ಸರ್ಕಾರಿ ನೌಕರರು, ಅಧಿಕಾರಿಗಳು ಮತ್ತು ಶಾಸಕರು ಯಾರೇ ಆಗಲಿ ನಮಗೊಂದು ಬದ್ಧತೆ ಇದ್ದರೆ ಪ್ರಜಾಸೇವೆ ಅವಶ್ಯಕತೆ ಇರಲ್ಲ - ಆರಗ ಜ್ಞಾನೇಂದ್ರ Araga Jnanendra

ಸರ್ಕಾರಿ ನೌಕರರು, ಅಧಿಕಾರಿಗಳು ಮತ್ತು  ಶಾಸಕರು ಯಾರೇ ಆಗಲಿ ನಮಗೊಂದು ಬದ್ಧತೆ ಇದ್ದರೆ ಪ್ರಜಾಸೇವೆ ಅವಶ್ಯಕತೆ ಇರಲ್ಲ - ಆರಗ ಜ್ಞಾನೇಂದ್ರ 

ತೀರ್ಥಹಳ್ಳಿ : ರಾಜ್ಯದ ಮುಖ್ಯಮಂತ್ರಿಗಳಾದಂತಹ ಡಿ. ಕೆ. ಶಿವಕುಮಾರ್ ಅವರು ಅಧಿಕಾರ ವಹಿಸಿಕೊಂಡ ನಂತರ, ಇಡೀ ಸರ್ಕಾರಿ ಯಂತ್ರ ಜನರ ಮನೆ ಬಾಗಿಲಿಗೆ ಹೋಗಬೇಕು, ಜನರ ಬದುಕು ಸಹಜವಾಗಬೇಕು ಅನ್ನುವಂತಹ ಒಂದು ಉದ್ದೇಶದಿಂದ  ಈ ಒಂದು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ​ಎರಡನೇ ಮತ್ತು ನಾಲ್ಕನೇ ಶನಿವಾರ ಶಾಸಕರ ಅಧ್ಯಕ್ಷತೆಯಲ್ಲಿ 
ನೆರವೇರುತ್ತದೆ ಹಾಗೆಯೇ ಒಂದನೇ ಮತ್ತು ಮೂರನೇ ಶನಿವಾರ ಜಿಲ್ಲೆಯಲ್ಲಿ ಬೇರೆ ಬೇರೆ ಕಡೆ ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ  ಪ್ರಜಾಸೇವೆ ಕಾರ್ಯಕ್ರಮ ನಡೆಯುತ್ತದೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು..

​ತೀರ್ಥಹಳ್ಳಿಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಪ್ರಜಾಸೇವೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಾಸಕರ ಅಧ್ಯಕ್ಷತೆಯಲ್ಲಿ ಹಳ್ಳಿ ಹಳ್ಳಿಗೆ ಹೋಗಿ ನಾವು ಗ್ರಾಮಸಭೆಗಳನ್ನು ಮಾಡಿ, ಅರ್ಜಿಗಳನ್ನು ಸ್ವೀಕಾರ ಮಾಡುತ್ತಿದ್ದೆವು. ಒಂದು ಕಾಲದಲ್ಲಿ ಬಹಳ ದೊಡ್ಡ ಆಂದೋಲನವಾಗಿತ್ತು. ಆದರೆ ಈಗ ​ಅದು ನಿಂತುಹೋಗಿದೆ . 'ಸಕಾಲ' ಅಂತ ಹೇಳಿ ಏನು ನಮ್ಮ ಮಾನ್ಯ ಎಸ್. ಸುರೇಶ್ ಕುಮಾರ್ ಅವರು  ವಿಶೇಷವಾಗಿ, ಹಿಂದಿನ ಬಿಜೆಪಿ ಸರ್ಕಾರದ ನೇತೃತ್ವದಲ್ಲಿ ಜಾರಿಗೆ ತಂದಿದ್ದರು., ಅದು ಕೂಡ ಕಾರ್ಯಗತ ಪೂರ್ಣ ಆಗಲಿಲ್ಲ, ನೌಕರರು, ಅಧಿಕಾರಿಗಳು ಮತ್ತು  ಶಾಸಕರು ಯಾರೇ ಆಗಲಿ ನಮಗೊಂದು ಬದ್ಧತೆ ಇದ್ದರೆ ಇಂತಹ ಕಾರ್ಯಕ್ರಮಗಳ ಅವಶ್ಯಕತೆಯೇ ಇರುವುದಿಲ್ಲ ಎಂದರು..

