ಐಷಾರಾಮಿ ಕಾರಿನಲ್ಲಿ ಜಾನುವಾರು ಕಳವು: ಇಬ್ಬರು ಆರೋಪಿಗಳ ಬಂಧನ
ರಿಪ್ಪನಪೇಟೆ : ಐಷಾರಾಮಿ ಕಾರಿನಲ್ಲಿ ಜಾನುವಾರು ಕಳವು ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿ ಕಳವು ಮಾಡಿದ್ದ ಜಾನುವಾರನ್ನು ಸುರಕ್ಷಿತವಾಗಿ ವಶಕ್ಕೆ ಪಡೆದು ಗೋಶಾಲೆಗೆ ಒಪ್ಪಿಸಿದ್ದಾರೆ.
ರಿಪ್ಪನಪೇಟೆ ನಿವಾಸಿ ದೇವರಾಜ್ @ ಕುಶನ್ ದೇವರಾಜ್ ಅವರು ಜುಲೈ 4ರಂದು ರಿಪ್ಪನಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಪ್ರಕಾರ, ಜುಲೈ 3ರಂದು ಮುಂಜಾನೆ ಸುಮಾರು 3.15 ಗಂಟೆ ವೇಳೆಗೆ ರಿಪ್ಪನಪೇಟೆ–ಸಾಗರ ರಸ್ತೆಯ ವೀರ ಸಾವರ್ಕರ್ ರಸ್ತೆಯ ತಿರುವಿನ ಬಳಿ ಇದ್ದ ಜಾನುವಾರನ್ನು ಅಪರಿಚಿತರು ಕಾರಿನಲ್ಲಿ ಬಂದು ವಾಹನದ ಡಿಕ್ಕಿಯಲ್ಲಿ ಹಾಕಿಕೊಂಡು ಕಳವು ಮಾಡಿಕೊಂಡು ಪರಾರಿಯಾಗಿದ್ದರು.
ಈ ಸಂಬಂಧ ರಿಪ್ಪನಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿತ್ತು.
ಅಮೀರ್ ಸುಹೈಲ್ @ ಅಯಾನ್ (26), ಮಹಮ್ಮದ್ ಇಸ್ರಾರುಲ್ ಖಾನ್ (21) ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು ಬಂಧಿತರಿಂದ ಕಳವು ಮಾಡಲಾಗಿದ್ದ ಜಾನುವಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಜಾನುವಾರದ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅದನ್ನು ಗೋಶಾಲೆಗೆ ಒಪ್ಪಿಸಲಾಗಿದೆ.
Tags:
ರಿಪ್ಪನ್ ಪೇಟೆ ಸುದ್ದಿ