್ಚಿಮ ಘಟ್ಟದ ವಾಸಿಗಳಿಗೆ ಏನು ಅನ್ಯಾಯವಾಗಿದೆ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಪಶ್ಚಿಮ ಘಟ್ಟ ಸಂರಕ್ಷಣೆ ಆಗಬೇಕು, ಅಲ್ಲಿಯ ವಾಸಿಗಳ ಬದುಕು ಸಂರಕ್ಷಣೆ ಆಗಬೇಕು. ಆ ನಿಟ್ಟಿನಲ್ಲಿ ಚರ್ಚೆಗಳನ್ನು, ಆಶಾದಾಯಕ ರೀತಿ ಮಾಡುವಂತದ್ದು ಮತ್ತು ಅದಕ್ಕೊಂದು ನಿರ್ಣಯಗಳನ್ನು ಮಾಡಿ ಕೇಂದ್ರದ ಅರಣ್ಯ, ಪರಿಸರ, ಹವಾಮಾನ ಬದಲಾವಣೆ ಇಲಾಖೆಗೆ ಸಲ್ಲಿಸುವಂತದ್ದು, ಒತ್ತಡ ಹಾಕುವಂತದ್ದು ಮತ್ತು ತೀರ್ಮಾನ ಮಾಡುವಂತಹ ಕೆಲಸವನ್ನು ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ಆಗುತ್ತದೆ ಎನ್ನುವಂತಹ ಆಶಾಭಾವನೆಯಿಂದ ನಾವು ಇದ್ದೇವೆ ಎಂದರು..
​
ಈಗಾಗಲೇ ಅದಕ್ಕೆ ಆಕ್ಷೇಪಣೆ ಸಲ್ಲಿಸುವುದಕ್ಕೆ ನಾವು ಒಂದು ಆ್ಯಪ್ ಅನ್ನು ಬಿಡುಗಡೆ ಮಾಡಿದ್ದೇವೆ. ಎಲ್ಲಾ ರೈತರುಗಳಿಗೆ, ಅಲ್ಲಿ ರೈತರ ಹೆಸರು, ಅವರ ಫೋನ್ ನಂಬರ್,  ಇಮೇಲ್ ಐಡಿ, ಅವರ ಗ್ರಾಮದ ಹೆಸರು, ತಾಲೂಕು ಹೆಸರು, ಜಿಲ್ಲೆಯ ಹೆಸರು ಬರೆದು, ಕನ್ನಡದಲ್ಲಿ ಇರುವಂತಹ ಬಟನ್ ಒತ್ತಿದರೆ ನೇರವಾಗಿ ಮುಖ್ಯಮಂತ್ರಿಗಳಿಗೆ, ಅರಣ್ಯ ಸಚಿವರಿಗೆ, ಮುಖ್ಯ ಕಾರ್ಯದರ್ಶಿಗೆ ಇದು ಆಕ್ಷೇಪಣೆ ಹೋಗುತ್ತದೆ..  ಅದೇ ತರದ ಫಾರಂ ಇಂಗ್ಲಿಷ್‌ನಲ್ಲಿದೆ ಆ್ಯಪ್‌ನಲ್ಲಿ. ಅದರಲ್ಲಿ ನಿಮ್ಮ ಹೆಸರು,  ಇಮೇಲ್ ಐಡಿ,  ಫೋನ್ ನಂಬರ್, ಗ್ರಾಮ, ತಾಲೂಕು, ಜಿಲ್ಲೆಯಲ್ಲಿ ಏನಿದೆ ಅದನ್ನ ಇಂಗ್ಲಿಷ್‌ನಲ್ಲಿ ಒತ್ತಿದರೆ ನೇರವಾಗಿ ಕೇಂದ್ರ ಸರ್ಕಾರಕ್ಕೆ,  ಅರಣ್ಯ, ಪರಿಸರ, ಹವಾಮಾನ ಬದಲಾವಣೆ ಇಲಾಖೆಗೆ ಅಲ್ಲಿಗೆ ತಲುಪುತ್ತದೆ, ಎಂಡಾರ್ಸ್‌ಮೆಂಟ್ ತಕ್ಷಣ ಬರುತ್ತದೆ ಎಂದರು..

ಈ ಸಂದರ್ಭದಲ್ಲಿ ಬೇಳೂರು ಗೋಪಾಲಕೃಷ್ಣ, ಎಂ ಶ್ರೀಕಾಂತ್, ರಾಘವೇಂದ್ರ ಶೆಟ್ಟಿ, ರಹಮತ್ ಉಲ್ಲಾ ಅಸಾದಿ, 
 ಗೀತಾ ರಮೇಶ್, ರತ್ನಾಕರ್ ಶೆಟ್ಟಿ, ಶಚಿಂದ್ರ ಹೆಗಡೆ ಸೇರಿದಂತೆ ಹಲವರು ಭಾಗಿಯಾಗಿದ್ದರು..




Previous Post Next Post