ಗೋ ಸಾಗಾಟ ಮಾಡಿದವನು ಹ್ಯಾಬಿಚುಯಲ್ - ಆರಗ ಜ್ಞಾನೇಂದ್ರ
ತೀರ್ಥಹಳ್ಳಿ : ಇಲ್ಲಿ ಗೋ ಸಾಗಾಟದ, ಗೋವುಗಳನ್ನ ಕೊಂಡು ಹೋಗಿ ಬಿಡಲಿಕ್ಕೆ ಪ್ರೋತ್ಸಾಹ ಕೊಡುವಂತಹ ಕೆಲಸ ನಡೆಯುತ್ತಿದೆ. ನಮ್ಮ ಪೊಲೀಸ್ ಇಲಾಖೆ ಕಣ್ಣಿಟ್ಟು ಇದನ್ನ ಹಿಡಿಯ ಬೇಕಾಗುತ್ತದೆ. ಅನೇಕ ಸಂದರ್ಭಗಳಲ್ಲಿ ನಾನು ಗಮನಿಸಿದ ಹಾಗೆ ಪೊಲೀಸರು ಕೂಡ ಶ್ಯಾಮಿಲಾಗುವಂತಹ, ಹಿಡಿದುಕೊಟ್ಟವರ ಮೇಲೆಯೇ ಕೇಸ್ ಹಾಕಿರುವ , ಅವರನ್ನೇ ಜೈಲಿಗೆ ಕಳುಹಿಸಿರ್ತಕ್ಕಂತಹ ಪ್ರಕರಣಗಳು ಇದ್ದಾವೆ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು..
ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು ಇದರ ಬಗ್ಗೆ ಬದ್ಧತೆಯಿಂದ ಕೆಲಸ ಮಾಡಬೇಕಾದದ್ದು ಪೊಲೀಸ್ ಇಲಾಖೆಯ ಕರ್ತವ್ಯ. ಮೊನ್ನೆ ದಿನ ಗೋವನ್ನು ಹಿಡಿದಿದ್ದಾರೆ, ಅವನು ಹ್ಯಾಬಿಚುಯಲ್ (habitual) . ಸಾಕಷ್ಟು ವರ್ಷದಿಂದ ಅದೇ ಕೆಲಸ ಮಾಡ್ತಾ ಇರುವವನು. ಅವನ ಮೇಲೆ ಕೇಸ್ ಹಾಕೋದು, ತಕ್ಷಣ ಬೇಲ್ ತೆಗೆದುಕೊಂಡು ಹೊರಗೆ ಬರ್ತಾನೆ . ಬೇಲ್ ಸಿಗದಂತ ಇರುವಂತಹ ರೀತಿಯಲ್ಲಿ ಗೋ ನಿಷೇಧ, ಗೋವಧೆ ನಿಷೇಧ ಮಸೂದೆಯನ್ನ ನಾನೇ ಗೃಹ ಸಚಿವನಾಗಿದ್ದಾಗ ಮಂಡನೆ ಮಾಡಿ ಅಂಗೀಕಾರ ಮಾಡಿದ್ದೇವೆ. ಅದರ ಪ್ರಕಾರ ಇವರು ಕೇಸ್ ಹಾಕಬೇಕು ಎಂದರು..
ಅಂತಹ ಕೇಸ್ ದಾಖಲು ಮಾಡಿದರೆ ಖಂಡಿತವಾಗಿಯೂ ಹೊರಗೆ ಬರಲು ಸಾಧ್ಯವಿಲ್ಲ. ಅದನ್ನು ನಾನು ಕೂಡ ಪೊಲೀಸ್ ಅಧಿಕಾರಿಗಳ ಜೊತೆಯಲ್ಲಿ, ಎಸ್ಪಿ ಅವರ ಜೊತೆನಲ್ಲಿ, ಐಜಿ ಅವರ ಜೊತೆನಲ್ಲಿ ಮಾತಾಡಿದ್ದೇನೆ, ಬಿಗಿ ಮಾಡುವಂತಹ ಅವಶ್ಯಕತೆ ಇದೆ ಎಂದರು..
Tags:
ಆರಗ ಜ್ಞಾನೇಂದ್ರ