ಸೆ. 7 ರಂದು ತೀರ್ಥಹಳ್ಳಿಯಲ್ಲಿ ಎರಡು ಪಾದಯಾತ್ರೆ - ಕುತೂಹಲ ಮೂಡಿಸಿದ ಆರ್ ಎಂ ಎಂ ನಡೆ Thirthahalli Politics

ಸೆ. 7 ರಂದು ತೀರ್ಥಹಳ್ಳಿಯಲ್ಲಿ ಎರಡು ಪಾದಯಾತ್ರೆ - ಕುತೂಹಲ ಮೂಡಿಸಿದ ಆರ್ ಎಂ ಎಂ ನಡೆ 

ಆರಗ - ಕಿಮ್ಮನೆ ನಡುವೆ ಸಿಲುಕಿ ಕರಕುಚ್ಚಿ ಅಪ್ಪಚ್ಚಿ..!

ತೀರ್ಥಹಳ್ಳಿ : ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ತೀರ್ಥಹಳ್ಳಿಯಲ್ಲಿ ಬೃಹತ್ ಪಾದಯಾತ್ರೆಗಳು ಸಪ್ಟೆಂಬರ್ 7ರಂದು ನಡೆಯಲಿದೆ.. ಒಂದು ಮಾಜಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ಪಕ್ಷಾತೀತವಾಗಿ ಕೈಮರದಿಂದ ಪಾದಯಾತ್ರೆ ನಡೆದರೆ, ಮಾಜಿ ಶಿಕ್ಷಣ ಸಚಿವರಾದ ಕಿಮ್ಮನೆ ರತ್ನಾಕರ್ ಅವರ ನೇತೃತ್ವದಲ್ಲಿ ಬಿಂತ್ಲಾ ಗ್ರಾಮದಿಂದ ಪಾದಯಾತ್ರೆ ನಡೆಯಲಿದೆ.. 
ಈ ಎರಡು ಪಾದಯಾತ್ರೆಗಳ ನಡುವೆ ಸಿಲುಕಿ ಹಾಕಿಕೊಂಡಿದ್ದು ಮಾತ್ರ ಸಹಕಾರಿ ಕ್ಷೇತ್ರದ ನಾಯಕ ಮಂಜುನಾಥ್ ಗೌಡ...

ಹೌದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಹೊಸನಗರದಲ್ಲಿ ಆರ್ ಎಂ ಮಂಜುನಾಥಗೌಡರ ನೇತೃತ್ವದಲ್ಲಿ ಪಕ್ಷಾತೀತವಾಗಿ ಕಸ್ತೂರಿರಂಗನ ವರದಿಯನ್ನು ವಿರೋಧಿಸಿ ಬೃಹತ್ ಪಾದಯಾತ್ರೆ ಹಾಗೂ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.. ಈ ಪಾದಯಾತ್ರೆಯಲ್ಲಿ ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಹಾಗೂ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬೇಳೂರು ಗೋಪಾಲಕೃಷ್ಣ ಭಾಗಿಯಾಗಿದ್ದರು..  ಹೊಸನಗರದ ಉಸ್ತುವಾರಿಯನ್ನ ವಹಿಸಿಕೊಂಡಿದ್ದ ಮಂಜುನಾಥಗೌಡರು ಪಾದಯಾತ್ರೆಯನ್ನ ಅತ್ಯಂತ ಯಶಸ್ವಿಗೊಳಿಸಿದ್ದರು.. ಆದರೆ ಈಗ ತೀರ್ಥಹಳ್ಳಿ ನಡೆಯುವ ಪಾದಯಾತ್ರೆಯಲ್ಲಿ  ಸಹ ಕಾರ್ಯಕ್ಷೇತ್ರದ ನಾಯಕರು ಸಿಲುಕಿ ಹಾಕಿಕೊಂಡಂತೆ ಕಾಣಿಸುತ್ತಿದೆ.. ಒಂದು ಕಾಂಗ್ರೆಸ್ ಪಕ್ಷದಿಂದಲೇ ನಡೆಯುವ ಪಾದಯಾತ್ರೆಯಾಗಿದ್ದು ಮತ್ತೊಂದು ಪಕ್ಷಾತೀತವಾಗಿ ಪಾದಯಾತ್ರೆ ನಡೆಯುತ್ತಿದೆ.  ಈ ಎರಡರ ಮಧ್ಯೆ ತಾವು ಯಾವ ಕಡೆ ಹೋಗಬೇಕು ಎಂಬುದಾಗಿ ಆರ್ ಎಂ ಎಂ ತಲೆ ಕೆಡಿಸಿಕೊಂಡಂತಿದೆ..

