ಶೇಡ್ಗಾರ್ ಸಮೀಪ ಗೂಡ್ಸ್ ಗಾಡಿ ಮತ್ತು ಸ್ಕೂಟಿ ನಡುವೆ ಅಪಘಾತ : ಓರ್ವನ ಸ್ಥಿತಿ ಗಂಭೀರ Tth

ಶೇಡ್ಗಾರ್ ಸಮೀಪ  ಗೂಡ್ಸ್ ಗಾಡಿ ಮತ್ತು ಸ್ಕೂಟಿ ನಡುವೆ  ಅಪಘಾತ : ಓರ್ವನ ಸ್ಥಿತಿ ಗಂಭೀರ 

ತೀರ್ಥಹಳ್ಳಿ : ಗೂಡ್ಸ್ ಗಾಡಿ ಮತ್ತು ಸ್ಕೂಟಿ ನಡುವೆ ಅಪಘಾತ ಸಂಭವಿಸಿ ಓರ್ವನ ಸ್ಥಿತಿ ಗಂಭೀರವಾಗಿರುವ ಘಟನೆ ಶೇಡ್ಗಾರ್ ಸಮೀಪ ನಡೆದಿದೆ..

ಮೃಗಾವಧೆ ದೇವಸ್ಥಾನದಿಂದ  ದೇವಂಗಿಗೆ ಸ್ಕೂಟಿಯಲ್ಲಿ ತೆರಳುತ್ತಿದ್ದ ದಂಪತಿಗಳಿಗೆ ಕಟ್ಟೆಹಕ್ಕಲಿನಿಂದ ಕುದುರೆಗುಂಡಿಗೆ ಹೋಗುವ ಗೂಡ್ಸ್ ಗಾಡಿಯೊಂದು ಶೇಡ್ಗಾರ್ ನ ಅರಮನೆಕೇರಿ ವೃತ್ತದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರನಿಗೆ ಬಾರಿ ಪೆಟ್ಟಾಗಿದ್ದು ಆತನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಬಂದಿದೆ.

ಹಿಂಬದಿ ಕುಳಿತಿದ್ದ ಮಹಿಳೆ ಅಪಾಯದಿಂದ ಪಾರಾಗಿದ್ದು, ಗಾಯಗೊಂಡಿದ್ದ ವ್ಯಕ್ತಿಯನ್ನು ಕೂಡಲೇ ಕಟ್ಟೆಹಕ್ಕಲಿನ 
ಆಸ್ಪತ್ರೆಗೆ ರವಾನಿಸಿ ಚಿಕಿತ್ಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ
Previous Post Next Post