ಕುರುವಳ್ಳಿಯ ಯುವಕ ಸಂಘದಿಂದ 50 ನೇ ವರ್ಷದ ಗಣೇಶೋತ್ಸವ - ಈ ಬಾರಿ ಎಷ್ಟು ದಿನ ಏನೆಲ್ಲಾ ಕಾರ್ಯಕ್ರಮ ಇರುತ್ತೆ? Kuruvalli Ganeshotsava

ಕುರುವಳ್ಳಿಯ ಯುವಕ ಸಂಘದಿಂದ 50 ನೇ ವರ್ಷದ ಗಣೇಶೋತ್ಸವ - ಈ ಬಾರಿ ಎಷ್ಟು ದಿನ ಏನೆಲ್ಲಾ ಕಾರ್ಯಕ್ರಮ ಇರುತ್ತೆ?

ತೀರ್ಥಹಳ್ಳಿ : ಕುರುವಳ್ಳಿಯ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪನೆ ಮಾಡಲಾಗುವ ಗಣೇಶೋತ್ಸವ ಈ ಬಾರಿ ಅತ್ಯಂತ ವೈಭವದಿಂದ ನಡೆಯಲಿದ್ದು ಅದಕ್ಕೆ ಮೂಲ ಕಾರಣ ಈ ಬಾರಿ  50 ನೇ ವರ್ಷದ ಗಣೇಶೋತ್ಸವವನ್ನು ಪ್ರತಿಷ್ಠಾಪನೆ ಮಾಡಲಾಗುತ್ತಿದೆ.. ಇದರ ಹಿನ್ನಲೆ ವಿವಿಧ ಕಾರ್ಯಕ್ರಮಗಳು ಜರುಗಲಿದೆ.. ಸೆ. 14 ರಿಂದ ಸೆ. 26 ರವರೆಗೆ ಒಟ್ಟು 13 ದಿನಗಳ ಪರ್ಯಂತ ಕಾರ್ಯಕ್ರಮಗಳು ಜರುಗಲಿದೆ.. ಈ ಬಾರಿ ಅನಿಲ್ ಅವರ ಅಧ್ಯಕ್ಷತೆಯಲ್ಲಿ ಎಲ್ಲಾ ಕಾರ್ಯಕ್ರಮಗಳು ಜರುಗಲಿದೆ..

ಈ ಬಾರಿ ಏನೆಲ್ಲಾ ಕಾರ್ಯಕ್ರಮ ಇರುತ್ತೆ? 

ಸೆ. 14 ರಂದು ಶ್ರೀ ಸಿದ್ದಿವಿನಾಯಕ ಸ್ವಾಮಿಯ ಪ್ರತಿಷ್ಠಾಪನೆ, ಬೆಳಗ್ಗೆ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ಇರಲಿದೆ.

ದಿನಾಂಕ : 15-09-2026 ಮಂಗಳವಾರ ಸಂಜೆ 5 ರಿಂದ
"ಮುತೈದೆಯರಿಗೆ ಬಾಗೀನ" ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ.

ದಿನಾಂಕ : 16-09-2026ಬುಧವಾರ ಬೆಳಿಗ್ಗೆ 10 ರಿಂದ
"ಮಹಿಳೆಯರಿಗೆ ರಂಗೋಲಿ ಸ್ಪರ್ಧೆ" ,  ರಂಗೋಲಿಗೆ ಬೇಕಾದ ರಂಗೋಲಿ ಬಣ್ಣ ಇತ್ಯಾದಿ. ಸಾಮಾಗ್ರಿಗಳನ್ನು ಸ್ಪರ್ಧಿಗಳೇ ತರತಕ್ಕದ್ದು ರಂಗೋಲಿ ಪುಡಿಯನ್ನು ಉಪಯೋಗಿಸಿಯೇ ಬರೆಯಬೇಕು. ಪೆನ್ಸಿಲ್ ಇತ್ಯಾದಿಗಳಿಗೆ ಅವಕಾಶವಿಲ್ಲ.
ಸ್ಥಳ : ವಿವೇಕ ಮಂಟಪ, ಕುರುವಳ್ಳಿ

ಬೆಳಿಗ್ಗೆ 11ರಿಂದ ಮಹಿಳೆಯರಿಗೆ : ಮಡಿಕೆ ಒಡೆಯುವ ಸ್ಪರ್ಧೆ, ಪುರುಷರಿಗೆ : ಹಗ್ಗಜಗ್ಗಾಟ ನಡೆಯಲಿದೆ..
(ಕುರುವಳ್ಳಿ, ಬಿ.ಅಗ್ರಹಾರ ಮತ್ತು ಮೇಲಿನಕುರುವಳ್ಳಿ
ಗ್ರಾ.ಪಂ. ವ್ಯಾಪ್ತಿಯ ನಿವಾಸಿಗಳಿಗೆ ಮಾತ್ರ ಅವಕಾಶ) 