ಅರ್ಜಿ ಬಂದ ತಕ್ಷಣ ಅದನ್ನ ಏನು ಮಾಡಬೇಕು, ಹೇಗೆ ಮಾಡಬೇಕು, ಅಂತ ಹೇಳಿ ಅರ್ಜಿ ಕೊಟ್ಟವರಿಗೆ ತಿಳಿವಳಿಕೆ ಹೋಗಬೇಕು. ಇಲ್ಲಿಯವರೆಗೆ ಅಂತಹದ್ದು ಆಗಿಲ್ಲ 
​ಅರ್ಜಿ ತೆಗೆದುಕೊಳ್ಳಲು ಬಾರಿ ದೊಡ್ಡ ಶ್ರಮ ಪಡಬೇಕು . ಅರ್ಜಿ ಕೊಡೋಕೆ ಮೂರ್ನಾಲ್ಕು ದಿವಸ ಕಚೇರಿಗೆ ಬರಬೇಕು, ನಾನೊಂದು ಅರ್ಜಿ ಕೊಟ್ಟು ಬಂದಿದ್ದೀನಿ' ಅಂತ ಕೊಟ್ಟ ತಕ್ಷಣ ಸಮಾಧಾನ ಪಟ್ಟುಕೊಂಡು ಹೋಗ್ತಾರೆ.ಆ ಅರ್ಜಿಗಳ ಕಥೆ ಏನಾಯ್ತು ಅಂತ ಹೇಳಿ ಯಾರಿಗೂ ಕೂಡ ಗೊತ್ತಾಗುವುದಿಲ್ಲ.
​ತಾಲೂಕ್ ಆಫೀಸೋ, ಎಂಎಲ್ಎ ಆಫೀಸೋ ಕಸದ ಬುಟ್ಟಿ ತುಂಬುತ್ತೆ ಹೊರತು, ಆ ಅರ್ಜಿಗೆ ಏನು ಕೆಲಸಗಳು ಆಗುವುದಿಲ್ಲ. 
ಈ ಕಾರಣಕ್ಕೆ ಒತ್ತು ಕೊಡುವುದಕ್ಕಾಗಿ ಸರ್ಕಾರಗಳು ಇಂತಹ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತವೆ ಎಂದರು..

ಈ ದೇಶದ ಪ್ರಧಾನಿ ಹಾಗೆಯೇ ಒಂದು ಮಾತು ಹೇಳಿದ್ದರು , 'ನಾನು ಪ್ರಧಾನಿ ಅಲ್ಲಪ್ಪ, ಪ್ರಧಾನ ಸೇವಕ' ಮುಖ್ಯಮಂತ್ರಿಗಳು ಸಹ ಹಾಗೆ ಹೇಳಿದ್ದರು.. ​ಹಾಗಾಗಿ, ನಾವು ಜನರಿಗೋಸ್ಕರ ಕೆಲಸ ಮಾಡಬೇಕೆ ಹೊರತು ಜನ ನಮಗಾಗಿ ಬರುವುದು ಅಲ್ಲ! ನಮ್ಮ ಮಾನಸಿಕತೆಯನ್ನು ಸ್ವಾತಂತ್ರ್ಯ ಬಂದು ಇಷ್ಟೊಂದು ವರ್ಷದಲ್ಲೂ ಕೂಡ ನಾವು ಬದಲಾವಣೆ ಮಾಡಿಕೊಂಡಿಲ್ಲ.. ಯಾರೋ ಅರ್ಜಿ ಕೊಡೋಕೆ ಬಂದಾಗ ಹೆದರಿ ಹೆದರಿ ಬೆನ್ನು ಬಗ್ಗಿಸಿಕೊಂಡು ನಿಲ್ಲಬೇಕು... ಅಂತಹ ಪರಿಸ್ಥಿತಿ ಆಗಬಾರದು ಎಂದರು..

ಆರ್ ಎಂ ಮಂಜುನಾಥ್ ಗೌಡ ಮಾತನಾಡಿ 19 ಕ್ಕೆ ತೀರ್ಥಹಳ್ಳಿಗೆ ಮುಖ್ಯಮಂತ್ರಿಗಳು ಬರುತ್ತಾರೆ, ಮುಖ್ಯಮಂತ್ರಿಗಳು ಮಲಗುವುದಿಲ್ಲ ಅವರು, 20 ಗಂಟೆ ಕೆಲಸ ಮಾಡ್ತಾರೆ. ನಾವು ಬೆಂಗಳೂರಿಗೆ ಹೋದರೆ ಮೊನ್ನೆ ಮೂರು ದಿವಸ ಅವರ ಜೊತೆಗಿದ್ದೆ, ಬೆಳಿಗ್ಗೆ 3:00 ಗಂಟೆಗೆ ಮಲಗ್ತಾರೆ.. ಇತ್ತೀಚಿಗೆ ಮುಖ್ಯಮಂತ್ರಿಗಳು ಯಶವಂತಪುರ ಎಪಿಎಂಸಿಯಲ್ಲಿ ಒಂದು ಈರುಳ್ಳಿ ಮೂಟೆ ಮೇಲೆ, ಇನ್ನೊಂದು ಆಲೂಗಡ್ಡೆ ಮೂಟೆ ಮೇಲೆ ಕೂತು ಅಲ್ಲಿ, ಅಲ್ಲಿಯ ಜನರ ಕಷ್ಟ-ಸುಖ ಮತ್ತು ವ್ಯಾಪಾರಸ್ಥರ, ರೈತರ ಬಗ್ಗೆ ಮಾತನಾಡ್ತಾ ಇದ್ರು. ಇಂತಹ ಮುಖ್ಯಮಂತ್ರಿ ಇದ್ದಾಗ ಆಡಳಿತ ಕೂಡ ಹಾಗೆ ಇರಬೇಕು ಎಂದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ರಂಜಿತ್, ಹೊಸನಗರ ತಹಸೀಲ್ದಾರ್ ಭರತ್, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಶೈಲಾ, ಪಟ್ಟಣ ಪಂಚಾಯತ್ ಅಧ್ಯಕ್ಷ ರತ್ನಾಕರ್ ಶೆಟ್ಟಿ, ಉಪಾಧ್ಯಕ್ಷರಾದ ಗೀತಾ ರಮೇಶ್, ಗ್ಯಾರೆಂಟಿ ಅನುಷ್ಠಾನ ಅಧ್ಯಕ್ಷರಾದ ಶಚಿಂದ್ರ ಹೆಗಡೆ ಸೇರಿ ಹಲವರು ಇದ್ದರು..



Previous Post Next Post