ಆರಗ - ಕಿಮ್ಮನೆ ನಡುವೆ ಸಿಲುಕಿ ಕರಕುಚ್ಚಿ ಅಪ್ಪಚ್ಚಿ..!

ತೀರ್ಥಹಳ್ಳಿಯಲ್ಲಿ ಇಬ್ಬರೂ ಸಹ ಪ್ರಭಾವಿ ವ್ಯಕ್ತಿಗಳು,  ಇಬ್ಬರೂ ಸಹ ಶಾಸಕರು ಹಾಗೂ ಸಚಿವರಾಗಿದ್ದವರು. ಈಗ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ತೀರ್ಥಹಳ್ಳಿ ಕ್ಷೇತ್ರ ಮಾತ್ರ ರಣರಂಗ ಯುದ್ಧವಾಗಿ ಕಾಣತೊಡಗಿದೆ.. ಮುಂದಿನ ನಾಯಕರು ಯಾರು ಎಂಬ ಚರ್ಚೆ ನಡುವೆಯೇ, ಒಬ್ಬರ ಮೇಲೊಬ್ಬರು ಹರಿ ಹಾಯಲು ಶುರು ಮಾಡಿದ್ದಾರೆ.. ಸದ್ಯದ ಮಟ್ಟಿಗೆ ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ  ಆರ್ ಎಂ ಮಂಜುನಾಥಗೌಡರು ಕಸ್ತೂರಿ ರಂಗನ ವರದಿಯ ವಿಚಾರವಾಗಿ ಎತ್ತ ಮುಖ ಹಾಕುತ್ತಾರೆ ಎಂಬುದೇ ಈಗ ಯಕ್ಷಪ್ರಶ್ನೆಯಾಗಿದೆ .. ಇದನ್ನು ನೋಡಿದಂತಹ ತೀರ್ಥಹಳ್ಳಿಯ ಜನ ಆರಗ - ಕಿಮ್ಮನೆ ನಡುವೆ ಸಿಲುಕಿ ಕರಕುಚ್ಚಿ ಅಪ್ಪಚ್ಚಿಯಾಗಿದ್ದಾರೆ ಎಂಬುದಾಗಿ ಮಾತನಾಡುತ್ತಿದ್ದಾರೆ..

ಹೊಸನಗರ ಹಾಗೂ ತೀರ್ಥಹಳ್ಳಿಯ ಕಸ್ತೂರಿ ರಂಗನ್ ವರದಿಯ ಉಸ್ತುವಾರಿ ಬಗ್ಗೆ ಚರ್ಚೆಯಾಗಿತ್ತಾ ..?  

ಹೌದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಎರಡು ತಾಲೂಕಿನಲ್ಲೂ ಕಸ್ತೂರಿರಂಗನ್ ವರದಿ ವಿಚಾರವಾಗಿ ಈಗಾಗಲೇ ಹೋರಾಟ ನಡೆಯುತ್ತಿದೆ.. ಹಾಗಾಗಿ ಆರಗ ಜ್ಞಾನೇಂದ್ರ ಹಾಗೂ ಆರ್ ಎಂ ಮಂಜುನಾಥಗೌಡರು ಆಪ್ತರಾಗಿರುವ ಕಾರಣದಿಂದ ಹೊಸನಗರದ ಉಸ್ತುವಾರಿಯನ್ನ ಆರ್‌ಎಂ ತೀರ್ಥಹಳ್ಳಿಯ ಉಸ್ತುವಾರಿಯನ್ನ ಆರಗ ಬದಲಾವಣೆ ಮಾಡಿಕೊಳ್ಳುವುದಾಗಿ ಮಾತನಾಡಿಕೊಂಡಿದ್ರ?  ಎಂಬ ಮಾತುಗಳು ಕೇಳಿ ಬರುತ್ತಿದ್ದು ಇದರ ನಡುವೆಯೇ ಸೆಪ್ಟೆಂಬರ್ 7 ರಂದು ಕಿಮ್ಮನೆ ರತ್ನಾಕರ್ ನೇತೃತ್ವದಲ್ಲಿ ನಡೆಯುತ್ತಿರುವ ಪಾದಯಾತ್ರೆ ಈಗ ಆರಗ ಹಾಗೂ ಆರ್ ಎಂ ಎಂ ಗೆ ಸಂಕಷ್ಟಕ್ಕೆ ಈಡು ಮಾಡಿದೆ..