ದಿನಾಂಕ : 17-09-2026ರ ಬೆಳಿಗ್ಗೆ 10 ರಿಂದ ಮಹಿಳೆಯರಿಗೆ : ಹಗ್ಗ ಜಗ್ಗಾಟ ಪುರುಷರಿಗೆ : ಮಲ್ಲ ಕಂಬ ಸ್ಪರ್ಧೆ ನಡೆಯಲಿದೆ.. (ಕುರುವಳ್ಳಿ, ಬಿ.ಅಗ್ರಹಾರ ಮತ್ತು ಮೇಲಿನಕುರುವಳ್ಳಿ ಗ್ರಾ.ಪಂ. ವ್ಯಾಪ್ತಿಯ ನಿವಾಸಿಗಳಿಗೆ ಮಾತ್ರ ಅವಕಾಶ) ಎಲ್ಲ ಸ್ಪರ್ಧೆಗಳಲ್ಲಿ ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರಲಿದೆ.

ದಿನಾಂಕ 18-09-2026 ಶುಕ್ರವಾರ ಬೆಳಗ್ಗೆ 10ಗಂಟೆಗೆ
ಪ್ರಖ್ಯಾತ ನಾಟಿ ವೈದ್ಯ ಡಾ|| ಸತ್ಯ ಪ್ರಕಾಶ್‌ಶಾಲಿಮೋ ಆಯುರ್ವೇದ ಆಸ್ಪತ್ರೆ ಮಡುಗುಣಿ ಬಾಳೇಹೊನ್ನೂರು ಇವರಿಂದ ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗಿದ್ದು ಎಲ್ಲಾ ತರದ ರೋಗಗಳ ತಪಾಸಣೆ ಮತ್ತು ಚಿಕಿತ್ಸೆ ನೀಡಲಿದ್ದಾರೆ. 

ಹಾಗೂ ಸಂಜೆ 7 ಕ್ಕೆ  ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ..

ದಿನಾಂಕ 19-09-2026 ಶನಿವಾರ ಸಂಜೆ 7 ಕ್ಕೆ  ಸರ್ವಜ್ಞ ನೃತ್ಯ ತಂಡ (ಯಕ್ಷಗಾನ), ಮೇಲಿನ ಕುರುವಳ್ಳಿ ಇವರಿಂದ ನೃತ್ಯ ವೈಭವ ನಡೆಯಲಿದೆ..

ದಿನಾಂಕ : 20-09-2026 ಭಾನುವಾರ ಬೆಳಿಗ್ಗೆ 9-00ರಿಂದ
ಆದರ್ಶ ಆಸ್ಪತ್ರೆ, ಉಡುಪಿ ಸಹಯೋಗದೊಂದಿಗೆ ಉಚಿತ ಆರೋಗ್ಯ ಶಿಬಿರ  ( ರಕ್ತಪರೀಕ್ಷೆ : ಶುಗರ್, ಕೊಲೆಸ್ಟ್ರಾಲ್, ರಕ್ತದ ಗುಂಪು ಬಿ.ಪಿ ಮತ್ತು ಇಸಿಜಿ ಪರೀಕ್ಷೆ) ನಡೆಯಲಿದೆ.
ಸ್ಥಳ : ನಾಗರತ್ನ ಸಭಾಭವನ, ಕುರುವಳ್ಳಿ - ತೀರ್ಥಹಳ್ಳಿ

ಹಾಗೂ ಸಂಜೆ ಸಂಜೆ  7 ಕ್ಕೆ ಪ್ರಖ್ಯಾತ ಹಿನ್ನಲೆ ಗಾಯಕರಿಂದ ಸಂಗೀತ ಸಂಜೆ (ಹಳೆಯ ಮತ್ತು ಹೊಸ ಚಿತ್ರಗೀತೆಗಳ ಸಂಗಮ) ಸರಿಗಮಪ ವಿನ್ನರ್ ಗಿರೀಶ್ ಸಾಗರ್,  ಮಲೆನಾಡ ಕೋಗಿಲೆ ಸೀಸನ್ 2ರ ವಿಜೇತ ಕಾಂತಾರಾ ಚಲನಚಿತ್ರ ಖ್ಯಾತಿಯ ನಟ ಪೃಥ್ವಿಗೌಡ,  ನಮ್ಮೂರ ಪ್ರತಿಭಾವಂತ ಕಲಾವಿದೆ ನಿಧಿ ಸುರೇಶ್ ಸೇರಿ ಹಲವರು ಭಾಗಿಯಾಗಲಿದ್ದಾರೆ..

ದಿನಾಂಕ : 21-09-2026 ರ ಸೋಮವಾರ ಸಂಜೆ  7ಕ್ಕೆ 
ಕಲಾ ತಂಡ ಮಂಗಳೂರು ಇವರಿಂದ ಕನ್ನಡ ನಾಟಕ "ಶಿವಧೂತ ಗುಳಿಗೆ" ನಡೆಯಲಿದೆ..

