ಈದ್ ಮಿಲಾದ್ ಹಿನ್ನೆಲೆ - ಜಿಲ್ಲಾಧಿಕಾರಿಗಳ ಆದೇಶದಲ್ಲಿ ಏನಿದೆ?
ಶಿವಮೊಗ್ಗ : ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲಾದ್ಯಂತ ಶಾಂತಿ ಸುವ್ಯವಸ್ಥೆಯನ್ನ ಕಾಪಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ.
ಹಬ್ಬದ ಆಚರಣೆ ವೇಳೆ ಡಿಜೆ, ಬೈಕ್ ರ‍್ಯಾಲಿ, ಕಲರ್ ಪೇಪರ್ ಬ್ಲಾಸ್ಟಿಂಗ್ ಮಾಡುವುದು, ಸಿಡಿಮದ್ದನ್ನ ಸಿಡಿಸುವುದು, ಸಂಪೂರ್ಣವಾಗಿ ನಿಷೇಧಿಸುವಂತೆ ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕಳವಟ್ಟಿ ಆದೇಶಿಸಿದ್ದಾರೆ.. ಈ ನಿರ್ಬಂಧವೂ ಆಗಸ್ಟ್ 26 ರಿಂದ ಆಗಸ್ಟ್ 28 ರವರೆಗೆ ಜಿಲ್ಲಾದ್ಯಂತ ಕಟ್ಟುನಿಟ್ಟಾಗಿ ಜಾರಿಯಲ್ಲಿರಲಿದೆ ಎಂದು ತಿಳಿಸಿದ್ದಾರೆ..
ಜಿಲ್ಲೆಯ ಎಲ್ಲಾ ನಾಗರಿಕರು, ಸಂಘಟನೆಗಳು, ಹಬ್ಬಗಳ ಆಯೋಜಕರು, ಜಿಲ್ಲಾಡಳಿತದ ಈ ಕೆಟ್ಟು ನಿಟ್ಟಿನ ನಿಯಮಗಳನ್ನ ಪಾಲಿಸುವಂತೆ ಹಾಗೂ ಈದ್ ಮಿಲಾದ್ ಹಬ್ಬವನ್ನು ಶಾಂತಿಯುತವಾಗಿ ಆಚರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ..
Tags:
ಶಿವಮೊಗ್ಗ ಸುದ್ದಿ