ಮುಂದಿನ ಬಾರಿ ಬಿಜೆಪಿ ಸೇರ್ತಾರಾ ಆರ್ ಎಂ ಎಂ..?

ಹೌದು ಇದೊಂದು ವಾಕ್ಯ ಸಾಮಾನ್ಯವಾಗಿ ತೀರ್ಥಹಳ್ಳಿಯ ಸಾರ್ವಜನಿಕರಲ್ಲಿ ಪ್ರಶ್ನೆಯಾಗತೊಡಗಿದೆ.. ಆರ್ ಎಂ ಮಂಜುನಾಥ ಗೌಡರು, ಇತ್ತೀಚಿಗೆ ಆರಗ ಜ್ಞಾನೇಂದ್ರ ಅವರ ಜೊತೆಗೆ ಪ್ರತಿಯೊಂದು ವೇದಿಕೆಯನ್ನು ಕೂಡ ಹಂಚಿಕೊಳ್ಳುತ್ತಿದ್ದು ಅವರ ಜೊತೆಗೆ ಅತ್ಯಂತ ಆಪ್ತರಾಗಿ ವರ್ತನೆ ಮಾಡುತ್ತಿದ್ದಾರೆ.. ಇಲ್ಲಿಯವರೆಗೂ ಯಾವುದೇ ಸಭೆ, ಕಾರ್ಯಕ್ರಮಗಳಲ್ಲಿ ಆರಗ ಜ್ಞಾನೇಂದ್ರ ಅವರ ವಿರುದ್ಧವಾಗಿ ಒಂದೇ ಒಂದು ವಾಕ್ಯವನ್ನು ಕೂಡ ಮಾತನಾಡದ ಆರ್‌ಎಂಎಂ ಮುಂದಿನ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಸೇರ್ಪಡೆ ಆಗ್ತಾರಾ?  ಈ ಕಾರಣಕ್ಕೆ ಜ್ಞಾನೇಂದ್ರ ಆವರ ಜೊತೆಗೆ ಅತ್ಯಂತ ವಿಶ್ವಾಸ ಅರ್ಹವಾಗಿದ್ದಾರ? ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉದ್ಭವವಾಗಿದೆ..

ಧರ್ಮೇಶ್ ಪತ್ರಿಕಾಗೋಷ್ಠಿಯ ಹೈಲೈಟ್ ವಾಕ್ಯ..!

ತೀರ್ಥಹಳ್ಳಿಯ ಕಾಂಗ್ರೆಸ್ ಮುಖಂಡರಾಗಿದ್ದ ಧರ್ಮೇಶ್ ಅವರು ಪತ್ರಿಕಾಗೋಷ್ಠಿಯೊಂದರಲ್ಲಿ ಆರ್ ಎಂ ಮಂಜುನಾಥಗೌಡರು ಬಹಳ ಬುದ್ಧಿವಂತರು, ಯಾವಾಗ ಬೇಕಾದರೂ ಅವರು ಬದಲಾಗುತ್ತಾರೆ, ಚುನಾವಣಾ ಸಂದರ್ಭದಲ್ಲಿ ಬಿಜೆಪಿ ಸೇರಿದರು ಅಚ್ಚರಿಲ್ಲ ಎಂಬ ಮಾತು ಹೇಳಿದ್ದರು.. ಇದು ಆ ಪತ್ರಿಕಾಗೋಷ್ಠಿಯ ಹೈಲೈಟ್ ವಾಕ್ಯ ಕೂಡ ಆಗಿತ್ತು.. ಹಾಗಾಗಿ ಆರ್ ಎಂ ಬಿಜೆಪಿ ಸೇರಬಹುದೇನೋ ಎಂಬ ಮಾತುಗಳು ಕೂಡ ಈಗ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ..






Previous Post Next Post