ದಿನಾಂಕ 22-09-2026 ಮಂಗಳವಾರ ಸಂಜೆ 7 ಕ್ಕೆ ಮಂಜುಳಾ ಕೆ. ಇವರ ಸಾರಥ್ಯದಲ್ಲಿ ಸೃಷ್ಟಿ ಕಲಾತಂಡ ರಿ. ಮೇಲಿನಕುರುವಳ್ಳಿ ಇವರಿಂದ  ಸಾಂಸ್ಕೃತಿಕ ಕಾರ್ಯಕ್ರಮ : ನೃತ್ಯ (ಯಕ್ಷಗಾನ)   (ಕೇರಳದ ಸುಪ್ರಸಿದ್ಧ ದೈವೀ ಕಲಾಪ್ರಾಕಾರ ತೆಯ್ಯಂ ಪ್ರಮುಖ ಆಕರ್ಷಣೆ) ನಡೆಯಲಿದೆ..

ದಿನಾಂಕ 23-09- 2026 ಬುಧವಾರ ಸಂಜೆ 7 ಕ್ಕೆ ಸರಿಗಮಪ ವಾದ್ಯವೃಂದ ಬೆಂಗಳೂರು ಇವರಿಂದ ಆರ್ಕೆಸ್ಟ್ರಾ ಕಾರ್ಯಕ್ರಮ ನಡೆಯಲಿದೆ.
ವಿಶೇಷ ಅತಿಥಿ ಕಲಾವಿದರಾಗಿ ಸೋನಿ ಸೂಪರ್ ಸ್ಟಾರ್ ಸಿಂಗರ್ 3 ಝೀ ಸರಿಗಮಪ ಅವಾರ್ಡ್ ಪಡೆದ ಗಾಯಕಿ
ದಿಯಾಹೆಗಡೆ ಸಾಗರ  ಮತ್ತು ಪ್ರಖ್ಯಾತ ಗಾಯಕ :
ಸಂದೇಶ್ ನಿರುಮಾರ್ಗ,  ಸುಪ್ರಸಿದ್ಧ ಗಾಯಕಿ : ಅನನ್ಯ ಭಗತ್  ಮತ್ತು ಕರ್ನಾಟಕದಲ್ಲಿ ಪ್ರಸಿದ್ದಿ ಪಡೆದಿರುವ ಸ್ಮಾರ್ಟ್ ಡ್ಯಾನ್ಸ್ ತಂಡ ಶಿರಸಿ, ಇವರಿಂದ ನೃತ್ಯ ವೈಭವ ಕಾರ್ಯಕ್ರಮ ನಡೆಯಲಿದೆ..

ದಿನಾಂಕ 24-09-2026 ಗುರುವಾರ ಸಂಜೆ 7 ಕ್ಕೆ ರಾಜರಾಜೇಶ್ವರಿ ನೃತ್ಯ ಕಲಾ ಕೇಂದ್ರ, ಕೆ ಸಿ ರಸ್ತೆ ಇವರಿಂದ ಭರತನಾಟ್ಯ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ..

ದಿನಾಂಕ : 25-09-2026 ಶುಕ್ರವಾರ ಮಧ್ಯಾಹ್ನ - 12ಕ್ಕೆ ಸಾಮೂಹಿಕ ಸತ್ಯನಾರಾಯಣ ವ್ರತ ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಅನ್ನಸಂತರ್ಪಣೆ ಹಾಗೂ 
ಸಂಜೆ : 7ಕ್ಕೆ ರಂಗಪೂಜೆ ನಡೆಯಲಿದೆ 

ದಿನಾಂಕ - 26-09-2026 ಶನಿವಾರ ಬೆಳಗ್ಗೆ : 10-40ಕ್ಕೆ ಮಹಾಪೂಜೆ ಮಂಗಳವಾದ್ಯ, ನಾಸಿಕ್ ಬ್ಯಾಂಡ್, ಹುಲಿವೇಷ, ವಿಶೇಷ ಸ್ಥಬ್ದ ಚಿತ್ರಗಳು, ವಿವಿಧ ನೃತ್ಯ ವೈಭವ ಸ್ಥಳೀಯ ಕಲಾವಿದರಿಂದ ಸಮೂಹನೃತ್ಯ, ಆಕರ್ಷಕ ಸಿಡಿಮದ್ದುಗಳೊಂದಿಗೆ ಶ್ರೀ ಸ್ವಾಮಿಯಪುರೋತ್ಸವ ನಂತರ  "ತುಂಗಾನದಿಯಲ್ಲಿ ಸ್ವಾಮಿಯ ವಿಸರ್ಜನೆ' ನಡೆಯಲಿದೆ..

ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಪ್ರತಿಯೊಬ್ಬರು ಭಾಗಿಯಾಗಿ 
ತನು - ಮನ - ಧನ ಸಹಕಾರ ನೀಡಬೇಕು ಎಂದು ಸಮಿತಿಯವರು ಮನವಿ ಮಾಡಿದ್ದಾರೆ..







Previous Post Next Post