ಖಾಸಗಿ ಬಸ್ ಹಾಗೂ ಕಾರಿನ ನಡುವೆ ಅಪಘಾತ - ಇಬ್ಬರಿಗೆ ಗಾಯ
ರಿಪ್ಪನ್ ಪೇಟೆ : ಶಿವಮೊಗ್ಗದಿಂದ ಕುಂದಾಪುರಕ್ಕೆ ತೆರಳುತ್ತಿದ್ದ ಖಾಸಗಿ ಬಸ್ ಹಾಗೂ ಆಲ್ಟೊ ಕಾರಿನ ನಡುವೆ ಇಂದು ಬೆಳಗ್ಗೆ ಅಪಘಾತ ಸಂಭವಿಸಿದ್ದು ಕಾರಿನ ಮುಂಭಾಗ ಸಂಪೂರ್ಣ ನುಜ್ಜು -ಗುಜ್ಜಾಗಿದೆ
ಕಾರಿನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ರಭಾನೆ ಮಾಡಲಾಗಿದೆ..
ಇಂದು ಬೆಳಗ್ಗೆ ಸೂಡೂರು ಗೇಟ್ ಸಮೀಪ ಈ ಅಪಘಾತ ನಡೆದಿದ್ದು ಅಪಘಾತಕ್ಕೆ ಕಾರಣ ಏನೆಂಬ ನಿಖರ ಮಾಹಿತಿ ತಿಳಿದು ಬಂದಿಲ್ಲ.. ಬಸ್ ಮುಂಭಾಗ ಹಾಗೂ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದ್ದು ಕಾರಿನಲ್ಲಿದ್ದ ಇಬ್ಬರನ್ನ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.. ಕಾರಿನಲ್ಲಿದ್ದವರು ಸಾಗರ ತಾಲೂಕು ಆವಿನಹಳ್ಳಿಯ ನಿವಾಸಿಗಳು ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ರಿಪ್ಪನ್ ಪೇಟೆ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..
Tags:
ಅಪಘಾತ ಸುದ್ದಿ